ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

By Nagaraja

ಭಾರತದ ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಝ್ ಗಳಂತಹ ಪರಿಷ್ಕೃತ ಹಾಗೂ ಆಧುನಿಕ ಕಾರುಗಳ ಆಗಮನದೊಂದಿಗೆ ಹ್ಯುಂಡೈ ವೆರ್ನಾ ಮಾರಾಟದಲ್ಲಿ ಹಿನ್ನಡೆ ಅನುಭವಿಸಿತ್ತು. ಕೆಲವೊಂದು ಸುಧಾರಣೆಗಳೊಂದಿಗೆ ವೆರ್ನಾ ಮರು ಪರಿಚಯಿಸಿದರೂ ಹೆಚ್ಚಿನ ಯಶಸ್ಸು ದಕ್ಕಿರಲಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಇಂತಹ ಸಮಸ್ಯೆ ತಲೆದೋರಿರುವ ಇದೇ ಸಂದರ್ಭದಲ್ಲಿ ಅತ್ತ ಜಾಗತಿಕ ಮಾರುಕಟ್ಟೆಯಲ್ಲಿ ನೂತನ ವೆರ್ನಾ ಭರ್ಜರಿ ಅನಾವರಣಗೊಂಡಿದೆ. ನೆರೆಯ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ ಆಟೋ ಚೀನಾ 2016 ವಾಹನ ಪ್ರದರ್ಶನ ಮೇಳದಲ್ಲಿ ಹೊಸ ಪೀಳಿಗೆಯ ಅತ್ಯಾಕರ್ಷಕ ವೆರ್ನಾ ಅನಾವರಣಗೊಂಡಿದೆ.

ಬಿಡುಗಡೆ

ಬಿಡುಗಡೆ

ಜಾಗತಿಕ ಮಾರುಕಟ್ಟೆಯಲ್ಲಿ ಅಸೆಂಟ್ ಹಾಗೂ ಸೊಲರಿಸ್ ಎಂದು ಅರಿಯಲ್ಪಡುವ 2017 ಹ್ಯುಂಡೈ ವೆರ್ನಾ ಮುಂದಿನ ವರ್ಷದಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಲಿದೆ.

ವಿನ್ಯಾಸ

ವಿನ್ಯಾಸ

2017 ಹ್ಯುಂಡೈ ವೆರ್ನಾದಲ್ಲಿ ಸಂಸ್ಥೆಯ ಕ್ರಾಂತಿಕಾರಿ ಫ್ಯೂಯಿಡಿಕ್ 2.0 ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ಹ್ಯುಂಡೈ ಅತ್ಯಾಧುನಿಕ ಕಾರಿನಲ್ಲಿರುವ ದೊಡ್ಡದಾದ ಹೆಕ್ಸಾಗನಲ್ ಗ್ರಿಲ್, ನಿಖರವಾದ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಕ್ರೀಡಾತ್ಮಕ ಬಂಪರ್ ಗಳು ಕಂಡುಬರಲಿದೆ.

ಮುಂಭಾಗ

ಮುಂಭಾಗ

ಮುಂಭಾಗದಲ್ಲಿರುವ ದೊಡ್ಡದಾದ ಕ್ರೋಮ್ ಹೆಕ್ಸಾಗನಲ್ ಗ್ರಿಲ್ 2017 ಹ್ಯುಂಡೈ ವೆರ್ನಾಗೆ ಮೆರಗನ್ನು ತುಂಬಲಿದೆ. ಇದಕ್ಕೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಸಾಥ್ ನೀಡಲಿದೆ.

ಬದಿ ವಿನ್ಯಾಸ

ಬದಿ ವಿನ್ಯಾಸ

ಈಗ ಮಾರುಕಟ್ಟೆಯಲ್ಲಿರುವ ವೆರ್ನಾ ಕಾರಿಗೆ ಹೋಲಿಸಿದಾಗ ಬದಿಯ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಗಳು ಕಂಡುಬಂದಿಲ್ಲ. ಹಾಗಿದ್ದರೂ ನಿಖರವಾದ ಸ್ವಭಾವ ರೇಖೆಗಳು ಹೊಸ ಕಾರನ್ನು ವಿಭಿನ್ನವಾಗಿಸಲಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ಬದಿಯಿಂದ ವೀಕ್ಷಿಸಿದಾಗ ಪರಿಷ್ಕೃತ ಸಿ ಪಿಲ್ಲರ್ ಮತ್ತು ರಿಯರ್ ಡೋರ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ಅದೇ ರೀತಿ ರೂಫ್ ಲೈನ್ ಗಳು ಹಿಂದಕ್ಕೆ ಬಾಗಿದ್ದು ಹೆಚ್ಚು ಏರೋಡೈನಾಮಿಕ್ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ಹಿಂಭಾಗ

