730 ಅಶ್ವಶಕ್ತಿ ಉತ್ಪಾದಿಸಬಲ್ಲ 2017 ಲಂಬೋ ಅವೆಂಟಡೊರ್ ಎಸ್ ಭರ್ಜರಿ ಅನಾವರಣ

Written By:

ಬರೋಬ್ಬರಿ 730 ಅಶ್ವಶಕ್ತಿ ಉತ್ಪಾದಿಸಬಲ್ಲ 2017 ಲಂಬೋರ್ಗಿನಿ ಅವೆಂಟಡೊರ್ ಕಾರು ಭರ್ಜರಿ ಅನಾವರಣಗೊಂಡಿದೆ. ಇದು ಹಿಂದಿನ ಮಾದರಿಗಿಂತಲೂ 40 ಅಶ್ವಶಕ್ತಿ ಹೆಚ್ಚು ಉತ್ಪಾದಿಸಲಿದೆ.

ನೂತನ ಲಂಬೋರ್ಗಿನಿ ಅವೆಂಟಡೊರ್ ಎಸ್ ಕಾರಿನಲ್ಲಿರುವ ಅತ್ಯಂತ ಶಕ್ತಿಶಾಲಿ 6.5 ಲೀಟರ್ ವಿ15 ಸೂಪರ್ ಕಾರು ಎಂಜಿನ್ 730 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೇಗತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಕೇವಲ 2.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 349 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಲಂಬೋರ್ಗಿನಿಯ ಸ್ವತಂತ್ರ ಶಿಫ್ಟಿಂಗ್ ರಾಡ್ ಸೆವನ್ ಸ್ಪೀಡ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ.

ಕಾರಿನ ಒಟ್ಟಾರೆ ಭಾರ 1575 ಕೆ.ಜಿ ಆಗಿದೆ. ಇದು ಹಿಂದಿನ ಮಾದರಿಗೆ ಸಮಾನವಾಗಿದೆ.

ಕಾರ್ಬನ್ ಮೊನೊಕಾಕ್ ಸಂರಚನೆಯ ಲಂಬೋರ್ಗಿನಿ ಅವೆಂಟಡೊರ್ ಎಸ್, ಗರಿಷ್ಠ ವೇಗದಲ್ಲೂ ಅತ್ಯುತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದೆ.

ಇನ್ನು ಕಾರಿನ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂನಲ್ಲೂ ಪರಿಷ್ಕರಣೆ ತರಲಾಗಿದ್ದು, ಮತ್ತಷ್ಟು ತ್ವರಿತ ಗತಿಯಲ್ಲಿ ಕೆಲಸ ಮಾಡಲಿದೆ.

ಸ್ಟ್ರೀಟ್, ಸ್ಪೋರ್ಟ್ ಮತ್ತು ರೇಸ್ ಗಳೆಂಬ ಮೂರು ಚಾಲನಾ ವಿಧಗಳನ್ನು ನೂತನ ಲಂಬೋರ್ಗಿನಿ ಅವೆಂಟಡೊರ್ ಎಸ್ ಗಿಟ್ಟಿಸಿಕೊಳ್ಳಲಿದೆ.

ಅತ್ತ ಕಾರಿನೊಳಗೆ ವಿಶ್ವ ದರ್ಜೆಯ ಟಿಎಫ್ ಟಿ ಟಚ್ ಸ್ಕ್ರೀನ್ ಜೊತೆಗೆ ಆಪಲ್ ಕಾರ್ ಪ್ಲೇ ವ್ಯವಸ್ಥೆಯು ಸ್ಟಾಂಡರ್ಡ್ ಆಗಿ ದೊರಕಲಿದೆ.

ಅಂದ ಹಾಗೆ ಇಟಲಿಯ ಈ ಐಕಾನಿಕ್ ಕಾರು 2017 ಎಪ್ರಿಲ್ ವೇಳೆಯಾಗುವಾಗ ಬ್ರಿಟನ್ ರಸ್ತೆಯನ್ನು ತಲುಪಲಿದೆ.

English summary
Manic Lamborghini Aventador S Revealed — Maddest Lambo Just Got Crazier
Story first published: Monday, December 19, 2016, 17:41 [IST]
Please Wait while comments are loading...

Latest Photos