8 ತಿಂಗಳು ಕಾದು ಕುಳಿತರೂ ಸಿಗುತ್ತಿಲ್ಲ ಫೋರ್ಡ್ ಎಂಡೀವರ್?

By Nagaraja

ಕೆಲವು ಸಮಯಗಳ ಹಿಂದೆಯಷ್ಟೇ ಅಮೆರಿಕದ ಮೂಲದ ದೈತ್ಯ ವಾಹನ ಸಂಸ್ಥೆ ಫೋರ್ಡ್, ಅತಿ ನೂತನ ಎಂಡೀವರ್ ಕಾರನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲೀಗ ಈ ಹಾಟ್ ಕಾರಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

2016 ಫೋರ್ಡ್ ಎಂಡೀವರ್ ಕಾರಿಗೆ ಎಷ್ಟೊಂದು ಬೇಡಿಕೆ ಇದೆಯೆಂದರೆ ಎಂಟು ತಿಂಗಳಾದ್ರು ತಮ್ಮ ಕನಸಿನ ಕಾರನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಭಾವ್ಯ ಗ್ರಾಹಕರೊಬ್ಬರು ತಮ್ಮ ವ್ಯಥೆ ತೋಡಿಕೊಂಡಿದ್ದಾರೆ.

ಹೊಸ ಫೋರ್ಡ್ ಎಂಡೀವರ್‌ಗೆ ಭಾರಿ ಬೇಡಿಕೆ

ಬೆಂಗಳೂರಿನಲ್ಲಿ ಮಾತ್ರವಲ್ಲ ನೆರೆಯ ಚೆನ್ನೈನಲ್ಲೂ ಫೋರ್ಡ್ ಎಂಡೀವರ್ ಕ್ರೀಡಾ ಬಳಕೆಯ ವಾಹನಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಈ ಸಂಬಂಧ ಡೀಲರುಗಳನ್ನು ಸಂಪರ್ಕಿಸಿದಾಗ ಎಂಟು ತಿಂಗಳ ಕಾಯುವಿಕೆ ಅವಧಿ ಇದೆ ಎಂದು ಕೈ ತೊಳೆದುಕೊಳ್ಳುತ್ತಾರೆ.

ಹೊಸ ಫೋರ್ಡ್ ಎಂಡೀವರ್‌ಗೆ ಭಾರಿ ಬೇಡಿಕೆ

ಭಾರತಕ್ಕೆ 24.75 ಲಕ್ಷ ರು.ಗಳ ಮುಂಬೈ ಎಕ್ಸ್ ಶೋ ರೂಂ ಬೆಯಲ್ಲಿ ಎಂಟ್ರಿ ಕೊಟ್ಟಿರುವ ಫೋರ್ಡ್ ಎಂಡೀವರ್ ಟಾಪ್ ಎಂಡ್ 3.2 ಲೀಟರ್ ವೆರಿಯಂಟ್ ಆನ್ ರೋಡ್ ಬೆಲೆ 35 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಹೊಸ ಫೋರ್ಡ್ ಎಂಡೀವರ್‌ಗೆ ಭಾರಿ ಬೇಡಿಕೆ

ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಅತ್ಯುತ್ತಮ ವಿನ್ಯಾಸ, ರಸ್ತೆ ಸಾನಿಧ್ಯ, ನಿರ್ವಹಣೆ ಮತ್ತು ಆರಾಮದಾಯಕತೆಯನ್ನು ಕಾಯ್ದುಕೊಂಡಿರುವುದು ಎಂಡೀವರ್ ಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.

ಹೊಸ ಫೋರ್ಡ್ ಎಂಡೀವರ್‌ಗೆ ಭಾರಿ ಬೇಡಿಕೆ

ಇಲ್ಲಿ ಎಂಡೀವರ್ ಪ್ರತಿಸ್ಪರ್ಧಿ ಷೆವರ್ಲೆ ಟ್ರೈಲ್ ಬ್ಲೇಜರ್ ಪರಿಗಣಿಸಿದಾಗ ನಿಕಟ ಪೈಪೋಟಿ ನೀಡುವಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ವೈಫಲ್ಯ ಅನುಭವಿಸಿದೆ.

