ಫೋರ್ಡ್ ಕಾರುಗಳಿಗೆ ಬೊಂಬಾಟ್ ಆಫರ್; 91,000 ರು.ಗಳಷ್ಟು ಬೆಲೆ ಕಡಿತ
ಅಮೆರಿಕ ಮೂಲದ ಕಾರು ಸಂಸ್ಥೆ ಫೋರ್ಡ್ ಮಗದೊಮ್ಮೆ ತನ್ನ ಜನಪ್ರಿಯ ಮಾದರಿಗಳಿಗೆ ಬೆಲೆ ಕಡಿತದ ಘೋಷಣೆ ಮಾಡಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಪ್ರತಿಸ್ಪರ್ಧಿ ಮಾರುತಿ ವಿಟಾರಾ ಬ್ರಿಝಾ ಬಿಡುಗಡೆಯ ಬೆನ್ನಲ್ಲೇ ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್ ಎಸ್‌ಯುವಿಯ ಬೆಲೆ ಕಡಿತಗೊಳಿಸಿತ್ತು.
ಈಗ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ನೂತನ ಕಾರುಗಳಾಗಿರುವ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಹಾಗೂ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಗರಿಷ್ಠ 91,000 ರು.ಗಳ ವರೆಗೆ ಬೆಲೆ ಕಡಿತದ ಘೋಷಣೆ ಮಾಡಿದೆ.

ಫಿಗೊ ಹಾಗೂ ಫಿಗೊ ಆಸ್ಪೈರ್ ಬೇಸ್ ವೆರಿಯಂಟ್ ಬೆಲೆಗಳಲ್ಲಿ ಬದಲಾವಣೆ ಕಂಡುಬರದಿದ್ದರೂ ಮೇಲ್ದರ್ಜೆಯ ವೆರಿಯಂಟ್ ಗಳಿಗೆ 25,000 ರು.ಗಳಿಂದ ಗರಿಷ್ಠ 91,000 ರು.ಗಳ ವರೆಗೆ ಬೆಲೆ ಕಡಿತ ಮಾಡಲಾಗಿದೆ.

ಫೋರ್ಡ್ ಆಸ್ಪೈರ್ ಟ್ರೆಂಡ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 5.76 ಹಾಗೂ 6.85 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ತನ್ಮೂಲಕ 25,000 ರು.ಗಳಷ್ಟು ಬೆಲೆ ಕಡಿತವಾಗಲಿದೆ.

ಅದೇ ರೀತಿ ಫಿಗೊ ಆಸ್ಪೈರ್ ಟೈಟಾನಿಯಂ ಹಾಗೂ ಟೈಟಾನಿಯಂ ಪ್ಲಸ್ ವೆರಿಯಂಟ್ ಗಳಿಗೆ ಅನುಕ್ರಮವಾಗಿ 91,000 ಹಾಗೂ 65,000 ರು.ಗಳಷ್ಟು ಬೆಲೆ ಕಡಿತಗೊಳಿಸಲಾಗಿದೆ.

ಫೋರ್ಡ್ ಫಿಗೊ ಆಸ್ಪೈರ್ ಟೈಟಾನಿಯಂ ಪ್ಲಸ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 6.80 ಹಾಗೂ 7.89 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅದೇ ರೀತಿ ಮುಂದಿನ ತಲೆಮಾರಿನ ಫಿಗೊ ಟಾಪ್ ಎಂಡ್ ವೆರಿಯಂಟ್ ಬೆಲೆಗಳಲ್ಲಿ 30,000 ರು.ಗಳಿಂದ 50,000 ರು.ಗಳಷ್ಟು ಬೆಲೆ ಕಡಿತವುಂಟಾಗಿದೆ. ಇದರ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.28 ಹಾಗೂ 7.17 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಫಿಗೊ ಆಸ್ಪೈರ್ ಪೆಟ್ರೋಲ್
1.2 ಆ್ಯಂಬಿಯಂಟ್
ಹಳೆಯ ಬೆಲೆ: 5.28 ಲಕ್ಷ ರು.
ಪರಿಷ್ಕೃತ ಬೆಲೆ: 5.28 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಆಸ್ಪೈರ್ ಪೆಟ್ರೋಲ್
1.2 ಟ್ರೆಂಡ್
ಹಳೆಯ ಬೆಲೆ: 6.01 ಲಕ್ಷ ರು.
ಪರಿಷ್ಕೃತ ಬೆಲೆ: 5.76 ಲಕ್ಷ ರು.
ಬದಲಾವಣೆ: 25,000 ರು. ಕಡಿತ

