ಹೊಸ ಫೋರ್ಡ್ ಎಂಡೀವರ್ ಬಿಡುಗಡೆ; ಬೆಲೆ 24.75 ಲಕ್ಷ ರು.

By Nagaraja

ದೇಶದ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ವಿಭಾಗಕ್ಕೆ ತಾಜಾತನ ತುಂಬಿರುವ ನೂತನ ಫೋರ್ಡ್ ಎಂಡೀವರ್ ಭರ್ಜರಿ ಬಿಡುಗಡೆ ಕಂಡಿದೆ.

ಪ್ರಾರಂಭಿಕ ಬೆಲೆ: 24.75 ಲಕ್ಷ ರು.

ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ನೂತನ ಫೋರ್ಡ್ ಎಂಡೀವರ್ ಅದ್ಭುತ ರಸ್ತೆ ಸಾನಿಧ್ಯ, ಸ್ಮಾರ್ಟ್ ಡಿಸೈನ್ ಹಾಗೂ ಮುಂದುವರಿದ ತಂತ್ರಗಾರಿಕೆಗಳನ್ನು ಪಡೆದುಕೊಂಡಿದೆ.

ಫೋರ್ಡ್ ಎಂಡೀವರ್

ಸ್ಮಾರ್ಟ್ ಮತ್ತು ಕ್ರಿಯಾತ್ಮಕ ವಿನ್ಯಾಸ
ಸಂಪೂರ್ಣವಾಗಿ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಿರುವ ಫೋರ್ಡ್ ಎಂಡೀವರ್ ಮುಂದುಗಡೆ ಸಿಗ್ನೇಚರ್ ಎಲ್ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಹಾಗೂ ಅದ್ಭುತ ರಸ್ತೆಯನ್ನು ಪಡೆದುಕೊಂಡಿದೆ.

ಉನ್ನತ ಮಟ್ಟದ ಚಲನಶೀಲತೆ, ಏರೋಡೈನಾಮಿಕ್ ವಿನ್ಯಾಸ ಹಾಗೂ ಆಧುನಿಕತೆ ತಕ್ಕ ಪ್ರೀಮಿಯಂ ಒಳಮೈಗಳು ಫೋರ್ಡ್ ಗುಣಮಟ್ಟಕ್ಕೆ ಸಾಕ್ಷಿಯಾಗಲಿದೆ.

ಫೋರ್ಡ್ ಎಂಡೀವರ್ ಕಾರಿನಲ್ಲಿ ಏಳು ಮಂದಿಗೆ ಆರಾಮವಾಗಿ ಚಲಿಸಬಹುದಾಗಿದೆ. ಇದರೊಳಗೆ 30 ಸ್ಟೋರೆಜ್ ಜಾಗ, ಪವರ್ ಔಟ್ಲೆಟ್, ಪವರ್ ಫೋಲ್ಡ್ ಸೇರಿದಂತೆ ಆರಾಮದಾಯಕ ಸೀಟುಗಳನ್ನು ಹೊಂದಿದೆ.

ಇನ್ನು ಹಿಂಬದಿಯ ಸೀಟು ಮಡಚಿದಾಗ ಢಿಕ್ಕಿ ಜಾಗ 20,10 ಲೀಟರ್ ಗಳಿಗೆ ಏರಿಕೆಯಾಗಲಿದೆ. ಇನ್ನುಳಿದಂತೆ ಪ್ಯಾನರಾಮಿಕ್ ಸನ್ ರೂಫ್ ಪ್ರಮುಖ ಆಕರ್ಷಣೆಯಾಗಲಿದೆ.


ಎಂಜಿನ್ ತಾಂತ್ರಿಕತೆ
ನೂತನ ಫೋರ್ಡ್ ಎಂಡೀವರ್ ಕಾರಿನಲ್ಲಿ ವಿಶ್ವ ದರ್ಜೆಯ ಡ್ಯುರಾಟಾರ್ಕ್ ಕುಟುಂಬದ ಎರಡು ಡೀಸೆಲ್ ಎಂಜಿನ್ ಗಳನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇದರ 3.2 ಲೀಟರ್ ಡ್ಯುರಾಟಾರ್ಕ್ ಫೈವ್ ಸಿಲಿಂಡರ್ ಟಿಡಿಸಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 470 ಎನ್ ಎಂ ತಿರುಗುಬಲದಲ್ಲಿ 200 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಮಗದೊಂದು 2.2 ಲೀಟರ್ ಡ್ಯುರಾಟಾರ್ಕ್ ಫೋರ್ ಸಿಲಿಂಡರ್ ಟಿಡಿಸಿಐ ಡೀಸೆಲ್ ಎಂಜಿನ್ 385 ಎನ್‌ಎಂ ತಿರುಗುಬಲದಲ್ಲಿ 160 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮೈಲೇಜ್

  • 3.2 ಲೀಟರ್ : 10.91 kmpl
  • 2.2 ಲೀಟರ್ (ಮ್ಯಾನುವಲ್): 14.12 kmpl
  • 2.2 ಲೀಟರ್ (ಆಟೋಮ್ಯಾಟಿಕ್): 12.62 kmpl

ಫೋರ್ಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮುಂದುವರಿದ ಚಾಲಕ ಗುರುತಿಸುವಿಕೆ ತಂತ್ರಾಂಶ ಪಡೆಯಲಿದ್ದು, ಈ ಮೂಖಾಂತರ ಚಾಲನಾ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಈಗಿನ ಚಾಲನಾ ಶೈಲಿಗೆ ಸೂಕ್ತವಾಗುವಂತೆ ಮಾಡಲಿದೆ.

