ಸಾಂಪ್ರದಾಯಿಕ ಗೇರ್ ಬಾಕ್ಸ್‌ಗೆ ಗುಡ್ ಬೈ ಹೇಳಿ; ಬಂದಿದೆ ಹೊಸ ರೆನೊ ಕ್ವಿಡ್

By Nagaraja

ಕಾರುಗಳ ಚಾಲನೆ ಮಾಡಲು ಹಾಗೂ ಎಂಜಿನ್, ಚಕ್ರಗಳೊಂದಿಗೆ ಸಂಪರ್ಕ ಕಲ್ಪಿಸಲು ಬಳಸುವ ಉಪಕರಣವೇ ಗೇರ್ ಲಿವರ್ (Gear Lever.). ಆದರೆ ಈಗ ಸಾಂಪ್ರದಾಯಿಕ ಗೇರ್ ಹಿಡಿಕೆಗಳಿಗೆ ಗುಡ್ ಬೈ ಹೇಳುವ ಸಮಯ ಹತ್ತಿರ ಬಂದಿದೆ.

ಯಾಕೆಂದರೆ, ದೆಹಲಿಯಲ್ಲಿ ಸಾಗುತ್ತಿರುವ 13ನೇ ಆವೃತ್ತಿಯ 2016 ಆಟೋ ಎಕ್ಸ್ ಪೋದಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ನೂತನ ಗೇರ್ ಲಿವರ್ ತಂತ್ರಜ್ಞಾನದೊಂದಿದೆ ತನ್ನ ಜನಪ್ರಿಯ ಕ್ವಿಡ್ ಕಾರನ್ನು ಅನಾವರಣಗೊಳಿಸಿದೆ. ಇದು ಅತಿ ಶೀಘ್ರದಲ್ಲೇ ಭಾರತ ವಾಹನ ಮಾರುಕಟ್ಟೆ ತಲುಪಲಿದೆ ಎಂಬುದು ಇಲ್ಲಿ ಗಮನಾರ್ಹ.

ರೆನೊ ಕ್ವಿಡ್ ಎಎಂಟಿ


ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಿಡ್, ದೇಶದ ಸರ್ವಕಾಲಿಕ ಶ್ರೇಷ್ಠ ಎಂಟ್ರಿ ಲೆವೆಲ್ ಕಾರು ಮಾರುತಿ ಸುಜುಕಿ ಆಲ್ಟೊಗೆ ಪ್ರತಿಸ್ಪರ್ಧಿಯಾಗಿ ಹೊರ ಬಂದಿತ್ತು. ಅಲ್ಲದೆ ಈಗಾಗಲೇ ಸರಿ ಸುಮಾರು ಒಂದು ಲಕ್ಷಗಳಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

ಕ್ವಿಡ್ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ರೆನೊ ಸಂಸ್ಥೆಯೀಗ, ಹೆಚ್ಚು ಶಕ್ತಿಶಾಲಿ ಒಂದು ಲೀಟರ್ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ಆವೃತ್ತಿಯನ್ನು ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದೆ. ಇದರಲ್ಲಿ ಅತಿ ನೂತನ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ಜೋಡಣೆ ಮಾಡಿರುವುದು ವಾಹನ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಏನಿದು ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ಇದು ವೃತ್ತಾಕಾರದಲ್ಲಿದ್ದು, ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ. ಇದು ನ್ಯೂಟ್ರಲ್, ಡ್ರೈವ್ ಅಥವಾ ರಿವರ್ಸ್ ಚಾಲನಾ ವ್ಯವಸ್ಥೆಗಳನ್ನು ಪಡೆದಿದೆ. ರೆನೊ ಕ್ವಿಡ್ ಎಎಂಟಿ ನಿರ್ಮಾಣ ಮಾದರಿಯಲ್ಲೂ ಇದೇ ತಂತ್ರಗಾರಿಕೆಯನ್ನೇ ಸಂಸ್ಥೆಯು ಉಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಎಂಜಿನ್ ತಾಂತ್ರಿಕತೆ
ನೂತನ ರೆನೊ ಕ್ವಿಡ್ 1.0 ಲೀಟರ್ ಎಸ್‌ಸಿಇ (Smart Control efficiency) ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಎಎಂಟಿ ಈಸಿ-ಆರ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ವಿನ್ಯಾಸ
ಈಗ ಮಾರುಕಟ್ಟೆಯಲ್ಲಿರುವ 800 ಸಿಸಿ ಕ್ವಿಡ್ ಕಾರಿನ ವಿನ್ಯಾಸ ಹೋಲಿಸಿದಾಗ 1.0 ಲೀಟರ್ ರೆನೊ ಎಎಂಟಿ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಹಾಗಿದ್ದರೂ ದೇಹ ರಚನೆಯಲ್ಲಿ ಸಣ್ಣ ಪುಟ್ಟ ಪರಿಣಾಮಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಅಲ್ಲದೆ ಕಾರಿನ ಒಳಮೈಯಲ್ಲಿ 4.1 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಗಳನ್ನು ಆಳವಡಿಸಲಾಗಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ಸೆಗ್ಮೆಂಟ್ ಲೀಡರ್ ಆಲ್ಟೊ ಕೆ10 ಎಎಂಟಿ ಮಾದರಿಗೆ ನೂತನ ರೆನೊ ಕ್ವಿಡ್ ಈಸಿ-ಆರ್ ಎಎಂಟಿ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

More from DriveSpark

Article Published On: Saturday, February 6, 2016, 11:00 [IST]
English summary
2016 Auto Expo: Renault Kwid Gets A New 1-Litre Engine And AMT Gearbox
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+