ಫೋರ್ಡ್ ಮಸ್ಟಾಂಗ್ ಸಾಗಿ ಬಂದ ಹಾದಿಯತ್ತ ಹದ್ದು ನೋಟ

By Nagaraja

'ಮಸ್ಟಾಂಗ್' ಅಮೆರಿಕದ ಪ್ರತಿಷ್ಠಿತ ಹಾಗೂ ಜನಪ್ರಿಯ ಫೋರ್ಡ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಐಕಾನಿಕ್ ಕಾರಾಗಿದೆ. ಸರಿ ಸುಮಾರು 52 ವರ್ಷಗಳ ಹಿಂದೆ ಅಂದರೆ 1964ನೇ ಇಸವಿಯಲ್ಲಿ ಫೋರ್ಡ್ ಮಸ್ಟಾಂಗ್ ನಿರ್ಮಾಣ ಆರಂಭವಾಗಿದ್ದು, ವರ್ಷಗಳು ಉರುಳಿದಂತೆ ತಲೆಮಾರಿಂದ ತಲೆಮಾರಿಗೆ ಬದಲಾವಣೆಗಳನ್ನು ಕಂಡಿದೆ.

ಪ್ರಸ್ತುತ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರು 2016ನೇ ಸಾಲಿನಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾಗಿರುವಂತೆಯೇ ಈ ವಿಶೇಷ ಲೇಖನವನ್ನು ಡ್ರೈವ್ ಸ್ಪಾರ್ಕ್ ಓದುಗರ ಮುಂದಿಡುತ್ತಿದೆ. ನೈಜವಾಗಿಯೂ ಉತ್ತರ ಅಮೆರಿಕದ ಎರಡನೇ ತಲೆಮಾರಿನ ಫೋರ್ಡ್ ಫಾಲ್ಕನ್ ಕಾಂಪಾಕ್ಟ್ ಕಾರಿನಿಂದ ಸೃಷ್ಟಿಯಾಗಿರುವ ಫೋರ್ಡ್ ಮಸ್ಟಾಂಗ್, ಅಮೆರಿಕ ಆಟೋಮೊಬೈಲ್ ಕ್ಷೇತ್ರದಲ್ಲಿ 'ಪೊನಿ ಕಾರ್' ಎಂಬ ಎರಡು ಸೀಟುಗಳ ಕ್ರೀಡಾ ಕಾರಿನ ಶೈಲಿಯ ಕೂಪೆ ವಿಭಾಗವನ್ನು ಸೃಷ್ಟಿಸಿತ್ತು. ಈ ವಿಶಿಷ್ಟ ಶೈಲಿಯ ಕಾರಿನ ಮುಂಭಾಗದಲ್ಲಿ ಉದ್ದವಾದ ಬೊನೆಟ್ ಹಾಗೂ ಕಿರಿದಾದ ಹಿಂಭಾಗವನ್ನು ಹೊಂದಿರುತ್ತದೆ.

1964 ಫೋರ್ಡ್ ಮಸ್ಟಾಂಗ್

1964 ಫೋರ್ಡ್ ಮಸ್ಟಾಂಗ್

ಮೊದಲನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರುಗಳನ್ನು 1964ನೇ ಇಸವಿಯಿಂದ 1973ನೇ ಇಸವಿಯ ವರೆಗೆ ನಿರ್ಮಿಸಲಾಗಿತ್ತು. ಪ್ರಾರಂಭದಲ್ಲಿ ಫೋರ್ಡ್ ಮಸ್ಟಾಂಗ್ ಹಾರ್ಡ್ ಟಾಪ್, ಕನ್ವರ್ಟಿಬಲ್ ಜೊತೆಗೆ ಫಾಸ್ಟ್ ಬ್ಯಾಕ್ ಶೈಲಿಯಲ್ಲಿ ಪರಿಚಯವಾಗಿತ್ತು.

1965 ಫೋರ್ಡ್ ಮಸ್ಟಾಂಗ್

1965 ಫೋರ್ಡ್ ಮಸ್ಟಾಂಗ್

1965ರಲ್ಲಿ ಫೆರ್ಗ್ಯೂಸನ್ ಪಿ99 ಫಾರ್ಮುಲಾ ಒನ್ ಕಾರಿನಲ್ಲಿರುವ ಆಲ್ ವೀಲ್ ಡ್ರೈವ್ ವ್ಯವಸ್ಥೆಗೆ ಸಮಾನವಾದ ತಂತ್ರಜ್ಞಾನವನ್ನು ಆಳವಡಿಸಲು ಹ್ಯಾರಿ ಫೆರ್ಗ್ಯೂಸನ್ ರಿಸರ್ಚ್ ಶ್ರಮ ವಹಿಸಿತ್ತು. ಅಲ್ಲದೆ 1965 ಮಸ್ಟಾಂಗ್ ನಲ್ಲಿ ಹೊಂದಾಣಿಸಬಹುದಾದ ಚಾಲಕ ಹಾಗೂ ಪ್ರಯಾಣಿಕ ಬಕೆಟ್ ಸೀಟುಗಳನ್ನು ಆಳವಡಿಸಲಾಗಿತ್ತು.

