ಹೊಸ ಭರವಸೆ, ನಂಬಿಕೆ ಮೂಡಿಸಿದ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು
ಭವಿಷ್ಯದ ಸಂಚಾರ ವಾಹಕದತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಪ್ರಯಸ್ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿದ್ದು, ದೇಶದ ವಾಹನ ಪ್ರೇಮಿಗಳಲ್ಲಿ ಹೊಸ ಭರವಸೆ, ನಂಬಿಕೆ ಮೂಡಿಸುವಂತಾಗಿದೆ.
ನಾಲ್ಕನೇ ತಲೆಮಾರಿನ ಪ್ರಯಸ್ ಮಿಶ್ರತಳಿಯ ಕಾರಿನೊಂದಿಗೆ ಟೊಯೊಟಾ ದೆಹಲಿ ನಗರದ ಪ್ರವೇಶ ಪಡೆದಿತ್ತು. ಇದಕ್ಕೆ ತಕ್ಕಂತೆ ವಾಹನ ಪ್ರೇಮಿಗಳಿಂದ ಭರ್ಜರಿ ಕೈಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಟೊಯೊಟಾ ಯಶ ಕಂಡಿದೆ.

ಎಂಜಿನ್ ತಾಂತ್ರಿಕತೆ
- 1.8 ಲೀಟರ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರು,
- ಸಂಯೋಜಿತ ಅಶ್ವಶಕ್ತಿ - 121
- ಸಂಯೋಜಿತ ತಿರುಗುಬಲ - 163 ಎನ್‌ಎಂ
- ಗರಿಷ್ಠ ವೇಗ: ಗಂಟೆಗೆ 180 ಕೀ.ಮೀ.
- ಮೈಲೇಜ್: 22.11 ಕೀ.ಮೀ.
- ಗೇರ್ ಬಾಕ್ಸ್: ಸಿವಿಟಿ
ಶೈಲಿ
ನಾಲ್ಕನೇ ತಲೆಮಾರಿ ಪ್ರಯಸ್ ಹೈಬ್ರಿಡ್ ಕಾರಿನಲ್ಲಿ ಹೆಚ್ಚು ಏರೋಡೈನಾಮಿಕ್ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ. ಇದರಿಂದ ಅತ್ಯುತ್ತಮ ಚಲನಶೀಲತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ಕಾರಿನೊಳಗೆ ಏಳು ಇಂಚುಗಳ ಟಚ್ ಸ್ಕ್ರೀನ್, 10 ಸ್ಪೀಕರ್ ಜೊತೆ ಜೆಬಿಎಲ್ ಆಡಿಯೋ ಸಿಸ್ಟಂ ಇರಲಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಪಾರ್ಕಿಂಗ್ ಕ್ಯಾಮೆರಾ, ಏಳು ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಮತ್ತು ವಿಎಸ್‌ಸಿ ಟ್ರಾಕ್ಷನ್ ಕಂಟ್ರೋಲ್ ಇದರಲ್ಲಿರಲಿದೆ.


Click it and Unblock the Notifications

































