ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

By Nagaraja

ಪರ್ಯಾಯ ಸಂಚಾರ ವಾಹಕದ ಹುಡುಕಾಟದಲ್ಲಿರುವ ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು 2016 ಜೂನ್ 02ರಂದು ಇ-ವೆರಿಟೊ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆಗೊಳಿಸಲಿದೆ.

'ಇ2ಒ' ಗಳಂತಹ ಸಣ್ಣ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿರುವ ಮಹೀಂದ್ರ ಇದೇ ಮೊದಲ ಬಾರಿಗೆ ಸೆಡಾನ್ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದು ಪರಿಸರ ಸ್ನೇಹಿ ವಾಹನಗಳಿಗೆ ಹೊಸ ಚೈತನ್ಯವನ್ನು ತುಂಬಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಮಹೀಂದ್ರ ಇ-ವೆರಿಟೊ ಕಳೆದ ವಾಹನ ಪ್ರದರ್ಶನ ಮೇಳದಲ್ಲೂ ತನ್ನ ಸಾನಿಧ್ಯವನ್ನು ಮೆರೆದಿತ್ತು.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಮಹೀಂದ್ರ ಇ-ವೆರಿಟೊ ವಿದ್ಯುತ್ ಚಾಲಿತ ಸೆಡಾನ್ ಕಾರು ಏಳರಿಂದ ಎಂಟು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಡಿ2, ಡಿ4 ಮತ್ತು ಡಿ6 ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

72ವಿ 3 ಫೇಸ್ ಎಸಿ ಇಂಡಕ್ಷನ್ ಮೋಟಾರು ಹೊಂದಲಿರುವ ಮಹೀಂದ್ರ ಇ-ವೆರಿಟೊ 3,500 ಆರ್‌ಪಿಎಂನಲ್ಲಿ ಗರಿಷ್ಠ 41 ಅಶ್ವಶಕ್ತಿಯನ್ನು (30.5 ಕೆಡಬ್ಲ್ಯು) ಉತ್ಪಾದಿಸಲಿದೆ. ಹಾಗೆಯೇ 3000 ಆರ್ ಪಿಎಂ ನಲ್ಲಿ 91 ಎನ್ ಎಂ ತಿರುಗುಬಲ ನೀಡಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಗಂಟೆಗೆ ಗರಿಷ್ಠ 86 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಮಹೀಂದ್ರ ಇ-ವೆರಿಟೊ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಅಂತೆಯೇ 4,277 ಎಂಎಂ ಉದ್ದ, 1740 ಎಂಎಂ ಅಗಲ ಮತ್ತು 1540 ಎಂಎಂ ಎತ್ತರ ಮತ್ತು 2630 ಎಂಎಂ ಚಕ್ರಾಂತರವನ್ನು ಹೊಂದಿರಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಇನ್ನುಳಿದಂತೆ 185/70 ಆರ್14 ಟ್ಯೂಬ್ ಲೆಸ್ ಚಕ್ರ, ರೂಫ್ ರೈಲ್, 10 ಸ್ಪೋಕ್ ಅಲಾಯ್ ವೀಲ್, ಕ್ರೋಮ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಎಂಟು ತಾಸಿನಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಹುದಾದ ಮಹೀಂದ್ರ ಇ-ವೆರಿಟೊ ಏಕ ಮಾತ್ರ ಚಾರ್ಜ್ ನಲ್ಲಿ 100 ಕೀ.ಮೀ. ವ್ಯಾಪ್ತಿಯ ವರೆಗೂ ಸಾಗಬಹುದಾಗಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಅದೇ ಹೊತ್ತಿಗೆ ಶಿಪ್ರವಾಗಿ ಚಾರ್ಜ್ ಮಾಡಿಸಬಹುದಾದ ಟಾಪ್ ಎಂಡ್ ಡಿ6 ವೆರಿಯಂಟ್ ಆರು ತಾಸಿನಲ್ಲೇ ಸಂಪೂರ್ಣವಾಗಿ ಚಾರ್ಜ್ ಆಗಲಿದೆ.

ಪರಿಸರ ಸ್ನೇಹಿ ಕಾರುಗಳಿಗೆ ಚೈತನ್ಯ ತುಂಬಲು ಬರುತ್ತಿದೆ ಮಹೀಂದ್ರ ಇ-ವೆರಿಟೊ

ಕೇಂದ್ರ ಸರಕಾರದ ಫೇಮ್ (Faster Adoption & Manufacturing of Electric vehicles) ಯೋಜನೆಯಡಿಯಲ್ಲಿ ಪ್ರಯೋಜನ ಗಿಟ್ಟಿಸಿಕೊಳ್ಳಲು ಸಾಧ್ಯತೆಯಿರುವ ಪರಿಸರ ಸ್ನೇಹಿ ಮಹೀಂದ್ರ ಇ-ವೆರಿಟೊ ವಿದ್ಯುತ್ ಚಾಲಿತ ಕಾರನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿದೆ.

More from DriveSpark

Article Published On: Wednesday, June 1, 2016, 12:47 [IST]
English summary
Mahindra e-Verito Electric Sedan Launching In India On June 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+