1966 ಫೋರ್ಡ್ ಮಸ್ಟಾಂಗ್

1966 ಫೋರ್ಡ್ ಮಸ್ಟಾಂಗ್

1965 ಹಾಗೂ 1966ರ ಫೋರ್ಡ್ ಮಸ್ಟಾಂಗ್ ಸಮಾನ ವಿನ್ಯಾಸದ ಹೊರತಾಗಿಯೂ ಹೊರಮೈಯಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದುಕೊಂಡಿತ್ತು. 1966ರ ಮಾದರಿಯ ಲಾಂಛನವು ಸ್ವಲ್ಪ ಚೊಕ್ಕದಾಗಿತ್ತು. ಅಲ್ಲದೆ ಇದೇ ಸಾಲಿನಲ್ಲಿ 'ಹೈ ಕಂಟ್ರಿ ಸ್ಪೆಷಲ್' ವಿಶೇಷ ಆವೃತ್ತಿಯು ಬಿಡುಗಡೆಯಾಗಿತ್ತು.

1967 ಫೋರ್ಡ್ ಮಸ್ಟಾಂಗ್

1967 ಫೋರ್ಡ್ ಮಸ್ಟಾಂಗ್

ಮೊದಲ ಬಾರಿಗೆ ಮಸ್ಟಾಂಗ್ ನೈಜ ಮಾದರಿಗೆ ಬದಲಾವಣೆ ಕಂಡುಬಂದ ವರ್ಷ ಇದಾಗಿತ್ತು. ಅಲ್ಲಹೆ ಹೆಚ್ಚು ಶಕ್ತಿಶಾಲಿ ವಿ8 ಎಂಜಿನ್ ಗಳನ್ನು ಪರಿಚಯಿಸಲಾಗಿತ್ತಲ್ಲದೆ ಡಿಲಕ್ಸ್ ಒಳಮೈಗಳನ್ನು ಪರಿಷ್ಕೃತಗೊಳಿಸಲಾಗಿತ್ತು.

1968 ಫೋರ್ಡ್ ಮಸ್ಟಾಂಗ್

1968 ಫೋರ್ಡ್ ಮಸ್ಟಾಂಗ್

1968ರ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಈ ನಿಟ್ಟಿನಲ್ಲಿ ಹೊಸದಾಗಿ ಶೋಲ್ಡರ್ ಬೆಲ್ಟ್ ಗಳನ್ನು ಜೋಡಣೆ ಮಾಡಲಾಗಿತ್ತು. ಬಾಲಿವುಡ್‌ನ ಜನಪ್ರಿಯ ಬುಲ್ಲಿಟ್ (Bullitt) ಚಿತ್ರದಲ್ಲೂ 1968 ಫೋರ್ಡ್ ಮಸ್ಟಾಂಗ್ ಜಿಟಿ ಫಾಸ್ಟ್ ಬ್ಯಾಕ್ ಮಾದರಿಯ ಬಳಕೆಯಾಗಿತ್ತು.

1969 ಫೋರ್ಡ್ ಮಸ್ಟಾಂಗ್

1969 ಫೋರ್ಡ್ ಮಸ್ಟಾಂಗ್

ಮತ್ತಷ್ಟು ಉದ್ದನೆಯ ಫೋರ್ಡ್ ಮಸ್ಟಾಂಗ್ ಕಾರು 1969ನೇ ಇಸವಿಯಲ್ಲಿ ಎಂಟ್ರಿ ಕೊಟ್ಟಿತ್ತು. ಕ್ವಾಡ್ ಹೆಡ್ ಲ್ಯಾಂಪ್ ಮೊದಲ ಬಾರಿಗೆ ಬಳಕೆಯಾದ ಹೆಗ್ಗಳಿಕೆಯೂ ಇದಕ್ಕೆ ಸಲ್ಲುತ್ತದೆ.

1970 ಫೋರ್ಡ್ ಮಸ್ಟಾಂಗ್

1970 ಫೋರ್ಡ್ ಮಸ್ಟಾಂಗ್

1969ನೇ ಸಾಲಿಗೆ ಹೋಲಿಸಿದಾದ 1970ರ ಫೋರ್ಡ್ ಮಸ್ಟಾಂಗ್ ವಾಹನ ಪ್ರೇಮಿಗಳನ್ನು ಆಕರ್ಷಿಸಲು ವೈಫಲ್ಯ ಅನುಭವಿಸಿತ್ತು. ಇದೇ ಕಾರಣಕ್ಕಾಗಿ ಸ್ವಲ್ಪ ಹಿನ್ನೆಡೆಯನ್ನು ಕಂಡಿತ್ತು.

1971 ಫೋರ್ಡ್ ಮಸ್ಟಾಂಗ್

1971 ಫೋರ್ಡ್ ಮಸ್ಟಾಂಗ್

ಫೋರ್ಡ್‌ನ ನೂತನ ಅಧ್ಯಕ್ಷ ಸಿಮನ್ ಅವರಿಂದ ಹಸಿರು ನಿಶಾನೆಯನ್ನು ಪಡೆದ 1971ರ ಫೋರ್ಡ್ ಮಸ್ಟಾಂಗ್ ಮತ್ತಷ್ಟು ಮೂರು ಇಂಚುಗಳಷ್ಟು ಹೆಚ್ಚು ಅಗಲವನ್ನು ಪಡೆದುಕೊಂಡಿತ್ತು.

