ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

Written By:

ನೂತನ ಮಾರುತಿ ವಿಟಾರಾ ಬ್ರಿಝಾ ಮಾರುಕಟ್ಟೆ ಪ್ರವೇಶಿಸಿರುವಂತೆಯೇ ಎಚ್ಚೆತ್ತುಕೊಂಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು, ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಜನಪ್ರಿಯ ಫೋರ್ಡ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ರುಪಾಯಿಗಳ ಇಳಿಕೆಯನ್ನು ಘೋಘಿಸಿದೆ.

Also Read: ಕಾಯುವಿಕೆ ಅಂತ್ಯ; ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

ನಿಮ್ಮ ಮಾಹಿತಿಗಾಗಿ, ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಮಾರುತಿ ವಿಟಾರಾ ಬ್ರಿಝಾ ಬೆಲೆಯು 6.99 ಲಕ್ಷ ರು.ಗಳಿಂದ 9.68 ಲಕ್ಷ ರು.ಗಳೆಂದು ನಿರ್ಧರಿಸಲಾಗಿತ್ತು. ತದಾ ಬೆನ್ನಲ್ಲೇ ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್ ಶೋ ರೂಂ ಬೆಲೆಗಳನ್ನು 56,000 ರು.ಗಳಿಂದ ಗರಿಷ್ಠ 1.2 ಲಕ್ಷ ರು.ಗಳಷ್ಟು ಎಕ್ಸ್ ಇಳಿಕೆಗೊಳಿಸಿದೆ.

ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

ಹೊಸ ಬೆಲೆ ನೀತಿಯಂತೆ ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ಎಕ್ಸ್ ಶೋ ರೂಂ ದೆಹಲಿ ಬೆಲೆಯೀಗ 6.68 ಲಕ್ಷ ರು.ಗಳಿಂದ ಟಾಪ್ ಎಂಡ್ ವೆರಿಯಂಟ್ 9.75 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

ಇಕೊಸ್ಪೋರ್ಟ್ ಡೀಸೆಲ್ ವೆರಿಯಂಟ್ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, 1.12 ಲಕ್ಷದಷ್ಟು ಇಳಿಕೆಯಾಗಿದೆ. ಇದರೊಂದಿಗೆ ಈ ಟಾಪ್ ಎಂಡ್ ವೆರಿಯಂಟ್ 10 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಲಭ್ಯವಾಗಲಿದೆ.

ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

ಇಕೊಸ್ಪೋರ್ಟ್ ನಲ್ಲಿರುವ ಐದು ವೆರಿಯಂಟ್ ಗಳನ್ನು ಹೋಲಿಸಿದಾಗ ವಿಟಾರಾ ಬ್ರಿಝಾ ಏಳು ವೆರಿಯಂಟ್ ಗಳನ್ನು ಒದಗಿಸುತ್ತಿದೆ. ಅಚ್ಚರಿಯೆಂಬಂತೆ ಪರಿಷ್ಕೃತ ಬೆಲೆಯ ಬಳಿಕವೂ ಬ್ರಿಝಾಗಿಂತಲೂ ಇಕೊಸ್ಪೋರ್ಟ್ 30,000ದಿಂದ 50,000 ರು.ಗಿಂತಲೂ ಹೆಚ್ಚು ದುಬಾರಿಯೆನಿಸಲಿದೆ.

ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

ಪ್ರತಿ ತಿಂಗಳು ಮೂರರಿಂದ ನಾಲ್ಕು ಸಾವಿರದಷ್ಟು ಮಾರಾಟ ಸಂಖ್ಯೆಯನ್ನು ಹೊಂದಿರುವ ಇಕೊಸ್ಪೋರ್ಟ್, ದೇಶದ ಜನಪ್ರಿಯ ಮಾರುತಿಯಿಂದ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನಿರ್ಧರಿಸಿದೆ.

ಫೋರ್ಡ್ ಇಕೊಸ್ಪೋರ್ಟ್ ಪರಿಷ್ಕೃತ ಬೆಲೆ (ಪೆಟ್ರೋಲ್)

ಫೋರ್ಡ್ ಇಕೊಸ್ಪೋರ್ಟ್ ಪರಿಷ್ಕೃತ ಬೆಲೆ (ಪೆಟ್ರೋಲ್)

1.5 ಲೀಟರ್ ಟಿಐ-ವಿಸಿಟಿ ಆಂಬಿಯಂಟ್: ಹೊಸ ಬೆಲೆ: 6.68 ಲಕ್ಷ ರು. ವ್ಯತ್ಯಾಸ: 53,700 ರು.

