ದಟ್ಸನ್ ಕಾರು ಬುಕ್ ಮಾಡಿ ಚಿನ್ನದ ನಾಣ್ಯ ನಿಮ್ಮದಾಗಿಸಿ!
ಹಬ್ಬದ ಆವೃತ್ತಿಯನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ಭಾರತೀಯ ಗ್ರಾಹಕರಿಗೆ ಅತ್ಯಾಕರ್ಷಕ ಆಫರುಗಳನ್ನು ಮುಂದಿಟ್ಟಿದೆ.
2016 ಸೆಪ್ಟೆಂಬರ್ 30ರ ಮೊದಲು ದಟ್ಸನ್ ಕಾರುಗಳನ್ನು ಬುಕ್ ಮಾಡಿಕೊಳ್ಳುವವರು ಈ ವಿಶೇಷ ಉಡುಗೊರೆಗಳನ್ನು ಪಡೆಯಬಹುದಾಗಿದೆ. ತನ್ಮೂಲಕ ನಿಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಬಹುದಾಗಿದೆ.

ಜನಪ್ರಿಯ ದಟ್ಸನ್ ರೆಡಿ ಗೊ ಖರೀದಿ ವೇಳೆಯಲ್ಲಿ ಶೇಕಡಾ 8.99 ಬಡ್ಡಿದರಲ್ಲಿ ವಿಶೇಷ ಹಣಕಾಸು ನೆರವನ್ನು ನೀಡಲಾಗುತ್ತದೆ. ಇದೇ ವೇಳೆಯ ರೆಡಿ ಗೊ ಬುಕ್ ಮಾಡಿದವರಿಗೆ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ.

ಇನ್ನೊಂದೆಡೆ ದಟ್ಸನ್ ಗೊ ಪ್ಲಸ್ ಕಾರಿಗೆ ಮೊದಲ ವರ್ಷದ ಉಚಿತ ವಿಮೆ ಸೇವೆಯನ್ನು ನೀಡಲಾಗುತ್ತದೆ. ಇಲ್ಲೂ ಸಪ್ಟೆಂಬರ್ 30ರೊಳಗೆ ಬುಕ್ಕಿಂಗ್ ಮಾಡಿದ್ದಲ್ಲಿ ಶೇಕಡಾ 8.99 ವಿಶೇಷ ಬಡ್ಡಿದರ ಹಾಗೂ ಚಿನ್ನದ ನಾಣ್ಯ ಗೆಲ್ಲಬಹುದಾಗಿದೆ.

ದಟ್ಸನ್ ಗೊ ಹ್ಯಾಚ್ ಬ್ಯಾಕ್ ಕಾರಿಗೂ ಆಫರ್ ಅನ್ವಯವಾಗಲಿದೆ. ದಟ್ಸನ್ ಗೊ ಹ್ಯಾಚ್ ಬ್ಯಾಕ್ ಖರೀದಿ ವೇಳೆಯಲ್ಲೂ ಉಚಿತ ಚಿನ್ನದ ನಾಣ್ಯ ಹಾಗೂ ಶೇಕಡಾ 8.99 ಬಡ್ಡಿದರದಲ್ಲಿ ವಿಶೇಷ ಹಣಕಾಸು ನೆರವನ್ನು ನೀಡಲಾಗುತ್ತದೆ.

ನಾವು ಈಗಾಗಲೇ ವರದಿ ಮಾಡಿರುವಂತೆಯೇ ಹಬ್ಬದ ಆವೃತ್ತಿಗೆ ಕಿಚ್ಚು ಹಚ್ಚಲು ಮುಂದಾಗಿರುವ ದಟ್ಸನ್, ದಟ್ಸನ್ ರೆಡಿ ಗೊ ಸ್ಪೋರ್ಟ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.


Click it and Unblock the Notifications




















