1972 ಫೋರ್ಡ್ ಮಸ್ಟಾಂಗ್

1972 ಫೋರ್ಡ್ ಮಸ್ಟಾಂಗ್

ಮಾಲಿನ್ಯ ಮಟ್ಟ ಕಟ್ಟುನಿಟ್ಟಾಗಿ ಜಾರಿಯಾದ ಬಳಿಕ ಬೋಸ್ 351 ಮಾದರಿಯನ್ನು ಹಿಂಪಡೆಯಲಾಗಿತ್ತು. ನೂತನ ಸ್ಪ್ರಿಂಟ್ ಮಾದರಿಯು ಹಾರ್ಡ್ ಟಾಪ್ ಮತ್ತು ಸ್ಪೋರ್ಟ್ ರೂಫ್ ವೆರಿಯಂಟ್ ಗಳಲ್ಲಿ ಲಭ್ಯವಾಗಿತ್ತು.

1973 ಫೋರ್ಡ್ ಮಸ್ಟಾಂಗ್

1973 ಫೋರ್ಡ್ ಮಸ್ಟಾಂಗ್

ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ 1973ರಲ್ಲಿ ಫೋರ್ಡ್ ಮಸ್ಟಾಂಗ್ ಆಗಮನವಾಗಿತ್ತು. ಇದು ನೈಜ ಪೊನಿ ಕಾರು ಮಾದರಿಯ ಕೊನೆಯ ಆವೃತ್ತಿಯಾಗಿತ್ತು.

1974 ಫೋರ್ಡ್ ಮಸ್ಟಾಂಗ್

1974 ಫೋರ್ಡ್ ಮಸ್ಟಾಂಗ್

1973ರಿಂದ 1978ರ ಅವಧಿಯಲ್ಲಿ ಎರಡನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರು ನಿರ್ಮಾಣಗೊಂಡಿತ್ತು. ಮರು ನವೀಕರಣಗೊಳಿಸಿದ ಈ ಕಾರಿನ ನಿರ್ಮಾಣಕ್ಕಾಗಿ ಫೋರ್ಡ್ ಎಂಜಿನಿಯರ್ ಗಳು ಅವಿರತ ಪ್ರಯತ್ನ ನಡೆಸಿದ್ದರು.

1975 ಫೋರ್ಡ್ ಮಸ್ಟಾಂಗ್

1975 ಫೋರ್ಡ್ ಮಸ್ಟಾಂಗ್

ಮಾರಾಟದ ವಿಚಾರದಲ್ಲಿ ಮಸ್ಟಾಂಗ್ II ಸರ್ವಕಾಲಿಕ ದಾಖಲೆಯನ್ನು ಬರೆದ ವರ್ಷ ಇದಾಗಿತ್ತು. ಅಲ್ಲದೆ ಒಟ್ಟಾರೆ 199199 ಯುನಿಟ್ ಗಳ ಮಾರಾಟವನ್ನು ದಾಖಲಿಸಿತ್ತು.

1976 ಫೋರ್ಡ್ ಮಸ್ಟಾಂಗ್

1976 ಫೋರ್ಡ್ ಮಸ್ಟಾಂಗ್

ಸ್ಟೈಲಿಷ್ ವೀಲ್, ಕಪ್ಪು ಗ್ರಿಲ್, ಬಂಪರ್ ಮುಂತಾದ ವೈಶಿಷ್ಟ್ಯಗಳೊಂದಿಗೆ 1976 ಫೋರ್ಡ್ ಮಸ್ಟಾಂಗ್ ಕೋಬ್ರಾ II ಎಂಟ್ರಿ ಕೊಟ್ಟಿತ್ತು.

1977 ಫೋರ್ಡ್ ಮಸ್ಟಾಂಗ್

1977 ಫೋರ್ಡ್ ಮಸ್ಟಾಂಗ್

ಕ್ರೀಡಾತ್ಮಕ ನೋಟದೊಂದಿಗೆ 1977 ಫೋರ್ಡ್ ಮಸ್ಟಾಂಗ್ ಆಗಮನವಾಗಿತ್ತು. ಇದು ಕೋಬ್ರಾ II ಮಾದರಿಗಿಂತಲೂ ಕೆಲವೊಂದು ಬದಲಾವಣೆಗಳನ್ನು ಪಡೆದಿತ್ತು.

1978 ಫೋರ್ಡ್ ಮಸ್ಟಾಂಗ್

1978 ಫೋರ್ಡ್ ಮಸ್ಟಾಂಗ್

1978 ಫೋರ್ಡ್ ಮಸ್ಟಾಂಗ್ 'ಕಿಂಗ್ ಕೋಬ್ರಾ' ಸೀಮಿತ ಆವೃತ್ತಿಯು ಹೊಸತನಕ್ಕೆ ಕಾರಣವಾಗಿತ್ತು. ಕಾರಿನ ಮುಂಭಾಗದಲ್ಲಿ ಕೋಬ್ರಾ ಲಾಂಛನವು ರೋಚಕತೆ ಸೃಷ್ಟಿ ಮಾಡಿತ್ತು.

