ಭಾರತಕ್ಕೆ ದಾಪುಗಾಲಿಟ್ಟ ಆಫ್ ರೋಡ್ ದೈತ್ಯ 'ಜೀಪ್'

By Nagaraja

ಇಟಲಿಯ ಐಕಾನಿಕ್ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ ಅಧೀನತೆಯಲ್ಲಿರುವ ಅಮೆರಿಕದ ಐಕಾನಿಕ್ ಜೀಪ್, 2016 ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಭರ್ಜರಿ ದಾಪುಗಾಲನ್ನಿಟ್ಟಿದೆ. ಭಾರತದಲ್ಲಿ ಮೂರು ಪ್ರತಿಷ್ಠಿತ ಮಾದರಿಗಳನ್ನು ಜೀಪ್ ಅನಾವರಣಗೊಳಿಸಿದೆ. ಅವುಗಳೆಂದರೆ

  • ಜೀಪ್ ವ್ರ್ಯಾಂಗ್ಲರ್ ಅನ್ ಲಿಮಿಟೆಡ್,
  • ಗ್ರಾಂಡ್ ಚೆರೊಕಿ,
  • ಚೆರೊಕಿ ಎಸ್‌ಆರ್‌ಟಿ

ಜೀಪ್ ವ್ರ್ಯಾಂಗ್ಲರ್ ಅನ್ ಲಿಮಿಟೆಡ್


ಸಂಸ್ಥೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲೇ ಭಾರತಕ್ಕೆ ಪ್ರವೇಶಿಸಲಿರುವ ಜೀಪ್, ಕೊನೆಗೂ ವರ್ಷಗಳ ಹಿಂದೆಯೇ ಘೋಷಿಸಿರುವ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ.

ಜೀಪ್ ವ್ರ್ಯಾಂಗ್ಲರ್ ಅನ್ ಲಿಮಿಟೆಡ್
ಈ ಪೈಕಿ ವ್ರ್ಯಾಂಗ್ಲರ್ ಅನ್ ಲಿಮಿಟೆಡ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದರ 3.6 ಲೀಟರ್ ವಿ6 ಪೆಟ್ರೋಲ್ ಎಂಜಿನ್ 275 ಅಶ್ವಶಕ್ತಿಯನ್ನು (359 ಎನ್‌ಎಂ ತಿರುಗುಬಲ) ಮತ್ತು 2.8 ಲೀಟರ್ ಡೀಸೆಲ್ ಟರ್ಬೊ ಚಾರ್ಜ್ಡ್ ಎಂಜಿನ್ 197 ಅಶ್ವಶಕ್ತಿಯನ್ನು (451 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.


ಗೇರ್ ಬಾಕ್ಸ್: 5 ಸ್ಪೀಡ್ ಆಟೋಮ್ಯಾಟಿಕ್.

ಆರಂಭದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತವನ್ನು ತಲುಪಲಿರುವ ಜೀಪ್ ನಿಕಟ ಭವಿಷ್ಯದಲ್ಲೇ ರಂಜನ್ ಗಾಂವ್ ನಲ್ಲಿ ಸ್ಥಿತಗೊಂಡಿರುವ ಫಿಯೆಟ್ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಆರಂಭಿಸಲಿದೆ.

ಅಂದ ಹಾಗೆ ದೇಶದಲ್ಲಿ ಫಿಯೆಟ್ ವ್ರ್ಯಾಂಗ್ಲರ್ 25 ರಿಂದ 30 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದ್ದು, ಆಫ್ ರೋಡ್ ವಾಹನ ಪ್ರೇಮಿಗಳಿಗೆ ಅದ್ಭುತ ಚಾಲನಾ ನೀಡಲಿರುವುದಂತೂ ಗ್ಯಾರಂಟಿ.

More from DriveSpark

Article Published On: Tuesday, February 9, 2016, 12:31 [IST]
English summary
Jeep rolls Wrangler Unlimited into India at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+