ಫಿಯೆಟ್ ಲಿನಿಯಾ 125ಎಸ್, ಅರ್ಬನ್ ಕ್ರಾಸ್ ಅನಾವರಣ
ವಿಸ್ತಾರವಾಗಿ ಹರಡಿರುವ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಭದ್ರ ಅಡಿಪಾಯ ಹಾಕುವ ಇರಾದೆಯಲ್ಲಿರುವ ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯು ಅತಿ ನೂತನ ಲಿನಿಯಾ 125ಎಸ್ ಹಾಗೂ ಅರ್ಬನ್ ಕ್ರಾಸ್ ಮಾದರಿಗಳನ್ನು ಅನಾವರಣಗೊಳಿಸಿದೆ. ಇದೇ ಸಂದರ್ಭದಲ್ಲಿ ಫಿಯೆಟ್ ಪುಂಟೊ ಪ್ಯೂರ್ ಬಿಡುಗಡೆಯಾಗಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಫಿಯೆಟ್ ಲಿನಿಯಾ 125ಎಸ್ ಶಕ್ತಿಯುತ ಮಿಡ್ ಸೈಜ್ ಸೆಡಾನ್ ಕಾರಾಗಿದ್ದು, ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿರುವ 1.4 ಲೀಟರ್ ಟರ್ಬೊಚಾರ್ಜ್ಡ್ ಟಿ ಜೆಟ್ ಪೆಟ್ರೋಲ್ ಎಂಜಿನ್ 210 ಎನ್‌ಎಂ ತಿರುಗುಬಲದಲ್ಲಿ 123 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನೂತನ ಮಾಹಿತಿ ಮನರಂಜಾ ವ್ಯವಸ್ಥೆಯ ಜೊತೆಗೆ ಸ್ಯಾಟಲೈಟ್ ನೇವಿಗೇಷನ್, ಆಟೋಮ್ಯಾಟಿಕ್ ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರೈನ್ ಸೆನ್ಸಿಂಗ್ ವೈಪರ್ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ. ಇನ್ನು ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಸೇವೆಗಳಿರಲಿದೆ.

ಅದೇ ಹೊತ್ತಿಗೆ ಫಿಯೆಟ್ ಅರ್ಬನ್ ಕ್ರಾಸ್ ಕೂಡಾ 1.4 ಲೀಟರ್ ಟಿ ಜೆಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 210 ಎನ್‌ಎಂ ತಿರುಗುಬಲದಲ್ಲಿ 138 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಹೊಸ ದೇಹ ರಚನೆ, 17 ಇಂಚುಗಳ ಅಲಾಯ್ ಚಕ್ರಗಳು, ಎಲ್‌ಇಡಿ ಟೈಲ್ ಲ್ಯಾಂಪ್, ಫಾಲೋ ಮಿ ಹೆಡ್ ಲ್ಯಾಂಪ್ ಜೊತೆಗೆ ಬೆಳ್ಳಿ ವರ್ಣದ ಮೇಲ್ಚಾವಣಿಯು ಇದರ ಅಂದತೆಯನ್ನು ಇಮ್ಮಡಿಯಾಗಿಸಲಿದೆ.


Click it and Unblock the Notifications





