1979 ಫೋರ್ಡ್ ಮಸ್ಟಾಂಗ್

1979 ಫೋರ್ಡ್ ಮಸ್ಟಾಂಗ್

1978ನೇ ಇಸವಿಯಿಂದ 1993ರ ವರೆಗೆ ಫಾಕ್ಸ್ ತಳಹದಿಯಲ್ಲಿ ಮೂರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರುಗಳನ್ನು ನಿರ್ಮಿಸಲಾಗಿತ್ತು.

1980 ಫೋರ್ಡ್ ಮಸ್ಟಾಂಗ್

1980 ಫೋರ್ಡ್ ಮಸ್ಟಾಂಗ್

1979ರಲ್ಲಿ ಎರಡನೇ ತೈಲ ಬಿಕ್ಕಟ್ಟಿನ ಬಳಿಕ ಇಡೀ ಜಗತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಅಲ್ಲದೆ ಕೋಬ್ರಾ ಮಾದರಿಯು ಪರಿಷ್ಕರಣೆಗೆ ಒಳಗಾಗಿತ್ತು.

1981 ಫೋರ್ಡ್ ಮಸ್ಟಾಂಗ್

1981 ಫೋರ್ಡ್ ಮಸ್ಟಾಂಗ್

ಫ್ರಂಟ್ ಏರ್ ಡ್ಯಾಮ್ ಜೊತೆ ಫಾಗ್ ಲ್ಯಾಂಪ್, ರಿಯರ್ ಸ್ಪಾಯ್ಲರ್ ಹಾಗೂ ವಿಶೇಷ ಗ್ರಾಫಿಕ್ಸ್ ಗಳು ಇದರ ಪ್ರಮುಖ ಆಕರ್ಷಣೆಯಾಗಿದ್ದವು.

1982 ಫೋರ್ಡ್ ಮಸ್ಟಾಂಗ್

1982 ಫೋರ್ಡ್ ಮಸ್ಟಾಂಗ್

1982ರಲ್ಲಿ ಮಸ್ಟಾಂಗ್ ಜಿಟಿ ಪುನರಾಗಮನ ಮಾಡಿಕೊಂಡಿತ್ತು. ಇದು ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿಕೊಂಡಿತ್ತು.

1983 ಫೋರ್ಡ್ ಮಸ್ಟಾಂಗ್

1983 ಫೋರ್ಡ್ ಮಸ್ಟಾಂಗ್

ಫಾಕ್ಸ್ ತಳಹದಿಯಲ್ಲಿ ನಿರ್ಮಿತವಾದ 1983 ಫೋರ್ಡ್ ಮಸ್ಟಾಂಗ್ ಮುಂಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿತ್ತು. ಇದರಲ್ಲಿ ವಿ ಆಕಾರದ ಗ್ರಿಲ್, ಹೆಡ್ ಲ್ಯಾಂಪ್ ಮುಖ್ಯ ಘಟಕಗಳಾಗಿದ್ದವು.

 1984 ಫೋರ್ಡ್ ಮಸ್ಟಾಂಗ್

1984 ಫೋರ್ಡ್ ಮಸ್ಟಾಂಗ್

1984ನೇ ಸಾಲಿನಲ್ಲಿ ಹೊಸತಾದ ಎಸ್‌ವಿಒ ಆವೃತ್ತಿ ಪರಿಚಯವಾಗಿತ್ತು. ಇದು ಫೋರ್ಡ್‌ ಮಸ್ಟಾಂಗ್ 20ನೇ ವರ್ಷದ ಸಂಭ್ರಮಕ್ಕೆ ಹೆಚ್ಚಿನ ಮೆರಗನ್ನು ತುಂಬಿತ್ತು.

1985 ಫೋರ್ಡ್ ಮಸ್ಟಾಂಗ್

1985 ಫೋರ್ಡ್ ಮಸ್ಟಾಂಗ್

1985ರಲ್ಲಿ ಫೋರ್ಡ್ ಮಸ್ಟಾಂಗ್ ಮುಂಭಾಗವನ್ನು ಪರಿಷ್ಕೃತಗೊಳಿಸಲಾಯಿತು. ಅಲ್ಲದೆ ಕೊನೆಯ ಬಾರಿಗೆ ಕರ್ಬ್ಯೂರೇಟಡ್ ವಿ8 ಎಂಜಿನ್ ಐಕಾನಿಕ್ ಕಾರಿನಲ್ಲಿ ಬಳಕೆಯಾಗಿತ್ತು.

1986 ಫೋರ್ಡ್ ಮಸ್ಟಾಂಗ್

1986 ಫೋರ್ಡ್ ಮಸ್ಟಾಂಗ್

ಪ್ರಮುಖವಾಗಿಯೂ ಈ ಮಾದರಿಯ ಚಾಲನಾ ವಿಧಗಳಲ್ಲಿ ಸುಧಾರಣೆ ತರಲಾಗಿತ್ತು. ಅಂದರೆ ಹಿಂದಿನ ಕ್ಲಚ್ ಬದಲು ಹೊಸತಾದ 10.5 ಕ್ಲಚ್ ವ್ಯವಸ್ಥೆಯನ್ನು ಅವಿಷ್ಕರಿಸಲಾಯಿತು.

