ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

By Nagaraja

ಭಾರತದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಅತಿ ನೂತನ ಕ್ರೀಡಾ ಬಳಕೆಯ ವಾಹನಗಳ ನಾಮಕರಣದ ಬಗ್ಗೆ ಊಹಪೋಹಾಗಳಿಗೆ ಕೊನೆಗೂ ತೆರೆ ಬಿದ್ದಿದೆ. ಈ ಬಗ್ಗೆ ಎದ್ದಿರುವ ಕುತೂಹಲಗಳಿಗೆ ತೆರೆ ಎಳೆದಿರುವ ಮಹೀಂದ್ರ ಅತಿ ನೂತನ ಎಸ್‌ಯುವಿ 'ನುವೊಸ್ಪೋರ್ಟ್' (NuvoSport) ಎಂದು ಹೆಸರಿಸಿಕೊಳ್ಳಲಿದೆ ಎಂದಿದೆ.

ನಿಮ್ಮ ಮಾಹಿತಿಗಾಗಿ, ಮಾರುಕಟ್ಟೆಯಲ್ಲಿರುವ ಕ್ವಾಂಟೊ ಸಂಪೂರ್ಣ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಇನ್ನು ಮುಂದೆ ಹೊಸ ವಿನ್ಯಾಸದೊಂದಿಗೆ ನುವೊಸ್ಪೋರ್ಟ್ ಎಂಬ ಹೊಸ ಹೆಸರಿನಿಂದ ಅರಿಯಲ್ಪಡಲಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಮಹೀಂದ್ರ ಬಿಡುಗಡೆ ಮಾಡಲಿರುವ ಅತಿ ನೂತನ ನುವೊಸ್ಪೋರ್ಟ್ ಎಸ್‌ಯುವಿ ಎಪ್ರಿಲ್ ಮೊದಲ ವಾರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಹೊಸ ತಲೆಮಾರಿನ ಸ್ಕಾರ್ಪಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ನುವೊಸ್ಪೋರ್ಟ್ ದಿಟ್ಟ ಹಾಗೂ ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿ ಬಂದಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಕ್ರೀಡಾತ್ಮಕ ಶೈಲಿ ಮತ್ತು ಸಕ್ರಿಯ ಜೀವನಶೈಲಿಯನ್ನು ತೋರ್ಪಡಿಸುವ ಸಹಜ ಸಾಮರ್ಥ್ಯದಿಂದಾಗಿ ಇದಕ್ಕೆ ನುವೊಸ್ಪೋರ್ಟ್ ಎಂಬುದಾಗಿ ಹೆಸರಿಡಲಾಗಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ನುವೊಸ್ಪೋರ್ಟ್ ಎಸ್‌ಯುವಿ ಪ್ರಮುಖವಾಗಿ ಸಕ್ರಿಯ ಹೊರಂಗಣ ಜೀವನಶೈಲಿ ಇಷ್ಟಪಡುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಭಾರತ ವಾಹನ ಮಾರುಕಟ್ಟೆಯಲ್ಲಿ ನಂ.1 ಎಸ್‌ಯುವಿ ಎಂದೆನಿಸಿಕೊಂಡಿರುವ ಮಹೀಂದ್ರ ನೂತನ ನುವೊಸ್ಪೋರ್ಟ್ ಮುಖಾಂತರ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿಪಡಿಸಲಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಚೆನ್ನೈಯಲ್ಲಿರುವ ಮಹೀಂದ್ರ ಅಧ್ಯಯನ ಘಟಕದಲ್ಲಿ (Mahindra Research Valley) ಮಹೀಂದ್ರ ಡಿಸೈನ್ ತಂಡವು ನೂತನ ನುವೊಸ್ಪೋರ್ಟ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಬರುತ್ತಿದೆ ಮಹೀಂದ್ರ ನೂತನ ಎಸ್‌ಯುವಿ 'ನುವೊಸ್ಪೋರ್ಟ್'

ಗರಿಷ್ಠ ನಿರ್ಮಾಣ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಿರುವ ಮಹೀಂದ್ರ ನುವೊಸ್ಪೋರ್ಟ್ ಸುಲಭ ತಂತ್ರಗಾರಿಕೆ ಮತ್ತು ಗರಿಷ್ಠ ಭದ್ರತಾ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

More from DriveSpark

Article Published On: Tuesday, March 22, 2016, 17:42 [IST]
English summary
Mahindra Christens its New SUV - NuvoSport
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+