ಭಾರತದಲ್ಲಿ ಐಕಾನಿಕ್ ಫೋರ್ಡ್ ಮಸ್ಟಾಂಗ್ ಭರ್ಜರಿ ಅನಾವರಣ

By Nagaraja

ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ಅತಿ ನೂತನ ಫೋರ್ಡ್ ಮಸ್ಟಾಂಗ್ ಭಾರತ ವಾಹನ ಮಾರುಕಟ್ಟೆಯಲ್ಲಿ ಭರ್ಜರಿ ಅನಾವರಣ ಕಂಡಿದೆ. ಇಡೀ ವಿಶ್ವದಲ್ಲೇ ಭಾರಿ ಸದ್ದು ಮಾಡಿರುವ ಅಮೆರಿಕದ ಐಕಾನಿಕ್ ಫೋರ್ಡ್ ಮಸ್ಟಾಂಗ್ ಕ್ರೀಡಾ ಕಾರು ಪ್ರಸಕ್ತ ಸಾಲಿನಲ್ಲೇ ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ.

ಮುಖ್ಯಾಂಶಗಳು

  • ಹೊಸ ವಿನ್ಯಾಸ,
  • ವಿಶ್ವ ದರ್ಜೆಯ ಪವರ್,
  • ನಾವೀನ್ಯ ತಂತ್ರಗಾರಿಕೆ,
  • ವಿಶ್ವ ದರ್ಜೆಯ ಹ್ಯಾಂಡ್ಲಿಂಗ್,

ಫೋರ್ಡ್ ಮಸ್ಟಾಂಗ್


ಮುಂದಿನ ತಿಂಗಳಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋಗೂ ಮುಂಚಿತವಾಗಿ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ದೇಶದಲ್ಲಿ ಅನಾವರಣ ಕಂಡಿದೆ. ಇದು ದೇಶದ ಲಗ್ಷುರಿ ಮಾರುಕಟ್ಟೆಗೆ ಹೊಸ ಆಯಾಮವನ್ನು ತುಂಬಲಿದ್ದು, ಹೊಸ ಇತಿಹಾಸ ಪರಂಪರೆಯನ್ನು ತೆರೆದುಕೊಳ್ಳಲಿದೆ.

1964ನೇ ಇಸವಿಯಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯವಾಗಿದ್ದ ಫೋರ್ಡ್ ಮಸ್ಟಾಂಗ್ ಇದುವರೆಗೆ ವಿಶ್ವದ್ಯಾಂತ ಒಂಬತ್ತು ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮಾರಾಟವನ್ನು ಕಂಡಿದೆ. ಈಗ ಭಾರತದಲ್ಲೂ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.


ಎಂಜಿನ್ ತಾಂತ್ರಿಕತೆ

  • 5.0 ಲೀಟರ್ ವಿ8
  • 420 ಅಶ್ವಶಕ್ತಿ, 529 ಎನ್‌ಎಂ
  • 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಅಂದ ಹಾಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 3.7 ಲೀಟರ್ ವಿ6 ಹಾಗೂ 2.3 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಸಹ ಮಾರಾಟದಲ್ಲಿದ್ದರೂ ಈ ವೆರಿಯಂಟ್ ಗಳು ಭಾರತದಲ್ಲಿ ಮಾರಾಟವಾಗುವ ಸಾಧ್ಯತೆಗಳು ಕಡಿಮೆಯಾಗಿದೆ.


ಪ್ರಶಸ್ತಿ ವಿಜೇತ ಫೋರ್ಡ್‌ನ ಸಿಂಕ್ 2 (SYNC) ಕನೆಕ್ಟಿವಿಟಿ ನೆರವಿನಿಂದ ಚಾಲನೆ ವೇಳೆಯಲ್ಲೇ ಮನರಂಜನಾ ವ್ಯವಸ್ಥೆ, ವಾಯ್ಸ್ ಕಮಾಂಡ್ ನಿಯಂತ್ರಿಸಲು ಸಾಧ್ಯವಾಗಲಿದೆ. ಇದಲ್ಲದೆ ನೇವಿಗೇಷನ್, ಪುಶ್ ಬಟನ್ ಸ್ಟ್ಯಾರ್ಟ್, ಪ್ಯಾಸಿವ್ ಎಂಟ್ರಿ, ಪವರ್ ಫೋಲ್ಡಿಂಗ್ ಮಿರರ್, ರಿಯರ್ ಕ್ಯಾಮೆರಾ ಲಭ್ಯವಾಗಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿರುವ ಫೋರ್ಡ್ ಮಸ್ಟಾಂಗ್ ದೇಶದಲ್ಲಿ 50ರಿಂದ 60 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

'ಪೊನಿ' ಕಾರೆಂಬ ವಿಶಿಷ್ಟ ದರ್ಜೆ ಸೃಷ್ಟಿ ಮಾಡಿರುವ ಫೋರ್ಡ್ ಮಸ್ಟಾಂಗ್ ಮುಂಭಾಗದಲ್ಲಿ ಉದ್ದವಾದ ಬೊನೆಟ್ ಹಾಗೂ ಚಪ್ಪಟೆ ಆಕಾರವನ್ನು ಪಡೆದುಕೊಂಡಿದೆ.