1987 ಫೋರ್ಡ್ ಮಸ್ಟಾಂಗ್

1987 ಫೋರ್ಡ್ ಮಸ್ಟಾಂಗ್

1987ರಲ್ಲಿ ಫೋರ್ಡ್ ಮಸ್ಟಾಂಡ್ ಒಳಮೈ ಹಾಗೂ ಹೊರಮೈಯಲ್ಲಿ ಬದಲಾವಣೆ ಕಂಡುಬಂದಿತ್ತು. ಅಲ್ಲದೆ ಹೆಚ್ಚು ಏರೋ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿತ್ತು.

1988 ಫೋರ್ಡ್ ಮಸ್ಟಾಂಗ್

1988 ಫೋರ್ಡ್ ಮಸ್ಟಾಂಗ್

1988ನೇ ಸಾಲಿನಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಹಾಗಿದ್ದರೂ ಟಿ ಟಾಪ್ ರೂಫ್ ಆಯ್ಕೆಯನ್ನು ಹಿಂಪಡೆಯಲಾಗಿತ್ತು.

1989 ಫೋರ್ಡ್ ಮಸ್ಟಾಂಗ್

1989 ಫೋರ್ಡ್ ಮಸ್ಟಾಂಗ್

1989ನೇ ವರ್ಷದಲ್ಲಿ ಮಸ್ಟಾಂಗ್ ಸ್ಪೀಡ್ ಡೆನ್ಸಿಟಿ ಬದಲು ಹೊಸತಾದ ಮಾಸ್ ಏರ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಅಲ್ಲದೆ ಚಾಲಕ ಬದಿಯ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ನೀಡಲು ಆರಂಭಿಸಿರುವುದು ಆಧುನಿಕ ಕಾರುಗಳಲ್ಲಿ ಫೋರ್ಡ್ ಸುರಕ್ಷತೆಗೆ ನೀಡುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಯಿತು.

1990 ಫೋರ್ಡ್ ಮಸ್ಟಾಂಗ್

1990 ಫೋರ್ಡ್ ಮಸ್ಟಾಂಗ್

ಈ ವೇಳೆಯಾಗುವಾಗ ಮುಂದಿನ ತಲೆಮಾರಿನ ಮಾಸ್ಟಂಗ್ ಕಾರಿನ ತಯಾರಿಯನ್ನು ಫೋರ್ಡ್ ಆರಂಭಿಸಿತ್ತು. ಇದಕ್ಕನುಗುಣವಾಗಿ ಈಗಿರುವ ಮಾದರಿಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

1991 ಫೋರ್ಡ್ ಮಸ್ಟಾಂಗ್

1991 ಫೋರ್ಡ್ ಮಸ್ಟಾಂಗ್

1991ನೇ ಸಾಲಿನಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಪರಿಚಯಿಸಲಾಯಿತು. ಇವೆಲ್ಲವೂ ಫೋರ್ಡ್‌ನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿತ್ತು.

1992 ಫೋರ್ಡ್ ಮಸ್ಟಾಂಗ್

1992 ಫೋರ್ಡ್ ಮಸ್ಟಾಂಗ್

ದೊಡ್ಡದಾದ ಏರ್ ಫ್ಲೋ ವ್ಯವಸ್ಥೆ ಹಾಗೂ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳು 1992 ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಬಂದಿದ್ದವು.

 1993 ಫೋರ್ಡ್ ಮಸ್ಟಾಂಗ್

1993 ಫೋರ್ಡ್ ಮಸ್ಟಾಂಗ್

ಫೋರ್ಡ್ ಹೊಸದಾಗಿ ಆರಂಭಿಸಿದ ಎಸ್‌ವಿಟಿ ಡಿವಿಷನ್ 1993 ಮಸ್ಟಾಂಗ್ ಎಸ್‌ವಿಟಿ ಕೋಬ್ರಾ ಕಾರು ಹೊರ ಬಂದಿದ್ದವು. ಇದೇ ಸಾಲಿನಲ್ಲಿ ಕೋಬ್ರಾ ಆರ್ ಮಾಡೆಲ್ ಎಂಟ್ರಿ ಕೊಟ್ಟಿದ್ದವು.

1994 ಫೋರ್ಡ್ ಮಸ್ಟಾಂಗ್

1994 ಫೋರ್ಡ್ ಮಸ್ಟಾಂಗ್

ಮೂರು ದಶಕಗಳ ಬಳಿಕ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿದ್ದವು. ಫೋರ್ಡ್ ಮಸ್ಟಾಂಗ್ ಹೊಸ ವಿನ್ಯಾಸವು 'ಎಸ್‌ಎಸ್-95' ಕೋಡ್ ಪಡೆದುಕೊಂಡಿತ್ತು. ಇದೇ ಸಾಲಿನಲ್ಲಿ ಮಸ್ಟಾಂಗ್ ಜಿಟಿ ಮರು ಪರಿಚಯಿಸಲಾಗಿತ್ತು.

