ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿ ಬಿಡುಗಡೆ
ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಮಿಟ್ಸುಬಿಸಿ, ಭಾರತದಲ್ಲಿ ಅತಿ ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿಯ ಕಾರನ್ನು ಬಿಡುಗಡೆಗೊಳಿಸಿದೆ.
ನೂತನ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿಯ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಕೇವಲ ಅಂದತೆಯ ಬದಲಾವಣೆ ಮಾತ್ರವಲ್ಲದೆ ಎಂಜಿನ್ ತಾಂತ್ರಿಕತೆಯಲ್ಲೂ ಅಪ್ ಗ್ರೇಡ್ ಹೊಂದಲಿದೆ. ಹಾಗಿದ್ದರೂ ಕಾರಿನ ಒಳಮೈಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಎಂಜಿನ್ ತಾಂತ್ರಿಕತೆ
- 2.5 ಲೀಟರ್ ಡೀಸೆಲ್
- 178 ಅಶ್ವಶಕ್ತಿ
- ಗೇರ್ ಬಾಕ್ಸ್
- 5 ಸ್ಪೀಡ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್
- ಮ್ಯಾನುವಲ್: 400 ಎನ್‌ಎಂ ತಿರುಗುಬಲ
- ಆಟೋಮ್ಯಾಟಿಕ್: 350 ಎನ್ಎಂ ತಿರುಗುಬಲ
- ಫೋರ್ ವೀಲ್ ಡ್ರೈವ್.
ಕಾರಿನ ಹೊರಮೈಯಲ್ಲಿ 3ಡಿ 'ಪಜೆರೊ ಸ್ಪೋರ್ಟ್' ಡಿಕಾಲ್ಸ್, ಕ್ರೋಮ್ ಸುತ್ತುವರಿದ ಹೆಡ್ ಲೈಟ್, ಟೈಲ್ ಲ್ಯಾಂಪ್, ಡೋರ್ ಹ್ಯಾಂಡಲ್, ಸನ್ ವೈಸರ್ ಹಾಗೂ ಟೈಟಾನಿಯಂ ಅಲಾಯ್ ವೀಲ್ ಸೌಲಭ್ಯಗಳಿರಲಿದೆ.
ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿಯು ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಗೋಲ್ಡನ್ ಬೀಜ್ ಮತ್ತು ಕ್ಲೋವ್ ಬ್ರೌನ್.


Click it and Unblock the Notifications



