ಹಿಂಭಾಗ

ಹಿಂದುಗಡೆ ವಾಹನ ದಾಖಲಾತಿ ನಂಬರ್ ಪ್ಲೇಟ್ ಮತ್ತಷ್ಟು ಕೆಳಕ್ಕೆ ಸರಿದಿರುವುದನ್ನು ಕಾಣಬಹುದಾಗಿದೆ. ಇದರ ಮೇಲ್ಗಡೆಯಾಗಿ ಎಲ್ ಇಡಿ ಟೈಲ್ ಲ್ಯಾಂಪ್ ಮತ್ತು ಸ್ಪಾಯ್ಲರ್ ಕಂಡುಬರಲಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ಸದ್ಯ ಕಾನ್ಸೆಪ್ಟ್ ಹಂತದಲ್ಲಿರುವ ವೆರ್ನಾ ಎಂಜಿನ್ ಇತ್ಯಾದಿ ಹೆಚ್ಚಿನ ವಿವರಗಳನ್ನು ಹ್ಯುಂಡೈ ಬಿಟ್ಟುಕೊಟ್ಟಿಲ್ಲ. ಬಿಡುಗಡೆ ಸಮೀಪಿಸಿದಾಗಲೇ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಬಹುದಾಗಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ತವರೂರಾದ ದಕ್ಷಿಣ ಕೊರಿಯಾ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರಸಕ್ತ ಸಾಲಿನಲ್ಲೇ ಪ್ರವೇಶಿಸುವ ಸಾಧ್ಯತೆಯಿರುವ 2017 ಹ್ಯುಂಡೈ ವೆರ್ನಾ ಮುಂದಿನ ವರ್ಷದ ಮಧ್ಯಂತರ ಅವಧಿಯಲ್ಲಷ್ಟೇ ಭಾರತ ಪ್ರವೇಶಿಸಲಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ನ್ಯೂ ಜನರೇಷನ್ ಎಲೈಟ್ ಐ20 ಮಾದರಿಗೆ ಸಾಮ್ಯತೆಯನ್ನು ಹೊಸ ವೆರ್ನಾದಲ್ಲಿ ಕಾಣಬಹುದಾಗಿದೆ. ಈಗ ನಿರ್ಮಾಣ ಸಿದ್ಧ ಆವೃತ್ತಿಯಲ್ಲೂ ಈ ಎಲ್ಲ ವಿನ್ಯಾಸ ನೀತಿಯನ್ನು ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತಕ್ಕೂ ಬರಲಿದೆ ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ

ಮೊದಲ ನೋಟದಲ್ಲಿ 2017 ಹ್ಯುಂಡೈ ವೆರ್ನಾ ಬಗ್ಗೆ ನಿಮ್ಮಲ್ಲಿ ಮೂಡುವ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಸೈಡ್ ಮಿರರ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಸೈಡ್ ಡೋರ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಅಲಾಯ್ ವೀಲ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಅಲಾಯ್ ವೀಲ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಫ್ರಂಟ್ ವೀಲ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಡೋರ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

2017 ಹ್ಯುಂಡೈ ವೆರ್ನಾ ಟೈಲ್ ಲ್ಯಾಂಪ್

ಚಿತ್ರಗಳಲ್ಲಿ...

ಚಿತ್ರಗಳಲ್ಲಿ...

ಹಳೆಯ ವೆರ್ನಾ vs 2017 ಹ್ಯುಂಡೈ ವೆರ್ನಾ ಒಂದು ಹೋಲಿಕೆ

More from DriveSpark

Article Published On: Wednesday, April 27, 2016, 15:28 [IST]
English summary
Upcoming Hyundai Verna Revealed – In Pics; India Launch In 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+