1995 ಫೋರ್ಡ್ ಮಸ್ಟಾಂಗ್

1995 ಫೋರ್ಡ್ ಮಸ್ಟಾಂಗ್

ಹಿಂದಿನ ತಲೆಮಾರಿನ ಕಾರುಗಳಿಗೆ ಹೋಲಿಸಿದಾಗ ನೂತನ ಫೋರ್ಡ್ ಮಸ್ಟಾಂಗ್ ನಾಯ್ಸ್, ವೈಬ್ರೇಷನ್ ಹಾಗೂ ಹಾರ್ಚ್ ನೆಶ್ (ಎನ್‌ವಿಎಚ್) ಮಟ್ಟದಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿತ್ತು.

1996 ಫೋರ್ಡ್ ಮಸ್ಟಾಂಗ್

1996 ಫೋರ್ಡ್ ಮಸ್ಟಾಂಗ್

ಈ ಕಾಲಾವಧಿಯಲ್ಲಿ ಎಲ್ಲ ಫೋರ್ಡ್ ಮಸ್ಟಾಂಗ್ ಕಾರುಗಳಲ್ಲೂ ಸ್ಟ್ಟಾಂಡರ್ಡ್ ಫೋರ್ ವೀಲ್ ಡಿಸ್ಕ್ ಬ್ರೇಕ್ ಗಳು ಲಭ್ಯವಾಗಿದ್ದವು. ಅಲ್ಲದೆ ಐಚ್ಛಿಕವಾಗಿ ಆ್ಯಂಟಿಕ್ ಬ್ರೇಕ್ ಸಿಸ್ಟಂ ನೀಡಲಾಗುತ್ತಿತ್ತು.

1997 ಫೋರ್ಡ್ ಮಸ್ಟಾಂಗ್

1997 ಫೋರ್ಡ್ ಮಸ್ಟಾಂಗ್

ಒಳಮೈ ಜೊತೆಗೆ ಹೊರಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿತ್ತು. ಇಲ್ಲಿ ಡ್ಯುಯಲ್ 'ಕಾಕ್ ಪಿಟ್' ವ್ಯವಸ್ಥೆಯು ಪ್ರಮುಖ ಆಕರ್ಷಣೆಯಾಗಿದ್ದವು.

1998 ಫೋರ್ಡ್ ಮಸ್ಟಾಂಗ್

1998 ಫೋರ್ಡ್ ಮಸ್ಟಾಂಗ್

ಪವರ್ ವಿಂಡೋ, ಮಿರರ್, ಡೋರ್ ಲಾಕ್, ರಿಮೋಟ್ ಕೀಲೆಸ್ ಎಂಟ್ರಿ, ಎಸಿ, ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳು ಮಸ್ಟಾಂಗ್ ಕಾರನ್ನು ದಿಗ್ಗಜ್ಜರ ಸಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.

1999 ಫೋರ್ಡ್ ಮಸ್ಟಾಂಗ್

1999 ಫೋರ್ಡ್ ಮಸ್ಟಾಂಗ್

1999ನೇ ಸಾಲಿನಲ್ಲಿ ಪರಿಷ್ಕೃತ ಎಸ್‌ಎನ್-95 ಆಗಮನವಾಯಿತು. ಇದರಲ್ಲಿ ಫೋರ್ಡ್‌ನ ಹೊಸತಾದ ಎಡ್ಜ್ ಡಿಸೈನ್ ತಂತ್ರಗಾರಿಕೆಯನ್ನು ಅನುಸರಿಸಲಾಯಿತು.

2000 ಫೋರ್ಡ್ ಮಸ್ಟಾಂಗ್

2000 ಫೋರ್ಡ್ ಮಸ್ಟಾಂಗ್

ಹೊಸ ಶತಮಾನದ ಉದಯದೊಂದಿಗೆ ದೊಡ್ಡದಾದ ವೀಲ್ ಆರ್ಚ್, ಮೊನಚಾದ ದೇಹ ಶೈಲಿ ಹಾಗೂ ಮಸಲ್ ಲುಕ್ ಫೋರ್ಡ್ ಮಸ್ಟಾಂಗ್ ಕಾರಿಗೆ ಆಸರೆಯಾಗಿದ್ದವು.

2001 ಫೋರ್ಡ್ ಮಸ್ಟಾಂಗ್

2001 ಫೋರ್ಡ್ ಮಸ್ಟಾಂಗ್

ಇಂಟೇಕ್ ಮ್ಯಾನಿಫೋಲ್ಡ್ ರನ್ನರ್ ಕಂಟ್ರೋಲ್ (ಐಎಂಆರ್‌ಸಿ) ವ್ಯವಸ್ಥೆಯ ಆಳವಡಿಕೆಯೊಂದಿಗೆ ಎಂಜಿನ್ ಒಟ್ಟಾರೆ ಶಕ್ತಿಯು 193 ಅಶ್ವಶಕ್ತಿಗೆ ಏರಿಕೆಯಾಯಿತು.

2002 ಫೋರ್ಡ್ ಮಸ್ಟಾಂಗ್

2002 ಫೋರ್ಡ್ ಮಸ್ಟಾಂಗ್

ಹಿಂದಿನ ತಲೆಮಾರಿನಂತೆ ನಾಲ್ಕನೇ ತಲೆಮಾರಿನಲ್ಲೂ ಅನೇಕ ಫೋರ್ಡ್ ಮಸ್ಟಾಂಗ್ ವಿಶೇಷ ಆವೃತಿಗಳ ಪರಿಚಯವಾಗಿತ್ತು.

