ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಬಲ್ಲ ಮೂಲಗಳ ಪ್ರಕಾರ ಫೋರ್ಡ್ ಎಂಡೀವರ್ ಕ್ರೀಡಾ ಬಳಕೆಯ ವಾಹನ ಬೆಲೆ ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯತೆಗಳಿವೆ.

By Nagaraja

ಅಮೆರಿಕ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಫೋರ್ಡ್ ದೇಶದಲ್ಲಿ ಒದಗಿಸುತ್ತಿರುವ ಪ್ರೀಮಿಯಂ ಎಸ್ ಯುವಿ ಕಾರುಗಳಲ್ಲಿ ಎಂಡೀವರ್ ಒಂದಾಗಿದ್ದು, ಅತ್ಯುತ್ತಮ ಬೇಡಿಕೆ ಕಾಪಾಡಿಕೊಂಡಿದೆ. ಕೆಲವು ಸಮಯಗಳ ಹಿಂದೆಯಷ್ಟೇ ಹೊಸ ಸ್ವರೂಪದ ಎಂಡೀವರ್ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಈಗ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ಪ್ರಭಾವ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ಬೆಲೆ ಕಡಿತ ಘೋಷಿಸುವ ಸಾಧ್ಯತೆಯಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಫೋರ್ಡ್ ಎಂಡೀವರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನಕ್ಕೆ ಬೆಲೆ ಕಡಿತವಾಗುವ ಎಲ್ಲ ಸಂಭವವಿದೆ. ಇದು ಎರಡನೇ ಬಾರಿಗೆ ಫೋರ್ಡ್ ಬೆಲೆ ಕಡಿತದ ನೀತಿ ಅನುಸರಿಸಲಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಮಾರುಕಟ್ಟೆಯಲ್ಲಿ ಟೊಯೊಟಾ ಅತಿ ನೂತನ ಫಾರ್ಚ್ಯುನರ್ ಕಾರನ್ನು ಇತ್ತೀಚೆಗಷ್ಟೇ ಪರಿಚಯಿಸಿತ್ತು. ಇದರೊಂದಿಗೆ ಪ್ರತಿಸ್ಪರ್ಧೆಯು ಕಾವೇರುತ್ತಿದ್ದಂತೆಯೇ ಫೋರ್ಡ್ ಎಚ್ಚರಿಕೆಯ ನೀತಿ ಅನುಸರಿಸಲಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಬಲ್ಲ ಮೂಲಗಳ ಪ್ರಕಾರ ಫೋರ್ಡ್ ಬೇಸ್ ವೆರಿಯಂಟ್ ಆದ ಟ್ರೆಂಡ್ ಗೆ ಒಂದು ಲಕ್ಷ ರು.ಗಳಷ್ಟು ಬೆಲೆ ಕಡಿತವಾಗಲಿದೆ. ಅದೇ ವೇಳೆ ಹೆಚ್ಚು ಬೇಡಿಕೆಯಲ್ಲಿರುವ ಟೈಟಾನಿಯಂ ಮತ್ತಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಈ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ಎಂಟ್ರಿ ಲೆವೆಲ್ 2.2. ಲೀಟರ್ ಟ್ರೆಂಡ್ 4x2 ಮ್ಯಾನುವಲ್ ವೆರಿಯಂಟ್ ಮಾರಾಟವನ್ನು ಹಿಂಪಡೆಯಲು ಫೋರ್ಡ್ ನಿರ್ಧರಿಸಿತ್ತು. ಇದರೊಂದಿಗೆ ಐದು ವೆರಿಯಂಟ್ ಗಳಲ್ಲಿ ಮಾತ್ರ ಲಭ್ಯವಾಗಲಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಎಂಟ್ರಿ ಲೆವೆಲ್ ಟ್ರೆಂಡ್ 4x2 ಆಟೋಮ್ಯಾಟಿಕ್ ಮತ್ತು 4x4 ಮ್ಯಾನುವಲ್ ವೆರಿಯಂಟ್ ಬೆಲೆ 23.78 ಲಕ್ಷ ರು.ಗಳಲ್ಲಿ ಆರಂಭವಾಗುತ್ತದೆ. ಹಾಗೆಯೇ ಎಂಡೀವರ್ 3.2 ಲೀಟರ್ 4x4 ಆಟೋಮ್ಯಾಟಿಕ್ ಟ್ರೆಂಡ್ ವೆರಿಯಂಟ್ 25.93 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಫೋರ್ಡ್ ಎಂಡೀವರ್ ಟಾಪ್ ಟೈಟಾನಿಯಂ 3.2 ಲೀಟರ್ 4x4 ಆಟೋಮ್ಯಾಟಿಕ್ ಮತ್ತು 2.2 ಲೀಟರ್ 4x2 ಆಟೋಮ್ಯಾಟಿಕ್ ಟೈಟಾನಿಯಂ ಆವೃತ್ತಿಗಳು ಅನುಕ್ರಮವಾಗಿ 29.76 ಲಕ್ಷ ರು. ಮತ್ತು 27.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಫೋರ್ಡ್ ಎಂಡೀವರ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 3.2 ಲೀಟರ್ ಫೈವ್ ಸಿಲಿಂಡರ್ ಡ್ಯುರಾಟೆಕ್ ಟಿಡಿಸಿಐ ಡೀಸೆಲ್ ಎಂಜಿನ್ ಮತ್ತು 2.2 ಲೀಟರ್ ಫೋರ್ ಸಿಲಿಂಡರ್ ಡ್ಯುರಾಟೆಕ್ ಟಿಡಿಸಿಐ ಡೀಸೆಲ್ ಮೋಟಾರು. ಇವೆರಡು ಅನುಕ್ರಮವಾಗಿ 197 ಮತ್ತು 158 ಅಶ್ವಶಕ್ತಿಯನ್ನು ನೀಡುತ್ತದೆ.

ಮಗದೊಮ್ಮೆ ಫೋರ್ಡ್ ಎಂಡೀವರ್ ಬೆಲೆ ಕಡಿತ ಸಾಧ್ಯತೆ?

ಇನ್ನು ಆರು ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳು ಇದರಲ್ಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್ ಗೆ 14.12 ಕೀ.ಮೀ. ಮತ್ತು 12.62 ಕೀ.ಮೀ. ಮೈಲೇಜ್ ನೀಡುತ್ತದೆ.

More from DriveSpark

Article Published On: Friday, November 25, 2016, 15:15 [IST]
English summary
Ford May Revise The Price Of Endeavour In India
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+