ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

By Nagaraja

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಅತಿ ನೂತನ ಎಕ್ಸ್ ಯುವಿ ಏರೋ ಕೂಪೆ ಶೈಲಿಯ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಅನಾವರಣಗೊಳಿಸಿತ್ತು. ಆದರೆ ಈಗ ಈ ಬಹುನಿರೀಕ್ಷಿತ ಕಾರಿನ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಲು ಸಂಸ್ಥೆಯು ಮೀನಾಮೇಷ ಎದುರಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, ಡಾ. ಪವನ್ ಗೋನ್ಖಾ, "ಮಹೀಂದ್ರ ಎಕ್ಸ್ ಯುವಿ ಏರೋ ಕೂಪೆ-ಎಸ್ ಯುವಿ ಕಾರಿನ ನಿರ್ಮಾಣಕ್ಕೆ ಇನ್ನಷ್ಟೇ ಹಸಿರು ನಿಶಾನೆ ನೀಡಬೇಕಿದೆ" ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

2016 ಫೆಬ್ರವರಿ ತಿಂಗಳಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರ ಎಕ್ಸ್ ಯುವಿ ಏರೋ ಕಾನ್ಸೆಪ್ಟ್ ಕಾರು ಪ್ರದರ್ಶನಗೊಂಡಿತ್ತು. ಈಗ ಏಳು ತಿಂಗಳ ಅವಧಿ ಕಳೆದರೂ ಸಂಸ್ಥೆಯು ನಿರ್ಮಾಣಕ್ಕೆ ಮುಂದಾಗಿಲ್ಲ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

ಮಹೀಂದ್ರ ಎಕ್ಸ್ ಯುವಿ ಏರೋ ಯೋಜನೆಯನ್ನು ಸಂಸ್ಥೆಯು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಈ ಬಹುನಿರೀಕ್ಷಿತ ಕಾರು ಬಿಡುಗಡೆ ಮಾಡಲು ಸಂಸ್ಥೆಯು ಬದ್ಧವಾಗಿದ್ದು, ಈ ಸಂಬಂಧ ಆರಂಭಿಕ ಎಂಜಿಯನಿರಿಂಗ್ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

ಮಾರುಕಟ್ಟೆಯಲ್ಲಿ ವ್ಯಾಪಾರ ಕಾರ್ಯ ಸಾಧ್ಯತೆಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ಬಳಿಕವಷ್ಟೇ ಮಹೀಂದ್ರ ಎಕ್ಸ್ ಯುವಿ ಎರೋ ಕಾನ್ಸೆಪ್ಟ್ ಕಾರನ್ನು ಮಹೀಂದ್ರ ನಿರ್ಮಿಸಲಿದೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

ಜನಪ್ರಿಯ ಎಕ್ಸ್ ಯುವಿ 500 ತಳಹದಿಯಲ್ಲಿ ನಿರ್ಮಾಣವಾಗಲಿರುವ ಎಕ್ಸ್ ಯುವಿ ಏರೋ ಪ್ರೀಮಿಯಂ ಉತ್ಪನ್ನವಾಗಿರಲಿದ್ದು, ಮುಂದಿನ ಒಂದೆರಡು ವರ್ಷದೊಳಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

ಕ್ರೀಡಾ ಕೂಪೆ ಕ್ರೀಡಾ ಬಳಕೆಯ ವಾಹನ ಶೈಲಿಯ ಮಹೀಂದ್ರ ಎಕ್ಸ್ ಯುವಿ ಏರೋ ಕಾನ್ಸೆಪ್ಟ್ ಕಾರು ಪ್ರಮುಖವಾಗಿಯೂ ಬಿಎಂಡಬ್ಲ್ಯು ಎಕ್ಸ್6 ಹಾಗೂ ಮರ್ಸಿಡಿಸ್ ಬೆಂಝ್ ಜಿಎಲ್ ಇ ಕೂಪೆ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಮಹೀಂದ್ರ ಎಕ್ಸ್‌ಯುವಿ ಏರೋ ಕಾನ್ಸೆಪ್ಟ್‌ ಹಸಿರು ನಿಶಾನೆಗೆ ಮೀನಾಮೇಷ?

ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ ಮಹೀಂದ್ರ ಅಧೀನತೆಯಲ್ಲಿರುವ ವಿಶ್ವ ಪ್ರಸಿದ್ಧ ಡಿಸೈನ್ ಸಂಸ್ಥೆ ಇಟಲಿಯ ಫಿನಿನ್ ಫರಿನಾ ಸಂಸ್ಥೆಯು ವಿನ್ಯಾಸವನ್ನು ಒದಗಿಸಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿದೆ.


More from DriveSpark

Article Published On: Thursday, September 1, 2016, 12:03 [IST]
English summary
Mahindra Could Make The XUV Aero Concept A Reality
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+