ಸಾಮಾನ್ಯ ಹಾಗೂ ಆಫ್ ರೋಡ್ ರಸ್ತೆ ಪರಿಸ್ಥಿತಿಯಲ್ಲೂ 2016 ಫೋರ್ಡ್ ಎಂಡೀವರ್ ಆರಾಮ ಹಾಗೂ ಅನುಕೂಲಕರ ಚಾಲನೆಯನ್ನು ಪ್ರದಾನ ಮಾಡಲಿದೆ. ಈ ನಿಟ್ಟಿನಲ್ಲಿ ದೃಢವಾದ ದೇಹ ರಚಿಸಲಾಗಿದೆ.

ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ ನಿಮ್ಮ ಫೋರ್ಡ್ ಎಂಡೀವರ್ ಕಾರಿನಲ್ಲಿರಲಿದೆ. ಅಂತೆಯೇ 800 ಎಂಎಂ ನೀರಿನಡಿಯಲ್ಲೂ ಚಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಪ್ರಭಾವಿ 225 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಂಡಿದೆ.

ಇದರ ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ ನಾಲ್ಕು ಚಾಲನಾ ವಿಧಗಳನ್ನು ಪಡೆದುಕೊಳ್ಳಲಿದೆ. ಅವುಗಳೆಂದರೆ ನಾರ್ಮಲ್, ಸ್ನೊ/ ಮಡ್/ಗ್ಲಾಸ್, ಸ್ಯಾಂಡ್ ಮತ್ತು ರಾಕ್.

ಫೋರ್ಡ್ ಮುಂದಿನ ತಲೆಮಾರಿನ ಸಿಂಕ್ 2 ತಂತ್ರಜ್ಞಾನವು ನೂತನ ಎಂಡೀವರ್ ಕಾರಿನಲ್ಲಿ ಲಭ್ಯವಾಗಲಿದೆ. ಅಲ್ಲದೆ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 10 ಸ್ಪೀಕರ್ ಸೌಂಡ್ ಸಿಸ್ಟಂ, ವೂಫರ್ ಮುಂತಾದ ವ್ಯವಸ್ಥೆಗಳಿರಲಿದೆ.

ಇನ್ನುಳಿದಂತೆ ರೋಲ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅತ್ಯುತ್ತಮ ಚಲನಶೀಲತೆಯನ್ನು ಖಾತ್ರಿಪಡಿಸಲಿದೆ. ಅಲ್ಲದೆ ಏಳು ಏರ್ ಬ್ಯಾಗ್, ಸೆಮಿ ಆಟೋ ಪ್ಯಾರಲಲ್ ಪಾರ್ಕ್ ಅಸಿಸ್ಟ್ ಮುಂತಾದ ಭದ್ರತಾ ವೈಶಿಷ್ಟ್ಯಗಳು ಇರಲಿದೆ.


ಏಳು ಬಣ್ಣಗಳು

  • ಸನ್ ಸೆಟ್ ರೆಡ್,
  • ಗೋಲ್ಡನ್ ಬ್ರಾನ್ಜ್,
  • ಡೈಮಂಡ್ ವೈಟ್,
  • ಪ್ಯಾಂಥರ್ ಬ್ಲ್ಯಾಕ್,
  • ಮೂನ್ ಡಸ್ಟ್ ಸಿಲ್ವರ್ ಮತ್ತು
  • ಸ್ಪೋಕ್ ಗ್ರೇ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

2.2 ಲೀಟರ್
ಟ್ರೆಂಡ್ ಮ್ಯಾನುವಲ್ 4x2: 23,63,999
ಟ್ರೆಂಡ್ ಮ್ಯಾನುವಲ್ 4x4: 25,49,000
ಟ್ರೆಂಡ್ ಆಟೋಮ್ಯಾಟಿಕ್ 4x2: 24,39,000
ಟ್ರೆಂಡ್ ಆಟೋಮ್ಯಾಟಿಕ್ 4x2: 24,39,000

3.2 ಟೀಟರ್
ಟ್ರೆಂಡ್ ಆಟೋಮ್ಯಾಟಿಕ್ 4x4: 26,54,000

2.2 ಟೀಟರ್
ಟೈಟಾನಿಯಂ ಆಟೋಮ್ಯಾಟಿಕ್ 4x2: 26,14,000

3.2 ಲೀಟರ್
ಟೈಟಾನಿಯಂ ಆಟೋಮ್ಯಾಟಿಕ್ 4x4: 28,15,000

Article Published On: Wednesday, January 20, 2016, 16:12 [IST]
English summary
Ford Endeavour Launched In India For Rs. 24.75 Lakh
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+