1.5 ಲೀಟರ್ ಟಿಐ-ವಿಸಿಟಿ ಟ್ರೆಂಡ್: ಹೊಸ ಬೆಲೆ: 7.4 ಲಕ್ಷ ರು. ವ್ಯತ್ಯಾಸ: 77,400 ರು.

1.5 ಲೀಟರ್ ಟಿಐ-ವಿಸಿಟಿ ಟೈಟಾನಿಯಂ: ಹೊಸ ಬೆಲೆ: 8.56 ಲಕ್ಷ ರು. ವ್ಯತ್ಯಾಸ: 77,400 ರು.

1.5 ಲೀಟರ್ ಟಿಐ-ವಿಸಿಟಿ (ಎಟಿ) ಟೈನಾನಿಯಂ: ಹೊಸ ಬೆಲೆ: 9.61 ಲಕ್ಷ ರು. ವ್ಯತ್ಯಾಸ: 74,800 ರು.

1.0 ಲೀಟರ್ ಇಕೊಬೂಸ್ಟ್ ಟ್ರೆಂಡ್ ಪ್ಲಸ್: ಹೊಸ ಬೆಲೆ: 8.18 ಲಕ್ಷ ರು. ವ್ಯತ್ಯಾಸ: 77,400 ರು.

1.0 ಲೀಟರ್ ಇಕೊಬೂಸ್ಟ್ ಟೈಟಾನಿಯಂ ಪ್ಲಸ್: ಹೊಸ ಬೆಲೆ: 9.45 ಲಕ್ಷ ರು. ವ್ಯತ್ಯಾಸ: 87,400 ರು.

 ಫೋರ್ಡ್ ಇಕೊಸ್ಪೋರ್ಟ್ ಪರಿಷ್ಕೃತ ಬೆಲೆ (ಡೀಸೆಲ್)

ಫೋರ್ಡ್ ಇಕೊಸ್ಪೋರ್ಟ್ ಪರಿಷ್ಕೃತ ಬೆಲೆ (ಡೀಸೆಲ್)

1.5 ಲೀಟರ್ ಟಿಡಿಸಿಐ ಆಂಬಿಯಂಟ್: ಹೊಸ ಬೆಲೆ: 7.28 ಲಕ್ಷ ರು. ವ್ಯತ್ಯಾಸ: 1.12 ಲಕ್ಷ ರು.

1.5 ಲೀಟರ್ ಟಿಡಿಸಿಐ ಟ್ರೆಂಡ್: ಹೊಸ ಬೆಲೆ: 8 ಲಕ್ಷ ರು. ವ್ಯತ್ಯಾಸ: 1.12 ಲಕ್ಷ ರು.

1.5 ಲೀಟರ್ ಟಿಡಿಸಿಐ ಟ್ರೆಂಡ್ ಪ್ಲಸ್: ಹೊಸ ಬೆಲೆ: 8.48 ಲಕ್ಷ ರು. ವ್ಯತ್ಯಾಸ: 1.12 ಲಕ್ಷ ರು.

1.5 ಲೀಟರ್ ಟಿಡಿಸಿಐ ಟೈಟಾನಿಯಂ: ಹೊಸ ಬೆಲೆ: 9.16 ಲಕ್ಷ ರು. ವ್ಯತ್ಯಾಸ: 1.12 ಲಕ್ಷ ರು.

1.5 ಲೀಟರ್ ಟಿಡಿಸಿಐ ಟೈಟಾನಿಯಂ ಪ್ಲಸ್: ಹೊಸ ಬೆಲೆ: 9.75 ಲಕ್ಷ ರು. ವ್ಯತ್ಯಾಸ: 1.12 ಲಕ್ಷ ರು.

ಬ್ರಿಝಾ ಎಫೆಕ್ಟ್; ಇಕೊಸ್ಪೋರ್ಟ್ ಬೆಲೆಗಳಲ್ಲಿ ಭಾರಿ ಇಳಿಕೆ

ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆ ಗಂಟೆ ನೀಡಿದ ವಿಟಾರಾ ಬ್ರಿಝಾ - ಸಮಗ್ರ ಹೋಲಿಕೆ ವಿಮರ್ಶೆ ಓದಿ

Read more on ಫೋರ್ಡ್ ford
English summary
Ford Slashes EcoSport SUV Prices
Story first published: Saturday, March 12, 2016, 10:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark