ಕಾಂಪಾಕ್ಟ್ ಸೆಡಾನ್ ವಿಭಾಗಕ್ಕೆ 'ಷೆವರ್ಲೆ ಎಸೆನ್ಷಿಯಾ' ಎಂಟ್ರಿ
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಕಾಂಪಾಕ್ಟ್ ಸೆಡಾನ್ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಷೆವರ್ಲೆ, ಅತಿ ನೂತನ ಎಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದೆ.
ಕಳೆದ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಚಡಪಡಿಸುತ್ತಿರುವ ಅಮೆರಿಕದ ಮೂಲದ ಜನರಲ್ ಮೋಟಾರ್ಸ್‌ಗೆ ಷೆವರ್ಲೆ ಎಸೆನ್ಷಿಯಾ ವರದಾನವಾಗಿ ಪರಿಣಮಿಸಲಿದೆ.

ಎಂಜಿನ್ ತಾಂತ್ರಿಕತೆ
ಬೀಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ತಾಂತ್ರಿಕತೆಗಳನ್ನು ಎಸೆನ್ಷಿಯಾ ಕಾರಿಗೆ ಆಮದು ಮಾಡಿಕೊಳ್ಳಲಾಗುವುದು. ಇದರ 1.2 ಲೀಟರ್ ಎಸ್‌ಟಿಇಸಿ II ಪೆಟ್ರೋಲ್ ಮತ್ತು 1.0 ಲೀಟರ್ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 77 (107 ಎನ್‌ಎಂ ತಿರುಗುಬಲ) ಹಾಗೂ 56 ಅಶ್ವಶಕ್ತಿಗಳನ್ನು (142 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.
ಗೇರ್ ಬಾಕ್ಸ್: 5 ಸ್ಪೀಡ್
ಶೈಲಿ
ಆಕರ್ಷಕ ಫ್ರಂಟ್ ಗ್ರಿಲ್, ಹೆಡ್ ಲೈಟ್, ಬೊನೆಟ್ ಹಾಗೂ ಟೈಲ್ ಲ್ಯಾಂಪ್ ಗಳು ಖರೀದಿಗಾರರನ್ನು ಹೆಚ್ಚೆಚ್ಚು ಮನ ಸೆಳೆಯಲಿದೆ. ನಿಖರವಾದ ಸ್ವಭಾವ ರೇಖೆಗಳು ಜೊತೆಗೆ ಷೆವರ್ಲೆ ಲಾಂಛನ ಮೆಚ್ಚುಗೆಗೆ ಪಾತ್ರವಾಗಲಿದೆ.
ಐದು ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾದ ಷೆವರ್ಲೆ ಎಸೆನ್ಷಿಯಾ ಕಾರಿನೊಳಗೆ ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ. ಅಲ್ಲದೆ ಮೈ ಲಿಂಕ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗಿನ ಆಂಡ್ರಾಯ್ಡ್ ಆಟೋ ಮತ್ತು ಆಪ್ ಕಾರ್ ಪ್ಲೇ ಸೌಲಭ್ಯಗಳು ಲಭ್ಯವಾಗಲಿದೆ.
ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು
2016 ಅಥವಾ 2017ನೇ ಸಾಲಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಷೆವರ್ಲೆ ಎಸೆನ್ಷಿಯಾ 4.5 ಲಕ್ಷ ರು.ಗಳಿಂದ 5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್, ಫೋರ್ಡ್ ಆಸ್ಪೈರ್ ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಫೋಕ್ಸ್ ವ್ಯಾಗನ್ ಎಮಿಯೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications

