ಫಿಗೊ ಆಸ್ಪೈರ್ ಪೆಟ್ರೋಲ್
1.2 ಟೈಟಾನಿಯಂ
ಹಳೆಯ ಬೆಲೆ: 6.9 ಲಕ್ಷ ರು.
ಪರಿಷ್ಕೃತ ಬೆಲೆ: 5.99 ಲಕ್ಷ ರು.
ಬದಲಾವಣೆ: 91,000 ರು. ಕಡಿತ

ಫಿಗೊ ಆಸ್ಪೈರ್ ಪೆಟ್ರೋಲ್
1.5 ಟೈಟಾನಿಯಂ ಎಟಿ
ಹಳೆಯ ಬೆಲೆ: 8.19 ಲಕ್ಷ ರು.
ಪರಿಷ್ಕೃತ ಬೆಲೆ: 8.19 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಆಸ್ಪೈರ್ ಪೆಟ್ರೋಲ್
1.2 ಟೈಟಾನಿಯಂ ಪ್ಲಸ್
ಹಳೆಯ ಬೆಲೆ: 7.45 ಲಕ್ಷ ರು.
ಪರಿಷ್ಕೃತ ಬೆಲೆ: 6.8 ಲಕ್ಷ ರು.
ಬದಲಾವಣೆ: 65,000 ರು. ಕಡಿತ

ಫಿಗೊ ಆಸ್ಪೈರ್ ಡೀಸೆಲ್
1.5 ಆ್ಯಂಬಿಯಂಟ್
ಹಳೆಯ ಬೆಲೆ: 6.38 ಲಕ್ಷ ರು.
ಪರಿಷ್ಕೃತ ಬೆಲೆ: 6.38 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಆಸ್ಪೈರ್ ಡೀಸೆಲ್
1.5 ಟ್ರೆಂಡ್
ಹಳೆಯ ಬೆಲೆ: 7.11 ಲಕ್ಷ ರು.
ಪರಿಷ್ಕೃತ ಬೆಲೆ: 6.86ಲಕ್ಷ ರು.
ಬದಲಾವಣೆ: 25,000 ರು. ಕಡಿತ

ಫಿಗೊ ಆಸ್ಪೈರ್ ಡೀಸೆಲ್
1.5 ಟೈಟಾನಿಯಂ
ಹಳೆಯ ಬೆಲೆ: 8.00 ಲಕ್ಷ ರು.
ಪರಿಷ್ಕೃತ ಬೆಲೆ: 7.09 ಲಕ್ಷ ರು.
ಬದಲಾವಣೆ: 91,000 ರು. ಕಡಿತ

ಫಿಗೊ ಆಸ್ಪೈರ್ ಡೀಸೆಲ್
1.5 ಟೈಟಾನಿಯಂ
ಹಳೆಯ ಬೆಲೆ: 8.00 ಲಕ್ಷ ರು.
ಪರಿಷ್ಕೃತ ಬೆಲೆ: 7.09 ಲಕ್ಷ ರು.
ಬದಲಾವಣೆ: 91,000 ರು. ಕಡಿತ

