ಸಿಟಿ, ಸಿಯಾಝ್ ಸವಾಲನ್ನು ಮೆಟ್ಟಿ ನಿಲ್ಲಲು ಹ್ಯುಂಡೈ ರಣತಂತ್ರ
ಹೋಂಡಾ ಸಿಟಿ ಹಾಗೂ ಮಾರುತಿ ಸುಜುಕಿ ಸಿಯಾಝ್ ಗಳಂತಹ ಪ್ರತಿಸ್ಪರ್ಧಿಗಳ ಅತ್ಯುತ್ತಮ ಪ್ರದರ್ಶನದಿಂದ ಎಚ್ಚೆತ್ತುಕೊಂಡಿರುವ ಹ್ಯುಂಡೈ ವೆರ್ನಾ ತನ್ನ ಟಾಪ್ ಎಂಡ್ ವೆರಿಯಂಟ್ ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಕಲ್ಪಿಸಿಕೊಟ್ಟಿದೆ.
ಕಳೆದ ವರ್ಷವಷ್ಟೇ ಪರಿಷ್ಕೃತ ಹ್ಯುಂಡೈ ವೆರ್ನಾ ಮಾರುಕಟ್ಟೆ ಪ್ರವೇಶ ಪಡೆದಿತ್ತು. ಈಗ 2016ನೇ ವರ್ಷ ಆರಂಭವಾಗಿರುವಂತೆಯೇ ಹೆಚ್ಚಿನ ವಿಶಿಷ್ಟತೆಗಳೊಂದಿಗೆ ಟಾಪ್ ಎಂಡ್ ಎಸ್ ಎಕ್ಸ್ (ಒ) ಮಾದರಿಯನ್ನು ಮರು ಪರಿಚಯಿಸಿದೆ.

ಹ್ಯುಂಡೈ ವೆರ್ನಾ ಟಾಪ್ ಎಂಡ್ ಎಸ್ ಎಕ್ಸ್ (ಒ) ಬೆಲೆಯು 15,000 ರು.ಗಳಿಂದ 20,000 ರು.ಗಳ ವರೆಗೆ ಹೆಚ್ಚಾಗಲಿದೆ. ಇದರೊಂದಿಗೆ ಎಲ್ಲ ನಾಲ್ಕು (ಬೇಸ್, ಎಸ್, ಎಸ್ ಎಕ್ಸ್, ಎಸ್ ಎಕ್ಸ್ (ಒ)) ವೆರಿಯಂಟ್ ಗಳಲ್ಲಿ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

2016 ಹ್ಯುಂಡೈ ವೆರ್ನಾ ಬೇಸ್ ವೆರಿಯಂಟ್ ನಲ್ಲಿ ಎಲ್ಲ ಕಾರಿಗಳಲ್ಲೂ ಇರಬೇಕಾದ ಅವಶ್ಯಕ ಘಟಕಗಳನ್ನು ಹೊಂದಿರಲಿದೆ. ಇದು 1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಅಲ್ಲದೆ ಆಡಿಯೋ ಸಿಸ್ಟಂ ಬದಲು ಕೂಲ್ಡ್ ಗ್ಲೋವ್ ಬಾಕ್ಸ್ ಕಂಡುಬರಲಿದೆ.

ಇನ್ನು ವೆರ್ನಾ ಎಸ್ ವೆರಿಯಂಟ್ ನಲ್ಲಿ ಗ್ರಾಹಕರಿಗೆ 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆ ಮಾಡುವ ಅವಕಾಶವಿರುತ್ತದೆ. ಇದು 6 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುತ್ತದೆ. ಇದಲ್ಲದೆ 2 ಡಿನ್ ಆಡಿಯೋ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಅದೇ ರೀತಿ ವೆರ್ನಾ ಎಸ್ ಎಕ್ಸ್ ವೆರಿಯಂಟ್, ಎಸ್ ವೆರಿಯಂಟ್ ಗೆ ಸಮಾನವಾದ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ. ಹಾಗಿದ್ದರೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ. ಉಳಿದಂತೆ ಫ್ರಂಟ್ ಫಾಗ್ ಲ್ಯಾಂಪ್, 16 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್, ಟಚ್ ಸ್ಕ್ರೀನ್ ಆಡಿಯೋ ಜೊತೆ ನೇವಿಗೇಷನ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ವಿಂಗ್ ಮಿರರ್ ಮತ್ತು ಶಾರ್ಕ್ ಫಿನ್ ಆಂಟೆನಾ ಕಂಡುಬರಲಿದೆ.

ಇನ್ನೊಂದೆಡೆ ವೆರ್ನಾ ಎಸ್ ಎಕ್ಸ್ (ಒ) ವೆರಿಯಂಟ್ ಡೀಸೆಲ್ ಎಂಜಿನ್ ಜೊತೆಗೆ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಇದರಲ್ಲಿ ಪುಶ್ ಬಟನ್ ಸ್ಟ್ಯಾರ್ಟ್ ಸ್ಟಾಪ್, ಟೆಲಿಸ್ಕಾಪಿಕ್ ಸ್ಟೀರಿಂಗ್, ರೈನ್ ಸೆನ್ಸಿಂಗ್ ವೈಪರ್, ಲೆಥರ್ ಸೀಟು ಮತ್ತು ಬದಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಗಳ ಸೌಲಭ್ಯವಿರುತ್ತದೆ.


Click it and Unblock the Notifications








