ಭಾರತದಲ್ಲಿ ಮಗದೊಂದು ಎಸ್ ಯುವಿ ಬಿಡುಗಡೆ ಮಾಡಲಿರುವ ಫೋರ್ಡ್
ಭಾರತದಲ್ಲಿ ಮಗದೊಂದು ಆಕರ್ಷಕ ಕ್ರೀಡಾ ಬಳಕೆಯ ವಾಹನವನ್ನು ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಬಿಡುಗಡೆ ಮಾಡಲಿದೆ.
ಭಾರತದಲ್ಲಿ ಇಕೊಸ್ಪೋರ್ಟ್, ಎಂಡೀವರ್ ಗಳಂತಹ ತಂತ್ರಜ್ಞಾನ ಉತ್ಕೃಷ್ಟತೆಯ ಕ್ರೀಡಾ ಬಳಕೆಯ ವಾಹನಗಳನ್ನು ಬಿಡುಗಡೆ ಮಾಡಿರುವ ಫೋರ್ಡ್ ಸಂಸ್ಥೆಯೀಗ, ಈ ಎರಡು ಕಾರುಗಳ ನಡುವಣ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಗದೊಂದು ಆಕರ್ಷಕ ಎಸ್ ಯುವಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಬಲ್ಲ ಮೂಲಗಳ ಪ್ರಕಾರ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು 'ಕುಗಾ' ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಫೋರ್ಡ್ ಕುಗಾ ದೇಶದಲ್ಲಿ ಈಗಷ್ಟೇ ಬಿಡುಗಡೆಯಾಗಿರುವ ಹ್ಯುಂಡೈ ಟಕ್ಸನ್ ಕಾರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಸಮಕಾಲೀನ ಫೋರ್ಡ್ ಕುಗಾ ಪ್ರೀಮಿಯಂ ಫಿಟ್ ಆಂಡ್ ಫಿನಿಶ್ ಕ್ಯಾಬಿನ್ ಗಳಸಿದೆ. ಗುಣಮಟ್ಟದ ಸೀಟು, ಸಾಫ್ಟ್ ಟಚ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ವಿಚ್ ಇತ್ಯಾದಿ ವೈಶಿಷ್ಟ್ಯಗಳು ಇದರಲ್ಲಿದೆ.

ನೂತನ ಫೋರ್ಡ್ ಕುಗಾ 1.5 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಮತ್ತು 2.0 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ. ಇವೆರಡು ಅನುಕ್ರಮವಾಗಿ 180 ಹಾಗೂ 148 ಅಶ್ವಶಕ್ತಿಯನ್ನು ನೀಡಲಿದೆ.

ಭಾರತದಲ್ಲಿ ಫೋರ್ಡ್ ಕುಗಾ ಕ್ರೀಡಾ ಬಳಕೆಯ ವಾಹನ 12 ಲಕ್ಷ ರು.ಗಳಿಂದ 16 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

ಇಕೊಸ್ಪೋರ್ಟ್ ಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಕುಗಾ ಕಾರಿನಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಪುಶ್ ಬಟನ್ ಸ್ಟ್ಯಾರ್ಟ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ರಿಯರ್ ಎಸಿ ಇತ್ಯಾದಿ ಸೌಲಭ್ಯಗಳಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಆರು ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ರಿಯರ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳಿರಲಿದೆ.

ಅಂದ ಹಾಗೆ 2017 ಅಥವಾ 2018ರ ವೇಳೆಯಲ್ಲಷ್ಟೇ ಫೋರ್ಡ್ ಕುಗಾ ಭಾರತ ಪ್ರವೇಶ ಪಡೆಯಲಿದೆ.

ಪ್ರತಿಸ್ಪರ್ಧಿಗಳು
ಹ್ಯುಂಡೈ ಟಕ್ಸನ್
ಮಹೀಂದ್ರ ಎಕ್ಸ್ ಯುವಿ50,
ರೆನೊ ಡಸ್ಟರ್


Click it and Unblock the Notifications








