ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಇ2ಒ ಟು ಡೋರ್ ಕಾರಿನ ಬಳಿಕವೀಗ ನಾಲ್ಕು ಬಾಗಿಲುಗಳು ಇ2ಒ ಪ್ಲಸ್ ಕಾರನ್ನು ಬಿಡುಗಡೆ ಮಾಡಲು ಮಹೀಂದ್ರ ಸಜ್ಜಾಗುತ್ತಿದೆ. ತನ್ಮೂಲಕ ಭವಿಷ್ಯದ ಪರ್ಯಾಯ ಸಂಚಾರ ವ್ಯವಸ್ಥೆ ರೂಪಿಸಲು ಮಹೀಂದ್ರ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

By Nagaraja

ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರದ ಭಾಗವಾಗಿರುವ ಮಹೀಂದ್ರ ಎಲೆಕ್ಟ್ರಿಕ್, ಮುಂಬರುವ ಅಕ್ಟೋಬರ್ 21, ಶುಕ್ರವಾರದಂದು ಅತಿ ನೂತನ 'ಇ2ಒ ಪ್ಲಸ್' ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಪರಿಷ್ಕೃತ ಇ2ಒ ಕಾರಿಗೆ ಇತ್ತೀಚೆಗಷ್ಟೇ ಹೊಸ ನಾಮಕರಣವಾಗಿತ್ತು. ಇದು ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳಲ್ಲೂ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಮಹೀಂದ್ರ ಇ2ಒ ಪ್ಲಸ್ ವಿದ್ಯುತ್ ಚಾಲಿತ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಅಲಭ್ಯವಾದರೂ, ನಿರ್ವಹಣಾ ರಹಿತ ಲಿಥಿಯಂ ಇಯಾನ್ ಬ್ಯಾಟರಿ ಇತ್ಯಾದಿ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಒಮ್ಮೆ ಚಾರ್ಜಿಂಗ್ ಮಾಡಿಸಿದ್ದಲ್ಲಿ 100 ಕೀ.ಮೀ. ವರೆಗೂ ಮತ್ತು ಗಂಟೆಗೆ ಗರಿಷ್ಠ 80 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯವನ್ನು ಹೊಂದಿರಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಪದೇ ಪದೇ ಇಂಧನ ತುಂಬಿಸುವ ಕಿರಿಕಿರಿ ಅಥವಾ ಪೆಟ್ರೋಲ್ ಬಂಕ್ ಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾದ ಅಗತ್ಯವಿಲ್ಲ. ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಶೂನ್ಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದ ತೊಂದರೆ ಇರಲಾರದು.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಮನೆಯಲ್ಲಿದ್ದುಕೊಂಡೇ ಮಹಿಂದ್ರ ಇ2ಒ ವಿದ್ಯುತ್ ಚಾಲಿತ ಕಾರನ್ನು ಚಾರ್ಜ್ ಮಾಡಿಸಬಹುದಾಗಿದೆ. ಇತರೆ ಇಂಧನ ಚಾಲಿತ ಕಾರುಗಳಿಗೆ ಹೋಲಿಸಿದಾಗ ಚಾಲನಾ ವೆಚ್ಚದಲ್ಲೂ ಗಣನೀಯವಾದ ಇಳಿಕೆಯುಂಟಾಗಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಇವೆಲ್ಲದಕ್ಕೂ ಹೊರತಾಗಿ ಉನ್ನತ ಮಟ್ಟದ ಶೈಲಿ, ವರ್ಧಿತ ವ್ಯಾಪ್ತಿ, ವೇಗವಾಗಿ ಚಾರ್ಜಿಂಗ್ ಹಾಗೂ ಹೆಚ್ಚಿನ ಸ್ಥಳಾವಕಾಶವು ನೂತನ ಇ2ಒ ಕಾರಿಗೆ ವರದಾನವಾಗಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಇಲ್ಲಿ ಇ2ಒ ಎಂಬುದು ಆಮ್ಲಜನಕ ಶಕ್ತಿಯ ಸೂಚಕವಾದರೆ ಪ್ಲಸ್ ಎಂಬುದು ಗ್ರಾಹಕರಿಗೆ ಸಂಸ್ಥೆಯ ಧನಾತ್ಮಕ ಪರಿಣಾಮವನ್ನು ಬೀರಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಈಗ ಮಾರಾಟದಲ್ಲಿರುವ ಎರಡು ಬಾಗಿಲುಗಳ ಇ2ಒ ಕಾರಿನಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಸಿ, ಸ್ಮಾರ್ಟ್ ಫೋನ್ ಸಂಪರ್ಕ ಹೀಗೆ ಹತ್ತಾರು ವೈಶಿಷ್ಟ್ಯಗಳು ಪರಿಷ್ಕೃತ ಆವೃತ್ತಿಯಲ್ಲಿಯೂ ಇರಲಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ಮಹೀಂದ್ರ ಇ2ಒ ಕಾರಿನಲ್ಲಿ 53 ಎನ್ ಎಂ ತಿರುಗುಬಲದಲ್ಲಿ 19 ಕೆಡ್ಬ್ಲ್ಯು (25.5 ಅಶ್ವಶಕ್ತಿ) ಉತ್ಪಾದಿಸಬಲ್ಲ ತ್ರಿ ಫೇಸ್ ಇಂಡಕ್ಷನ್ ಮೋಟಾರು ಲಗತ್ತಿಸುವ ಸಾಧ್ಯತೆಯಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ನೂತನ ಕಾರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಟೆಸ್ಟಿಂಗ್ ವೇಳೆ ಪತ್ತೆ ಹಚ್ಚಲಾಗಿತ್ತು. ಇದರಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ ಚಾರ್ಜಿಂಗ್ ಪಾಯಿಂಟನ್ನು ಕಾರಿನ ಎಡಬದಿಯಲ್ಲಿ ಜೋಡಣೆ ಮಾಡಲಾಗಿದೆ.

ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕ್ಷಣಗಣನೆ

ನೂತನ ಕಾರಿನಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ ಚಾರ್ಜಿಂಗ್ ಪಾಯಿಂಟನ್ನು ಕಾರಿನ ಎಡಬದಿಯಲ್ಲಿ ಜೋಡಣೆ ಮಾಡಲಾಗಿದೆ.

More from DriveSpark

Article Published On: Wednesday, October 19, 2016, 13:08 [IST]
English summary
Mahindra To Launch An All-New Electric Vehicle On October 21 In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+