7 ದಶಲಕ್ಷ ಕಾರುಗಳ ಸಂಭ್ರಮ; ಹ್ಯುಂಡೈನಿಂದ 'ಡಿಸೆಂಬರ್ ಡಿಲೈಟ್' ಆಫರ್
ಭಾರತದಲ್ಲಿ ಏಳು ದಶಲಕ್ಷ ಕಾರುಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಹ್ಯುಂಡೈ ಈ ವರ್ಷಾಂತ್ಯದ ವೇಳೆಯಲ್ಲಿ ಡಿಸೆಂಬರ್ ಡಿಲೈಟ್ ಆಫರುಗಳನ್ನು ಪ್ರಕಟಿಸಿದೆ.
ಭಾರತದಲ್ಲಿ ಏಳು ದಶಲಕ್ಷ ಕಾರುಗಳ ಯಶಸ್ಸನ್ನು ಆಚರಿಸಿಕೊಳ್ಳುತ್ತಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಯು ಈ ವರ್ಷಾಂತ್ಯದ ವೇಳೆಯಲ್ಲಿ ಡಿಸೆಂಬರ್ ಡಿಲೈಟ್ ಆಫರ್ ಗಳನ್ನು ಪ್ರಕಟಿಸಿದೆ.

ಪ್ರಸ್ತುತ ಆಫರ್ 2016 ಡಿಸೆಂಬರ್ 25ರ ವರೆಗೆ ಲಭ್ಯವಾಗಲಿದ್ದು, ಆನ್ ರೋಡ್ ಬೆಲೆಯ ಮೇಲೆ ಶೇಕಡಾ 100ರಷ್ಟು ಹಣಕಾಸು ನೆರವು ದೊರಕಲಿದೆ.

ಯಾವೆಲ್ಲ ಮಾದರಿಗಳಿಗೆ ಆಫರ್ ಲಭ್ಯ ?
ಹ್ಯುಂಡೈ ಡಿಸೆಂಬರ್ ಡಿಲೈಟ್ ಆಫರ್ ಗಳು ಸಂಸ್ಥೆಯ ನಾಲ್ಕು ಜನಪ್ರಿಯ ಕಾರುಗಳಿಗೆ ಲಭ್ಯವಾಗಲಿದೆ. ಅವುಗಳೆಂದರೆ ಇಯಾನ್, ಐ10, ಗ್ರಾಂಡ್ ಐ10, ಎಕ್ಸ್ ಸೆಂಟ್, ಎಲೈಟ್ ಐ10, ವೆರ್ನಾ ಮತ್ತು ಸಾಂಟಾ ಫೆ.

ಇಯಾನ್
ಹ್ಯುಂಡೈ ಜನಪ್ರಿಯ ಸಣ್ಣ ಕಾರುಗಳಲ್ಲಿ ಒಂದಾಗಿರುವ ಇಯಾನ್ ಖರೀದಿ ವೇಳೆಯಲ್ಲಿ 60,000 ರು.ಗಳನ್ನು ಉಳಿತಾಯ ಮಾಡಬಹುದಾಗಿದೆ. ಈ ಮೂಲಕ ಹ್ಯುಂಡೈ ಇಯಾನ್ ಐದು ವರ್ಷಗಳಷ್ಟು ಹಿಂದಿನ ಬೆಲೆಗಳಲ್ಲಿ ದೊರಕಲಿದೆ.

ಐ10
ಹ್ಯುಂಡೈ ಐ10 ಖರೀದಿ ವೇಳೆಯಲ್ಲಿ ಗರಿಷ್ಠ 53,000 ರು.ಗಳ ಉಳಿತಾಯ ಮಾಡಬಹುದಾಗಿದೆ. ಇದನ್ನು ಐದು ವರ್ಷಗಳಷ್ಟು ಹಿಂದಿನ ಬೆಲೆಗಳಲ್ಲಿ ನೀಡುತ್ತಿರುವುದು ಗಮನಾರ್ಹ.

ಗ್ರಾಂಡ್ ಐ10
ಹಾಗೆಯೇ ಹ್ಯುಂಡೈ ಗ್ರಾಂಡ್ ಐ10 ಖರೀದಿ ವೇಳೆಯಲ್ಲಿ 91,000 ರು.ಗಳಷ್ಟು ಉಳಿತಾಯ ಮಾಡಬಹುದಾಗಿದೆ.

ಎಕ್ಸ್ ಸೆಂಟ್
ಅದೇ ಹೊತ್ತಿಗೆ ಹ್ಯುಂಡೈ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 52,000 ರು.ಗಳನ್ನು ಉಳಿತಾಯ ಮಾಡಬಹುದಾಗಿದೆ.

ಎಲೈಟ್ ಐ20
ಅಂತೆಯೇ ಹ್ಯುಂಡೈ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಖರೀದಿ ವೇಳೆಯಲ್ಲಿ 35,000 ರು.ಗಳಷ್ಟು ಉಳಿತಾಯ ನಿಮ್ಮದಾಗಲಿದೆ.

ವೆರ್ನಾ
ಹ್ಯುಂಡೈ ವೆರ್ನಾ 6.99 ಲಕ್ಷ ರುಪಾಯಿಗಳ ವಿಶೇಷ ದರಗಳಲ್ಲಿ ನೀಡಲಾಗುತ್ತಿದ್ದು, ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಸಾಂಟಾ ಫೆ
ಹಾಗೆಯೇ ಹ್ಯುಂಡೈ ಸಾಂಟಾ ಫೆ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ಖರೀದಿಯಲ್ಲಿ ಭರ್ಜರಿ ಎರಡು ಲಕ್ಷ ರು.ಗಳನ್ನು ಉಳಿತಾಯ ಮಾಡಬಹುದಾಗಿದೆ.


Click it and Unblock the Notifications








