ದಟ್ಸನ್ ರೆಡಿ ಗೊ ಸ್ಪೋರ್ಟ್ ಭಾರತದಲ್ಲಿ ಬಿಡುಗಡೆ
ಹಬ್ಬದ ಆವೃತ್ತಿಗೆ ಮೆರಗು ತುಂಬಲು ದಟ್ಸನ್ ರೆಡಿ ಗೊ ಸ್ಪೋರ್ಟ್ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಕಾರಿನ ದೆಹಲಿ ಎಕ್ಸ್ ಶೋ ರೂಂ ಬೆಲೆ 3.49 ಲಕ್ಷ ರುಪಾಯಿಗಳಷ್ಟು ನಿಗದಿಗೊಂಡಿದೆ.
ರೆನೊ ಕ್ವಿಡ್ ಜೊತೆ ತಳಹದಿಯನ್ನು ಹಂಚಿಕೊಂಡಿರುವ ದಟ್ಸನ್ ರೆಡಿ ಗೊ ಸಣ್ಣ ಕಾರು ವಿಭಾಗದಲ್ಲಿ ಸಂಚಲನವನ್ನು ಮೂಡಿಸುವ ಇರಾದೆಯಲ್ಲಿದೆ. ಇದು ಮಾರುತಿ ಆಲ್ಟೊ ಜೊತೆಗೆ ರೆನೊ ಕ್ವಿಡ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

2016 ರಿಯೋ ಒಲಿಂಪಿಕ್ ಜಾಗತಿಕ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಸಾನಿಧ್ಯದಲ್ಲಿ ದಟ್ಸನ್ ರೆಡಿ ಗೊ ಸ್ಪೋರ್ಟ್ ಸೀಮಿತ ಆವೃತ್ತಿಯ ಕಾರನ್ನು ಬಿಡುಗಡೆಗೊಳಿಸಲಾಯಿತು.

ದಟ್ಸನ್ ರೆಡಿ ಗೊ ಸ್ಪೋರ್ಟ್ ಆವೃತ್ತಿಯು ಟಾಪ್ ಎಂಡ್ ಎಸ್ ವೆರಿಯಂಟ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಇದು ಹಬ್ಬದ ಆವೃತ್ತಿಯನ್ನು ಗುರಿಯಾಗಿಟ್ಟುಕೊಂಡು ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿರುವ ದಟ್ಸನ್ ರೆಡಿ ಗೊ ಇದುವರೆಗೆ 14,000 ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ತನ್ಮೂಲಕ ರೆನೊ ಕ್ವಿಡ್ ತರಹನೇ ಗಮನಾರ್ಹ ಸಾಧನೆಯನ್ನು ಮಾಡಿದೆ.

ದಟ್ಸನ್ ರೆಡಿ ಗೊ ಸ್ಪೋರ್ಟ್ ಕಾರಿನಲ್ಲಿ ಪ್ರಮುಖವಾಗಿಯೂ ಅಂದತೆಯಲ್ಲಿ ಬದಲಾವಣೆ ಕಂಡುಬಂದಿದೆ. ಹೊಸ ಥೀಮ್ ಗ್ರಿಲ್, ಮದ್ಯದಲ್ಲಿ ಬಣ್ಣದ ಪಟ್ಟಿ, ವೀಲ್ ಕವರ್, ಕ್ರೀಡಾತ್ಮಕ ಡ್ಯಾಶ್ ಬೋರ್ಡ್, ಕ್ರೀಡಾತ್ಮಕ ರೂಫ್ ಸ್ಪಾಯ್ಲರ್ ಮತ್ತು ಕ್ರೀಡಾತ್ಮಕ ಗ್ರಾಫಿಕ್ಸ್ ಗಳು ಕಂಡುಬರಲಿದೆ.

ಇನ್ನುಳಿದಂತೆ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಪ್ಪು ಒಳಮೈ, ಕೀಲೆಸ್ ಎಂಟ್ರಿ, ಬ್ಲೂಟೂತ್ ಗಳಂತಹ ಸೇವೆಗಳು ಇರಲಿದೆ. ಆದರೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಕೊರತೆಯು ಕಾಡಲಿದೆ.

ಅಂದ ಹಾಗೆ 800 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ದಟ್ಸನ್ ರೆಡಿ ಗೊ 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಭಾರತೀಯ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆಯ ಪ್ರಕಾರ ದಟ್ಸನ್ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮೂರು ಆಕರ್ಷಕ ಬಣ್ಣಗಳು: ರುಬಿ, ವೈಟ್ ಮತ್ತು ಗ್ರೇ


Click it and Unblock the Notifications








