ಫಿಯೆಟ್ ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಸೀಮಿತ ಆವೃತ್ತಿ ಬಿಡುಗಡೆ
ಫಿಯೆಟ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಸೀಮಿತ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಿದೆ.
ಇಟಲಿ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಫಿಯೆಟ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಸೀಮಿತ ಆವೃತ್ತಿಯ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಫಿಯೆಟ್ ಡೀಲರುಗಳ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಮಾದರಿಗಳು 37,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಎಡಿಷನ್ ಕಾರುಗಳು ಪುಂಟೊ ಹಾಗೂ ಲಿನಿಯಾದ ಡೀಸೆಲ್ ಎಂಜಿನ್ ನಿಯಂತ್ರಿತ ಡೈನಾಮಿಕ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಫಿಯೆಟ್ ಪುಂಟೊ ಕಾರ್ಬನ್ ಮಾದರಿಯು ಹೊಸತಾದ ಮುತ್ತಿ ಬಿಳಿ ಬಣ್ಣ, ಗ್ಲೋಸ್ ಬ್ಲ್ಯಾಕ್ ರೂಫ್, ಸಿ ಪಿಲ್ಲರ್ ನಲ್ಲಿ ಕಾರ್ಬನ್ ಲೊಗೊ ಮತ್ತು ಗನ್ ಮೆಟಲ್ ಸ್ಪರ್ಶಿತ ಅಲಾಯ್ ಚಕ್ರಗಳನ್ನು ಪಡೆಯಲಿದೆ.

ಎಲ್ಲ ಕಪ್ಪು ವರ್ಣದ ಒಳಮೈಯನ್ನು ಫಿಯೆಟ್ ಪುಂಟೊ ಕಾರ್ಬನ್ ಮಾದರಿಯು ಗಿಟ್ಟಿಸಿಕೊಳ್ಳಲಿದೆ. ಒಟ್ಟಿನಲ್ಲಿ ಅಂದತೆಗೆ ಹೆಚ್ಚಿನ ಮನೆ ಹಾಕಲಾಗಿದೆ.

ಲಿನಿಯಾ ರಾಯಲ್ ಕೂಡಾ ಇದಕ್ಕೆ ಸಮಾನವಾದ ಮುತ್ತಿನ ಬಿಳಿ ಬಣ್ಣ, ಕಾಂಟ್ರಾಸ್ಟ್ ರೂಫ್, ಗನ್ ಮೆಟಲ್ ಅಲಾಯ್ ವೀಲ್, ಸಿ ಪಿಲ್ಲರ್ ನಲ್ಲಿ ರಾಯಲ್ ಲಾಂಝನ ಮತ್ತು ಕಾರಿನೊಳಗೆ ಸಾಂಪ್ರದಾಯಿಕ ಡ್ಯುಯಲ್ ಟೋನ್ ಒಳಮೈ ಮತ್ತು ಲೆಥರ್ ಸೀಟುಗಳನ್ನು ಪಡೆಯಲಿದೆ.

ಈ ಎರಡು ಮಾದರಿಗಳು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 209 ಎನ್ ಎಂ ತಿರುಗುಬಲದಲ್ಲಿ 93 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಫಿಯೆಟ್ ಪುಂಟೊ ಕಾರ್ಬನ್ ಮತ್ತು ಲಿನಿಯಾ ರಾಯಲ್ ಮಾದರಿಗಲು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 8.27 ಮತ್ತು 12.27 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








