ಗೊಂದಲ ಬೇಡ, ಷೆವರ್ಲೆ ಕಾರುಗಳನ್ನು ಖರೀದಿಸಲು ಇದೇ ಸಕಾಲ!
ಷೆವರ್ಲೆ ಕಾರುಗಳನ್ನು ಖರೀದಿಸುವ ಇರಾದೆಯಲ್ಲಿರುವೀರಾ? ಯಾವ ಕಾರು ಅತ್ಯುತ್ತಮ ಎಂಬ ಗೊಂದಲ ಕಾಡುತ್ತಿದೆಯೇ ? ಸಂಶಯವೇ ಬೇಡ ಬಿಡಿ. ಷೆವರ್ಲೆ ಕಾರುಗಳನ್ನು ಖರೀದಿಸಲು ಇದೇ ಸಕಾಲ. ಯಾಕೆಂದರೆ ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್, ತನ್ನ ಜನಪ್ರಿಯ ಷೆವರ್ಲೆ ಕಾರುಗಳಿಗೆ ಭಾರತದಲ್ಲಿ ಭಾರಿ ಆಫರುಗಳನ್ನು ಮುಂದಿಡುತ್ತಿದೆ.
ಮುಂಗಾರು ಮಳೆ ಆರಂಭವಾಗಿರುವಂತೆಯೇ ಸಹಜವಾಗಿಯೇ ಕಾರು ಮಾರುಕಟ್ಟೆ ಕೊಂಚ ಹಿನ್ನಡೆಯನ್ನು ಅನುಭವಿಸುತ್ತದೆ. ಇನ್ನೊಂದೆಡೆ ದೇಶದಲ್ಲಿ ತನ್ನದೇ ಆದ ಛಾಪು ಒತ್ತುವ ಇರಾದೆಯಲ್ಲಿರುವ ಷೆವರ್ಲೆ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡು ಅರ್ಧ ವಾರ್ಷಿಕದ ಸಂಭ್ರಮದ ಭಾಗವಾಗಿ ಜನಪ್ರಿಯ ಮಾದರಿಗಳಿಗೆ ಆಫರ್ ಗಳನ್ನು ಮುಂದಿಡುತ್ತಿದೆ.

ಷೆವರ್ಲೆ ಸೈಲ್ ಕಾಂಪಾಕ್ಟ್ ಸೆಡಾನ್
ದೇಶದೆಲ್ಲೆಡೆ ಷೆವರ್ಲೆ ಸೈಲ್ ಕಾಂಪಾಕ್ಟ್ ಸೆಡಾನ್ ಕಾರಿನ ಖರೀದಿ ವೇಳೆಯಲ್ಲಿ 47,000 ರುಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತದೆ. ಇದಲ್ಲದೆ 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಹ ಪಡೆಯಬಹುದಾಗಿದೆ.

ಷೆವರ್ಲೆ ಸೈಲ್ ಕಾಂಪಾಕ್ಟ್ ಸೆಡಾನ್
ಷೆವರ್ಲೆ ಸೈಲ್ ಕಾಂಪಾಕ್ಟ್ ಸೆಡಾನ್ ಕಾರು ಖರೀದಿಸಲು ಇದುವೇ ಸೂಕ್ತ ಸಮಯವಾಗಿದ್ದು, ಮೂರು ವರ್ಷಗಳ ಉಚಿತ ನಿರ್ವಹಣೆಯನ್ನು ಸಂಸ್ಥೆ ನೋಡಿಕೊಳ್ಳಲಿದೆ.

ಷೆವರ್ಲೆ ಎಂಜಾಯ್
ಇತ್ತೀಚೆಗಿನ ಕಾಲಘಟ್ಟದಲ್ಲಿ ಷೆವರ್ಲೆ ಪೈಕಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿದ ಮಾದರಿಗಳಲ್ಲಿ ಎಂಜಾಯ್ ಬಹು ಬಳಕೆಯ ವಾಹನ ಒಂದಾಗಿದೆ. ಈಗ ತನ್ನ ಜನಪ್ರಿಯ ಮಾದರಿಯ ಖುಷಿಯನ್ನು ಗ್ರಾಹಕರೊಂದಿಗೂ ಹಂಚಿಕೊಳ್ಳಲು ಮುಂದುವಾಗಿರುವ ಷೆವರ್ಲೆ, 55,000 ರು.ಗಳ ಪ್ರಯೋಜನವನ್ನು ನೀಡುತ್ತಿದೆ.

ಷೆವರ್ಲೆ ಎಂಜಾಯ್
ಷೆವರ್ಲೆ ಎಂಜಾಯ್ ಖರೀದಿ ವೇಳೆಯಲ್ಲಿ 20,000 ರು.ಗಳ ಎಕ್ಸ್ ಚೇಂಜ್ ಆಫರ್ ಸಹ ಲಭ್ಯವಾಗಲಿದೆ. ಇದರ ಹೊರತಾಗಿ ಒಂದು ವರ್ಷದ ವರೆಗೆ ಉಚಿತ ವಿಮೆ ಸೌಲಭ್ಯವೂ ಸಿಗಲಿದೆ.

ಷೆವರ್ಲೆ ಬೀಟ್ ಹ್ಯಾಚ್ ಬ್ಯಾಕ್
ಸಣ್ಣ ಹ್ಯಾಚ್ ಬ್ಯಾಕ್ ಕಾರಿಗೆ ಹೆಚ್ಚು ಆಫರ್ ನೀಡುವ ಮೂಲಕ ಷೆವರ್ಲೆ ಅಚ್ಚರಿ ಮೂಡಿಸಿದೆ. ನೂತನ ಬೀಟ್ ಖರೀದಿ ವೇಳೆಯಲ್ಲಿ ಗ್ರಾಹಕರು 72,000 ರು.ಗಳ ವರೆಗಿನ ಪ್ರಯೋಜನ ಪಡೆಯಬಹುದಾಗಿದೆ.

ಷೆವರ್ಲೆ ಬೀಟ್ ಹ್ಯಾಚ್ ಬ್ಯಾಕ್
ಇದರ ಜೊತೆಗೆ 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು ಮೂರು ವರ್ಷಗಳ ವರೆಗೆ ಉಚಿತ ವಿಮಾ ಸೇವೆಯೂ ಲಭ್ಯವಾಗಲಿದೆ.


Click it and Unblock the Notifications