2003 ಫೋರ್ಡ್ ಮಸ್ಟಾಂಗ್

2003 ಫೋರ್ಡ್ ಮಸ್ಟಾಂಗ್

ಆಧುನಿಕ ವಾಹನ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚುತ್ತಿದ್ದಂತೆಯೇ ಇನ್ನೊಂದೆಡೆ ಫೋರ್ಡ್ ತನ್ನ ಐಕಾನಿಕ್ ಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತ್ತು.

2004 ಫೋರ್ಡ್ ಮಸ್ಟಾಂಗ್

2004 ಫೋರ್ಡ್ ಮಸ್ಟಾಂಗ್

ಇದೇ ಸಾಲಿನಲ್ಲಿ ಫೋರ್ಡ್ 40ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಆವ-ತ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಜಿಟಿ ಹಾಗೂ ಸ್ಟ್ಯಾಂಡರ್ಡ್ ವೆರಿಯಂಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಿತ್ತು.

2005 ಫೋರ್ಡ್ ಮಸ್ಟಾಂಗ್

2005 ಫೋರ್ಡ್ ಮಸ್ಟಾಂಗ್

2004ನೇ ಇಸವಿಯಿಂದ 2014ರ ವರೆಗೆ ಐದನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರುಗಳನ್ನು ನಿರ್ಮಿಸಲಾಯಿತು. ಇದನ್ನು ಪ್ರಮುಖವಾಗಿಯೂ ಸಂಸ್ಥೆಯ ಮಿಚಿಗನ್ ಘಟಕದಲ್ಲಿ ತಯಾರಿಸಲಾಯಿತು.

2006 ಫೋರ್ಡ್ ಮಸ್ಟಾಂಗ್

2006 ಫೋರ್ಡ್ ಮಸ್ಟಾಂಗ್

ಐದನೇ ತಲೆಮಾರಿನ ಫೋರ್ಡ ಕಾರುಗಳು ಹಲವಾರು ವೆರಿಯಂಟ್ ಗಳನ್ನು ಪಡೆದುಕೊಂಡಿದ್ದವು. ಇವುಗಳಲ್ಲಿ ಮಸ್ಟಾಂಗ್ ಜಿಟಿ/ಕ್ಯಾಲಿಫೋರ್ನಿಯಾ ಸ್ಪೆಷಲ್, ಶೆಲ್ಬಿ ಮಸ್ಟಾಂಗ್, ಬುಲ್ಲಿಟ್ ಮಸ್ಟಾಂಗ್ ಹಾಗೂ ಬಾಸ್ 302 ಮಸ್ಟಾಂಗ್ ಪ್ರಮುಖವಾಗಿದ್ದವು.

2007 ಫೋರ್ಡ್ ಮಸ್ಟಾಂಗ್

2007 ಫೋರ್ಡ್ ಮಸ್ಟಾಂಗ್

ರಿಮೋಟ್ ಕೀಲೆಸ್ ಎಂಟ್ರಿ, ಫ್ರಂಟ್ ಏರ್ ಬ್ಯಾಗ್, ಎಫ್‌ಎಂ, 16 ಇಂಚುಗಳ ಅಲಾಯ್ ವೀಲ್, ದೊಡ್ಡದಾದ ಡಿಸ್ಕ್ ಬ್ರೇಕ್ ಹೊಸ ಫೋರ್ಡ್ ಮಸ್ಟಾಂಗ್ ಕಾರುಗಳ ಆಕರ್ಷಣೆಯಾಗಿದ್ದವು.

2008 ಫೋರ್ಡ್ ಮಸ್ಟಾಂಗ್

2008 ಫೋರ್ಡ್ ಮಸ್ಟಾಂಗ್

ಆರು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು, ಲೆಥರ್ ಸೀಟು, ಟ್ರಾಕ್ಷನ್ ಕಂಟ್ರೋಲ್, ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಇತ್ಯಾದಿ ವೈಶಿಷ್ಟ್ಯಗಳು ಕಂಡುಬಂದಿದ್ದವು.

2009 ಫೋರ್ಡ್ ಮಸ್ಟಾಂಗ್

2009 ಫೋರ್ಡ್ ಮಸ್ಟಾಂಗ್

2009ನೇ ಸಾಲಿನಲ್ಲಿ ಮೊದಲ ಬಾರಿಗೆ ಫೋರ್ಡ್ ನ ಕ್ರಾಂತಿಕಾರಿ ಸಿಂಕ್ ತಂತ್ರಗಾರಿಕೆಯನ್ನು ಪರಿಚಯಿಸಲಾಯಿತು.

2010 ಫೋರ್ಡ್ ಮಸ್ಟಾಂಗ್

2010 ಫೋರ್ಡ್ ಮಸ್ಟಾಂಗ್

2005ರಿಂದ 2009 ವರೆಗಿನ ಮಾದರಿಗಳನ್ನು ಗಮನಿಸಿದಾಗ 2010 ಫೋರ್ಡ್ ಮಸ್ಟಾಂಗ್ ಹೆಚ್ಚಿನ ಬದಲಾವಣೆಗಳು ಕಂಡುಬಂದಿತ್ತು. ಇಲ್ಲಿ ಎಲ್‌ಇಡಿ ಬೆಳಕಿನ ಅವಿಷ್ಕಾರವೂ ಆಯಿತು.