ಫಿಗೊ ಪೆಟ್ರೋಲ್
1.2 ಬೇಸ್
ಹಳೆಯ ಬೆಲೆ: 4.54 ಲಕ್ಷ ರು.
ಪರಿಷ್ಕೃತ ಬೆಲೆ: 4.54 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಪೆಟ್ರೋಲ್
1.2 ಆ್ಯಂಬಿಯಂಟ್
ಹಳೆಯ ಬೆಲೆ: 4.83 ಲಕ್ಷ ರು.
ಪರಿಷ್ಕೃತ ಬೆಲೆ: 4.83 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಪೆಟ್ರೋಲ್
1.2 ಟ್ರೆಂಡ್
ಹಳೆಯ ಬೆಲೆ: 5.24 ಲಕ್ಷ ರು.
ಪರಿಷ್ಕೃತ ಬೆಲೆ: 5.24 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಪೆಟ್ರೋಲ್
1.2 ಟೈಟಾನಿಯಂ
ಹಳೆಯ ಬೆಲೆ: 5.95 ಲಕ್ಷ ರು.
ಪರಿಷ್ಕೃತ ಬೆಲೆ: 5.66 ಲಕ್ಷ ರು.
ಬದಲಾವಣೆ: 29,000 ರು. ಕಡಿತ

ಫಿಗೊ ಪೆಟ್ರೋಲ್
1.5 ಟೈಟಾನಿಯಂ ಎಟಿ
ಹಳೆಯ ಬೆಲೆ: 7.27 ಲಕ್ಷ ರು.
ಪರಿಷ್ಕೃತ ಬೆಲೆ: 7.27 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಪೆಟ್ರೋಲ್
1.2 ಟೈಟಾನಿಯಂ ಪ್ಲಸ್
ಹಳೆಯ ಬೆಲೆ: 6.59 ಲಕ್ಷ ರು.
ಪರಿಷ್ಕೃತ ಬೆಲೆ: 6.29 ಲಕ್ಷ ರು.
ಬದಲಾವಣೆ: 30,000 ರು. ಕಡಿತ

ಫಿಗೊ ಡೀಸೆಲ್
1.5 ಬೇಸ್
ಹಳೆಯ ಬೆಲೆ: 5.63 ಲಕ್ಷ ರು.
ಪರಿಷ್ಕೃತ ಬೆಲೆ: 5.63 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಡೀಸೆಲ್
1.5 ಆ್ಯಂಬಿಯಂಟ್
ಹಳೆಯ ಬೆಲೆ: 5.92 ಲಕ್ಷ ರು.
ಪರಿಷ್ಕೃತ ಬೆಲೆ: 5.92 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಡೀಸೆಲ್
1.5 ಟ್ರೆಂಡ್
ಹಳೆಯ ಬೆಲೆ: 6.33 ಲಕ್ಷ ರು.
ಪರಿಷ್ಕೃತ ಬೆಲೆ: 6.33 ಲಕ್ಷ ರು.
ಬದಲಾವಣೆ: ಇಲ್ಲ

ಫಿಗೊ ಡೀಸೆಲ್
1.5 ಟೈಟಾನಿಯಂ
ಹಳೆಯ ಬೆಲೆ: 7.04 ಲಕ್ಷ ರು.
ಪರಿಷ್ಕೃತ ಬೆಲೆ: 6.54 ಲಕ್ಷ ರು.
ಬದಲಾವಣೆ: 50,000 ರು. ಕಡಿತ

ಫಿಗೊ ಡೀಸೆಲ್
1.5 ಟೈಟಾನಿಯಂ ಪ್ಲಸ್
ಹಳೆಯ ಬೆಲೆ: 7.68 ಲಕ್ಷ ರು.
ಪರಿಷ್ಕೃತ ಬೆಲೆ: 7.18 ಲಕ್ಷ ರು.
ಬದಲಾವಣೆ: 50,000 ರು. ಕಡಿತ


Click it and Unblock the Notifications








