ಭಾರತಕ್ಕೆ ಕಮ್ ಬ್ಯಾಕ್ ಮಾಡಲಿರುವ ನೈಜ ಪುಂಟೊ
ಇತಿಹಾಸ ಪ್ರಸಿದ್ಧ ಇಟಲಿಯ ವಾಹನ ತಯಾರಿಕ ಸಂಸ್ಥೆ ಫಿಯೆಟ್ 2014 ಆಗಸ್ಟ್ ತಿಂಗಳಲ್ಲಿ ಗ್ರ್ಯಾಂಡ್ ಪುಂಟೊ ಫೇಸ್ ಲಿಫ್ಟ್ ಮಾದರಿಯಾಗಿರುವ ಪುಂಟೊ ಇವೊ ಬಿಡುಗಡೆಗೊಳಿಸಿತ್ತು. ಆದರೆ ನಿರೀಕ್ಷಿದಷ್ಟು ಮಾರಾಟವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದರಿಂದಲೂ ಹಿಂಜರಿಯದ ಫಿಯೆಟ್ ಸಂಸ್ಥೆಯು ಪುಂಟೊ ಪ್ಯೂರ್ ಎಂಬ ಹೆಸರಿನಲ್ಲಿ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಮಗದೊಮ್ಮೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಈ ಮೂಲಕ ನೈಜ ಪುಂಟೊ ಪುನರಾಗಮನದ ನಿರೀಕ್ಷೆಯಲ್ಲಿದೆ.

ಫಿಯೆಟ್ ಪುಂಟೊ ಪ್ಯೂರ್ ಆಕ್ಟಿವ್, ಡೈನಾಮಿಕ್ ಮತ್ತು ಇಮೊಷನ್ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ.
ಇದರ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 197 ಎನ್‌ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ 1.2 ಹಾಗೂ 1.4 ಲೀಟರ್ ಪೆಟ್ರೋಲ್ ಎಂಜಿನ್ ಗಳು ಅನುಕ್ರಮವಾಗಿ 68 (96 ಎನ್‌ಎಂ ತಿರುಗುಬಲ) ಹಾಗೂ 90 (115 ಎನ್‌ಎಂ ತಿರುಗುಬಲ) ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕಂಡುಬರಲಿದೆ.
ಅಂದ ಹಾಗೆ ಪ್ರಸಕ್ತ ಜನವರಿ ತಿಂಗಳಲ್ಲಿ ನೂತನ ಪುಂಟೊ ಪ್ಯೂರ್ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳು ಕಂಡುಬಂದಿದೆ ಎಂದು ವಾಹನ ಮೂಲಗಳು ತಿಳಿಸುತ್ತದೆ.


Click it and Unblock the Notifications