2011 ಫೋರ್ಡ್ ಮಸ್ಟಾಂಗ್

2011 ಫೋರ್ಡ್ ಮಸ್ಟಾಂಗ್

2011 ಫೋರ್ಡ್ ಮಸ್ಟಾಂಗ್ ಮಾದರಿಯಲ್ಲಿ ಸಂಸ್ಥೆಯು ಹೊಸತಾದ ಡ್ಯುರಟೆಕ್ 37, 3.7 ಲೀಟರ್ ಡಿಒಎಚ್‌ಸಿ ವಿ6 ಎಂಜಿನ್ ಆಳವಡಿಸಲಾಯಿತು.

2012 ಫೋರ್ಡ್ ಮಸ್ಟಾಂಗ್

2012 ಫೋರ್ಡ್ ಮಸ್ಟಾಂಗ್

2012 ಫೋರ್ಡ್ ಮಸ್ಟಾಂಗ್ ವಿಶೇಷ ಆವೃತ್ತಿಗೆ ಕೋಬ್ರಾ ಜೆಟ್ ಎಂಬ ಹೆಸರನ್ನಿಡಲಾಯಿತು. ಇದನ್ನು 1960 ಹಾಗೂ 1970ರ ದಶಕದ ಮಾಸ್ಟಂಗ್ ಮಾದರಿಗಳ ತಳಹದಿಯಲ್ಲಿ ನಿರ್ಮಿಸಲಾಯಿತು.

2013 ಫೋರ್ಡ್ ಮಸ್ಟಾಂಗ್

2013 ಫೋರ್ಡ್ ಮಸ್ಟಾಂಗ್

2013ನೇ ಸಾಲಿನಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಅಭಿವೃದ್ಧಿಯನ್ನು ನಡೆಸಲಾಯಿತು. ಅಲ್ಲದೆ ಮುಂಭಾಗದಲ್ಲಿ ಹೊಸ ವಿನ್ಯಾಸ, ಸ್ಟಾಂಡರ್ಡ್ ಎಚ್‌ಐಡಿ ಹೆಡ್ ಲ್ಯಾಂಪ್, ಎಲ್‌ಇಡಿ ಬೆಳಕಿನ ಸೇವೆಗಳನ್ನು ನೀಡಲಾಯಿತು.

2014 ಫೋರ್ಡ್ ಮಸ್ಟಾಂಗ್

2014 ಫೋರ್ಡ್ ಮಸ್ಟಾಂಗ್

2014ನೇ ಸಾಲಿನಲ್ಲಿ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಕಾರಿನ ಸಿದ್ಧತೆಗಳು ಆರಂಭವಾಗಿದ್ದವು. ಇದು ಫೋರ್ಡ್ ಕಾರಿಗೆ ಹೊಸ ಆಯಾಮವನ್ನು ತುಂಬಿತ್ತು. ಅಲ್ಲದೆ ಸಂಸ್ಥೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ 6ನೇ ಪೀಳಿಗೆಯ ಮಸ್ಟಾಂಗ್ ಕಾರನ್ನು ಅನಾವರಣಗೊಳಿಸಲಾಯಿತು.

2015 ಫೋರ್ಡ್ ಮಸ್ಟಾಂಗ್

2015 ಫೋರ್ಡ್ ಮಸ್ಟಾಂಗ್

ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ನಿರ್ಮಾಣ ಪ್ರಕ್ರಿಯೆಯು 2014 ಜುಲೈ ತಿಂಗಳಲ್ಲಿ ಫ್ಲ್ಯಾಟ್ ರಾಕ್ ಆಸೆಂಬ್ಲಿ ಘಟಕದಲ್ಲಿ ಪ್ರಾರಂಭವಾಯಿತು. ಇದು ಹಿಂದುಗಡೆ ಸ್ವತಂತ್ರ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಡೆದುಕೊಂಡಿತ್ತಲ್ಲದೆ ಹೆಚ್ಚು ಪರಿಚಿತ 2.3 ಲೀಟರ್ ಇಕೊಬೂಸ್ಟ್ ಟರ್ಬೊಚಾರ್ಜ್ಡ್ ಡೈರಕ್ಟ್ ಇಂಜೆಕ್ಟಡ್ ಎಂಜಿನ್ ಆಳವಡಿಸಲಾಯಿತು.

2016 ಫೋರ್ಡ್ ಮಸ್ಟಾಂಗ್

2016 ಫೋರ್ಡ್ ಮಸ್ಟಾಂಗ್

ಪ್ರಸ್ತುತ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಭಾರತೀಯ ಮಾರುಕಟ್ಟೆಗೆ ಕಾಲಿಡಲು ಸಿದ್ಧತೆ ನಡೆಸುತ್ತಿದೆ. ಈ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Friday, January 29, 2016, 18:21 [IST]
English summary
Ford Mustang Showing Your Passion for The Pony
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+