ವಿನ್ಯಾಸ

ವಿನ್ಯಾಸ

ವಿನ್ಯಾಸ ಹಾಗೂ ರಸ್ತೆ ಸಾನಿಧ್ಯದಲ್ಲಿ ಫೋರ್ಡ್ ತಂದಿರುವ ಬದಲಾವಣೆಯೇ ನೂತನ ಎಂಡೀವರ್ ಗೆ ವರದಾನವಾಗಿ ಪರಿಣಮಿಸಿದೆ. ಇದು ಹೊಸ ಜನಾಂಗದ ದೊಡ್ಡದಾದ ಎಸ್‌ಯುವಿ ಲುಕ್ ಕಾಪಾಡಿಕೊಂಡಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ 2016 ಎಂಡೀವರ್ 2.2 ಲೀಟರ್ ಮತ್ತು 3.2 ಲೀಟರ್ (158 ಅಶ್ವಶಕ್ತಿ, 385 ಎನ್ ಎಂ ತಿರುಗುಬಲ) ಟರ್ಬೊ ಡೀಸೆಲ್ ಎಂಜಿನ್ (197 ಅಶ್ವಶಕ್ತಿ, 470 ಎನ್ ಎಂ ತಿರುಗುಬಲ) ನಿಂದ ನಿಯಂತ್ರಿಸಲ್ಪಡುತ್ತದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ಫೋರ್ಡ್ ಎಂಡೀವರ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳ ಆಯ್ಕೆಯೊಂದಿಗೆ ಲಭ್ಯವಾಗುತ್ತಿರುವುದು ಮತ್ತಷ್ಟು ಅದ್ಭುತ ಚಾಲನಾ ಅನುಭವ ನೀಡಲಿದೆ. ಅಷ್ಟೇ ಯಾಕೆ ಇದರ ಫೋರ್ ವೀಲ್ ಚಾಲನಾ ವ್ಯವಸ್ಥೆಯು ಆಫ್ ರೋಡ್ ಚಾಲನೆಯನ್ನು ಪ್ರದಾನ ಮಾಡಲಿದೆ.

ಮೈಲೇಜ್

ಮೈಲೇಜ್

ಐಷಾರಾಮಿ ಕಾರು ಆಗಿರುವ ಹೊರತಾಗಿಯೂ ನೂತನ ಫೋರ್ಡ್ ಎಂಡೀವರ್ 2.2 ಲೀಟರ್ ಮತ್ತು 3.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 14.12 ಹಾಗೂ 10.91 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ. ಅಂತೆಯೇ 2.2 ಲೀಟರ್ ಆಟೋಮ್ಯಾಟಿಕ್ 12.62 ಕೀ.ಮೀ. ಮೈಲೇಜ್ ನೀಡಲಿದೆ. ಇದರೊಂದಿಗೆ 80 ಲೀಟರ್ ಗಳ ಇಂಧನ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ನೂತನ ಫೋರ್ಡ್ ಎಂಡೀವರ್ ಗಮನಾರ್ಹ ವೈಶಿಷ್ಟ್ಯಗಳನ್ನು ನೋಡಿದಾಗ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸನ್ ರೂಫ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು, 10 ಸ್ಪೀಕರ್ ಆಡಿಯೋ ಸಿಸ್ಟಂ, ಪವರ್ ಫೋಲ್ಡಿಂಗ್ ಸೀಟು, ಟೈಲ್ ಗೇಟ್, ಟರೈನ್ ಮ್ಯಾನೇಜ್ ಮೆಂಟ್ ಕಂಟ್ರೋಲ್, ಎಲ್ ಇಡಿ ಲೈಟಿಂಗ್, 18 ಇಂಚುಗಳ ಚಕ್ರಗಳು ಮತ್ತು ಎಲ್ಲ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ.

ಸುರಕ್ಷತೆ

ಸುರಕ್ಷತೆ

ಇಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏಳು ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಹಿಲ್ ಕ್ಲೈಂಬ್, ಡಿಸೆಂಟ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಇರಲಿದೆ.

ಹೊಸ ಫೋರ್ಡ್ ಎಂಡೀವರ್‌ಗೆ ಭಾರಿ ಬೇಡಿಕೆ

ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಎಂಡೀವರ್ ಮಾರುಕಟ್ಟೆಯಲ್ಲಿ ಮಿಂಚಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ನಿಗದಿತ ಅವಧಿಯಲ್ಲಿ ವಿತರಣೆ ಮಾಡಲು ವಿಫಲವಾಗುತ್ತಿರುವುದು ಅಥಾ ಅಲಭ್ಯತೆಯು ಫೋರ್ಡ್ ಗೆ ಮುಂದಿನ ದಿನಗಳಲ್ಲಿ ಭಾರಿ ಹೊಡೆತ ನೀಡುವ ಭೀತಿಯಿದೆ. ಇದು ಸಂಸ್ಥೆಯ ಓಟ್ಟಾರೆ ಮಾರಾಟದ ಮೇಲೂ ಹೊಡೆತ ಬೀಳಲಿದೆ.

Article Published On: Thursday, March 10, 2016, 9:18 [IST]
English summary
Customer View: 8 Months Waiting Is Too Long For The Ford Endeavour
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+