ಗಣ್ಯ ವ್ಯಕ್ತಿಗಳಿಗಾಗಿ 9 ಕೋಟಿ ದುಬಾರಿಯ ಆಡಿ ಹೈ ಎಂಡ್ ಸೆಕ್ಯೂರಿಟಿ ಗಾಡಿ
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಆಡಿ, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಎ8 ಎಲ್ ಸೆಕ್ಯೂರಿಟಿ ಹೈ ಎಂಡ್ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 9.15 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)
ಇದು ಪ್ರಮುಖವಾಗಿಯೂ ಜೀವ ಬೆದರಿಕೆ ಎದುರಿಸುತ್ತಿರುವ ಗಣ್ಯ ವ್ಯಕ್ತಿಗಳ ಸುರಕ್ಷಿತ ಪಯಣಯನ್ನು ಖಾತ್ರಿಪಡಿಸಲಿದೆ. ದೇಶದಲ್ಲಿ ದ್ವೇಷ ರಾಜಕಾರಣ ತಾರಕ್ಕೇರಿರುವುದು ಇನ್ನೊಂದೆಡೆ ನಾಯಕರು ಉಗ್ರರ ಭೀತಿ ಎದುರಿಸುತ್ತಿರುವುದರಿಂದ ಸುರಕ್ಷತೆಗಾಗಿ ಆಡಿ ಹೈ ಸೆಕ್ಯೂರಿಟಿ ಗಾರಿ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಕ್ಲಾಸ್ ವಿಆರ್ 9 ಖಂಡಾಂತರ ರಕ್ಷಣೆ ಪ್ರಮಾಣಿತ ಆಡಿ ಎ8 ಎಲ್ ಸೆಕ್ಯೂರಿಟಿ ಗಾಡಿ ಶತ್ರು ದಾಳಿಯನ್ನು ತಡೆಯುವಷ್ಟು ಸಾಮರ್ಥ್ಯ ಹೊಂದಿದೆ.

ಸಾಮಾನ್ಯ ಕಾರುಗಳಿಗಿಂತ ಗಟ್ಟಿಗುಟ್ಟಾದ ದೇಹ ರಚನೆಯನ್ನು ಪಡೆದಿರುವ ಆಡಿ ಎ8 ಎಲ್ ಸೆಕ್ಯೂರಿಟಿ ಗಾಡಿಯಲ್ಲಿ ಅರಾಮಿಡ್ ಫ್ಯಾಬ್ರಿಕ್, ವಿಶಿಷ್ಟವಾದ ಅಲ್ಯೂಮಿನಿಯಂ ಮಿಶ್ರಲೋಹ ಮತ್ತು ಉಕ್ಕಿನ ರಕ್ಷಾಕವಚವನ್ನು ಜೋಡಣೆ ಮಾಡಲಾಗಿದೆ.

ಆಡಿಯ ರಹಸ್ಯ ಘಟಕದಲ್ಲಿ ಎ8 ಎಲ್ ಸೆಕ್ಯೂರಿಟಿ ಐಷಾರಾಮಿ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಢಿಕ್ಕಿ ಜಾಗದಲ್ಲಿ ಶಸ್ತ್ರಸಜ್ಜಿತ ಸಂವಹನ ಬಾಕ್ಸ್ ಇಡಲಾಗಿದೆ.

ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ತುರ್ತು ನಿರ್ಗಮನಾ ವ್ಯವಸ್ಥೆ, ಅಗ್ನಿ ಶಾಮಕಾ ವ್ಯವಸ್ಥೆ, ತಾಜಾ ಹವಾ ಸೇವನೆಗೂ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ.

ಭದ್ರತೆಯ ವಿಚಾರದಲ್ಲಿ ಹಲವಾರು ವಿಶಿಷ್ಟತೆಗಳನ್ನು ಕಾಪಾಡಿಕೊಂಡಿರುವ ಆಡಿ ಎ8 ಎಲ್ ಸೆಕ್ಯೂರಿಟಿ ಕಾರು ಅಲ್ಯೂಮಿನಿಯಂ ದೇಹ ರಚನೆಯನ್ನು ಪಡೆದರೂ ಭಾರ ಕಡಿತಕ್ಕಾಗಿ ಒತ್ತು ಕೊಡಲಾಗಿದೆ. ಅಲ್ಲದೆ ಗರಿಷ್ಠ 600 ಕೆ.ಜಿ ವರೆಗೂ ಭಾರ ಹೊರುವ ಸಾಮರ್ಥ್ಯ ಇರುತ್ತದೆ.

ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಇದು ಹೊಂದಿದ್ದು, ಎಲ್ಲ ಹಂತದಲ್ಲೂ ಗರಿಷ್ಠ ಚಾಲನಾ ಅನುಭವವನ್ನು ನೀಡಲಿದೆ.

ಅಂತಿಮವಾಗಿ ಶ್ರೀಮಂತರಲ್ಲಿ ಅತಿ ಶ್ರೀಮಂತರಿಗೆ ಮಾತ್ರ ಆಡಿ ಎ8 ಎಲ್ ಸೆಕ್ಯೂರಿಟಿ ಖರೀದಿಸಬಹುದಾಗಿದೆ. ಯಾಕೆಂದರೆ ಇದರ ಎಕ್ಸ್ ಶೋ ರೂಂ ಬೆಲೆ 9.15 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಸೆಕ್ಯೂರಿಟಿ ಗಾಡಿ ವಿಭಾಗದಲ್ಲಿ ನೂತನ ಆಡಿ ಎ8 ಎಲ್ ಐಷಾರಾಮಿ ಸೆಡಾನ್, ಮರ್ಸಿಡಿಸ್ ಬೆಂಝ್‌ನ ಎಸ್600 ಗಾರ್ಡ್ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








