ಫಿಯೆಟ್ ಕಾರುಗಳಿಗೆ ಭಾರಿ ಆಫರ್; ಮಿಸ್ ಮಾಡದಿರಿ!
ಇಟಲಿ ಮೂಲದ ಜನಪ್ರಿಯ ಸಂಸ್ಥೆ ಫಿಯೆಟ್ ಭಾರತದಲ್ಲಿ ತನ್ನೆಲ್ಲ ಮಾದರಿಗಳಿಗೆ ಭಾರಿ ಆಫರುಗಳನ್ನು ಮುಂದಿಡುತ್ತಿದೆ. 2016 ಹಬ್ಬದ ಆವೃತ್ತಿಯ ಸಂಭ್ರಮದ ಅಂಗವಾಗಿ ಫಿಯೆಟ್ ಕಾರುಗಳನ್ನು ಕೊಳ್ಳುವಾಗ ಗರಿಷ್ಠ ಆಫರ್ ಮತ್ತು ಪ್ರಯೋಜನಗಳನ್ನು ನೀಡಲಾಗುತ್ತಿದೆ.

2016 ಅಕ್ಟೋಬರ್ ತಿಂಗಳಲ್ಲಿ ಫಿಯೆಟ್ ಕಾರುಗಳನ್ನು ಖರೀದಿಸುವಾಗ ಗರಿಷ್ಠ 85,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಪುಂಟೊ ಇವೊ ಹ್ಯಾಚ್ ಬ್ಯಾಕ್ ಈಗ ದೆಹಲಿ ಎಕ್ಸ್ ಶೋ ರೂಂ ಬೆಲೆ 5.86 ರು.ಗಳಲ್ಲಿ ದೊರಕಲಿದೆ. ಈ ಮೂಲಕ 60,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಿಗೆ ಆಫರುಗಳು ಅನ್ವಯವಾಗಲಿದೆ.

ಇನ್ನೊಂದೆಡೆ ಲಿನಿಯಾ ಸೆಡಾನ್ ಕಾರು ಖರೀದಿಸುವಾಗ 60,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಲಿನಿಯಾ ಸೆಡಾನ್ ಕಾರು ಆಕರ್ಷಕ 7.82 ಲಕ್ಷ ರು.ಗಳಲ್ಲಿ (ದೆಹಲಿ ಎಕ್ಸ್ ಶೋ ರೂಂ) ನೀಡಲಾಗುತ್ತದೆ.

ಫಿಯೆಟ್ ಲಿನಿಯಾ ಕ್ಲಾಸಿಕ್ ಕಾರು ಖರೀದಿಯಲ್ಲೂ 65,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ನೂತನ ಕಾರು ದೆಹಲಿ ಎಕ್ಸ್ ಶೋರೂಂ ಬೆಲೆಯ ಪ್ರಕಾರ 6.46 ಲಕ್ಷ ರು.ಗಳಿಗೆ ಲಭ್ಯವಾಗಲಿದೆ.

ಅತ್ತ ಫಿಯೆಟ್ ಅವೆಂಚ್ಯುರಾ ಕ್ರಾಸೋವರ್ ಮಾದರಿ ಖರೀದಿಯಲ್ಲೂ ಗರಿಷ್ಠ 85,000 ರು.ಗಳ ರೆಗೆ ಆಫರ್ ನೀಡಲಾಗುತ್ತದೆ. ಫಿಯೆಟ್ ಅವೆಂಚ್ಯುರಾ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.87 ಲಕ್ಷ ರು.ಗಳಿಗೆ ಲಭ್ಯವಾಗಲಿದೆ.

ಆದರೆ ದುರದೃಷ್ಟವಶಾತ್ ಫಿಯೆಟ್ ಅಬಾರ್ತ್ ಶ್ರೇಣಿಯ ಕಾರುಗಳಿಗೆ ಯಾವುದೇ ಆಫರ್ ನೀಡಲಾಗುತ್ತಿಲ್ಲ. ಅಂದರೆ ಹೊಸತಾಗಿ ಬಿಡುಗಡೆಯಾಗಿರುವ ಫಿಯೆಟ್ ಅರ್ಬನ್ ಕ್ರಾಸ್ ಕಾರಿಗೆ ಆಫರ್ ಗಳು ಅನ್ವಯವಾಗುವುದಿಲ್ಲ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.85 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.


Click it and Unblock the Notifications