ಚಾಲಕರಿಗೆ ಬೇಕಾದಂತೆ ಹೊಂದಾಣಿಸಬಹುದಾದ (customizable) ಚಾಲನಾ ವಿಧಗಳು ಆಡಂಬರ ಕಾರುಗಳಲ್ಲಿ ಹೊಸತನಕ್ಕೆ ಕಾರಣವಾಗಲಿದೆ.

ಅದೇ ರೀತಿ ರೇಸ್ ಟ್ರ್ಯಾಕ್ ಗಳಿಗೆ ಮಾತ್ರ ಮೀಸಲಾಗಿರುವ ಎಲೆಕ್ಟ್ರಾನಿಕ್ ಲೈನ್ ಲಾಕ್ ವೈಶಿಷ್ಟ್ಯ ಸಹ ನೂತನ ಫೋರ್ಡ್ ಮಸ್ಟಾಂಗ್ ಕಾರನ್ನು ವಿಶಿಷ್ಟವಾಗಿಸಲಿದೆ.

ವಿಮಾನದ ರೆಕ್ಕೆಗಳಿಂದ ಸ್ಪೂರ್ತಿ ಪಡೆದು ಪೋರ್ಡ್ ಮಸ್ಟಾಂಗ್ ಒಟ್ಟಾರೆ ಥೀಮ್ ರಚಿಸಲಾಗಿದೆ. ಅಲ್ಲದೆ ಜಾಗತಿಕ ಪ್ರವೇಶದ 50 ವರ್ಷಗಳ ಬಳಿಕ ಆರನೇ ತಲೆಮಾರಿನ ರೂಪದಲ್ಲಿ ಭಾರತಕ್ಕೆ ಕಾಲಿಡುತ್ತಿದೆ.


ಎಮರ್ಜನ್ಸಿ ಅಸಿಸ್ಟನ್ಸ್ ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿರುವ ಫೋರ್ಡ್ ಮಸ್ಟಾಂಗ್, ದೇಶದ ರಸ್ತೆ ನಿಯಮಗಾನುಸಾರವಾಗಿ ರೈಟ್ ಹ್ಯಾಂಡ್ ಚಾಲನಾ ವೈಶಿಷ್ಟ್ಯಗಳೊಂದಿಗೆ ಆಗಮನವಾಗಲಿದೆ. ಇದನ್ನು ಬ್ರಿಟನ್ ಘಟಕದಲ್ಲಿ ನಿರ್ಮಾಣ ಮಾಡಲಾಗುವುದು.

ಇನ್ನುಳಿದಂತೆ ಎಚ್‌ಐಡಿ ಹೆಡ್ ಲ್ಯಾಂಪ್ ಯುನಿಟ್ ಜೊತೆ ಎಲ್‌ಇಡಿ, ಎಲ್‌ಇಡಿ ಟೈಲ್ ಲ್ಯಾಂಪ್, ಡ್ಯುಯಲ್ ಜೋನ್ ಎಚ್‌ವಿಎಸಿ ಸಿಸ್ಟಂ, ಲಾಂಚ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ (ಬಿಎಲ್‌ಐಎಸ್), ಕ್ರಾಸ್ ಟ್ರಾಫಿಕ್ ಅಲರ್ಟ್, ಅಡಾಪ್ಟಿಪ್ ಕ್ರೂಸ್ ಕಂಟ್ರೋಲ್, ಡ್ರೈವ್ ಮೋಡ್ ಸೆಲೆಕ್ಟರ್, ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಫ್ರಂಟ್ ಮತ್ತು ಕರ್ಟೈನ್ ಮತ್ತು ಮೊಣಕಾಲಿನ ಏರ್ ಬ್ಯಾಗ್ ಸೇವೆಗಳು ಇರಲಿದೆ.

ಒಟ್ಟಿನಲ್ಲಿ ಐಕಾನಿಕ್, ಸ್ಟೈಲಿಷ್ ಹಾಗೂ ಶಕ್ತಿಯುತ ಫೋರ್ಡ್ ಮಸ್ಟಾಂಗ್ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಹೊಸ ಅಲೆಯೆಬ್ಬಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

More from DriveSpark

Article Published On: Thursday, January 28, 2016, 17:48 [IST]
English summary
Ford Unveils The Iconic #Mustang In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+