ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

Written By:

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಎಲೆಕ್ಟ್ರಿಕ್, ಅತಿ ನೂತನ ಇ2ಒ ಪ್ಲಸ್ ವಿದ್ಯುತ್ ಚಾಲಿತ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಟು ಡೋರ್ ಇ2ಒ ಎಲೆಕ್ಟ್ರಿಕ್ ಕಾರಿನ ಪರಿಷ್ಕೃತ ಆವೃತ್ತಿಯಾಗಿದ್ದು, ನಾಲ್ಕು ಡೋರ್ ನೊಂದಿಗೆ ಹೆಚ್ಚಿನ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪಿ4: 5.46 ಲಕ್ಷ ರು.

ಪಿ6: 5.95 ಲಕ್ಷ ರು.

ಪಿ8: 8.46 ಲಕ್ಷ ರು.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಹಿಂದಿನ ಆವೃತ್ತಿಯಲ್ಲಿ ಕ್ಯಾಬಿನ್ ಜಾಗದ ಅಭಾವದ ಕುರಿತು ವ್ಯಾಪಕ ದೂರುಗಳು ದಾಖಲಾಗಿತ್ತು. ನೂತನ ಇ2ಒ ನಲ್ಲಿ ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹುಡುಕುವ ಪ್ರಯತ್ನ ಮಾಡಲಾಗಿದ್ದು, ಹೆಚ್ಚು ಸ್ಥಳಾವಕಾಶವನ್ನು ಕೊಡಲಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಕೇಂದ್ರ ಸರಕಾರದ ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಅಂಡ್ ಎಲೆಕ್ಟ್ರಿಕಲ್ ವೆಹಿಕಲ್ಸ್ (ಫೇಮ್) ಯೋಜನಡಿಯಲ್ಲಿ ವಿಶೇಷ ಸಬ್ಸಿಡಿ ಪ್ರಯೋಜನವನ್ನು ಇ2ಒ ಗಿಟ್ಟಿಸಿಕೊಳ್ಳಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಸದ್ಯಕ್ಕೆ ದೇಶೀಯ ಮಾರುಕಟ್ಟೆಯನ್ನು ಗುರಿ ಮಾಡಿರುವ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿ ವಿದೇಶಿ ಮಾರುಕಟ್ಟೆಯತ್ತವೂ ಗಮನ ಹರಿಸಲಿದೆ. ಈ ಪೈಕಿ ನಮ್ಮ ಬೆಂಗಳೂರಿನಲ್ಲಿ ಹೆಚ್ಚಿನ ಮಾರಾಟವನ್ನು ಪಡೆದಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ನೂತನ ಇ2ಒ ಪ್ಲಸ್ ಮುಂಭಾಗದಲ್ಲಿ ಸ್ಕಾರ್ಪಿಯೊಗೆ ಹೋಲುವಂತಹ ಫ್ರಂಟ್ ಗ್ರಿಲ್ ಕಾಣಬಹುದಾಗಿದೆ. ಕಾರಿನ ಒಟ್ಟಾರೆ ಉದ್ದವನ್ನು 310 ಎಂಎಂ ಗಳಷ್ಟು ಹೆಚ್ಚಿಸಲಾಗಿದ್ದು, 3590 ಎಂಎಂಗಳಿಗೆ ಏರಿಕೆಯಾಗಿದೆ. ಹಾಗೆಯೇ ಚಕ್ರಾಂತರ 300 ಎಂಎಂ ಗಳಷ್ಟು ಏರಿಕೆಯಾಗಿ 2258 ಎಂಎಂ ಗಳಿಗೆ ತಲುಪಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಜಿಪಿಎಸ್ ಸಂಪರ್ಕಿತ ನೇವಿಗೇಷನ್ ಸಿಸ್ಟಂ, ಚಾಲನೆ ವ್ಯಾಪ್ತಿಯನ್ನು ಎಚ್ಚರಿಸಿರುವ ಆನ್ ಬೋರ್ಡ್ ಕಂಪ್ಯೂಟರ್, ಟಚ್ ಸ್ಕ್ರೀನ್ ಮಾನಿಟರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಮಹೀಂದ್ರ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರಿನಲ್ಲಿ ರಿವೈವ್ ಎಂಬ ಎಸ್ ಒಎಸ್ ವೈಶಿಷ್ಟ್ಯವನ್ನು ಪಡೆದಿದ್ದು, ಬ್ಯಾಟರಿ ಶೇಕಡಾ 10ಕ್ಕಿಂತಲೂ ಕೆಳಗೆ ಬಂದಾಗಲೂ 7ರಿಂದ 10 ಕೀ.ಮೀ. ವರೆಗೆ ಹೆಚ್ಚುವರಿ ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ. ಇದನ್ನು ಟಚ್ ಬಟನ್ ಅಥವಾ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇ2ಒ ಪ್ಲಸ್ ಆಪ್ ಮುಖಾಂತರವೂ ಸಕ್ರಿಯಗೊಳಿಸಬಹುದಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಇನ್ನುಳಿದಂತೆ ಮೊಬೈಲ್ ಆಪ್ ಮುಖಾಂತರವೇ ಕಾರಿನ ಎಸಿಯನ್ನು ಸ್ವಿಚ್ ಆನ್/ಆಫ್ ಮತ್ತು ಲಾಕ್/ಅನ್ ಲಾಕ್ ಸಹ ಮಾಡಬಹುದಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಟಾಪ್ ಎಂಡ್ ಪಿ8 ವೆರಿಯಂಟ್ ನಲ್ಲಿರುವ 3 ಫೇಸ್ ಇಂಡಕ್ಷನ್ ಮೋಟಾರು ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದ್ದು, 91 ಎನ್ ಎಂ ತಿರುಗುಬಲದಲ್ಲಿ 40 ಅಶ್ವಶಕ್ತಿ ಉತ್ಪಾದಿಸಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಇದರಲ್ಲಿರುವ 210ಎಎಚ್ ಲಿಥಿಯಂ ಇಯಾನ್ ಬ್ಯಾಟರಿ ಚಾಲನಾ ವ್ಯಾಪ್ತಿಯನ್ನು 140 ಕೀ.ಮೀ. ಹಾಗೂ ಗಂಟೆಗೆ 85 ಕೀ.ಮೀ. ವರೆಗೆ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿಗಿನ್ನು ಫೋರ್ ಡೋರ್; ಇ2ಒ ಪ್ಲಸ್ ಭರ್ಜರಿ ಬಿಡುಗಡೆ

ಮಹೀಂದ್ರ ಇ2ಒ ಪ್ಲಸ್ ಸಂಪೂರ್ಣ ಚಾರ್ಜ್ ಮಾಡಿಸಲು ಒಂಬತ್ತು ತಾಸು ಸಮಯ ತಗುಲಲಿದೆ. ಇನ್ನು ಟು ಡೋರ್ ಮಾದರಿಗೆ ಸಮಾನವಾದ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

English summary
Mahindra e2o Plus Launched In India; Prices Start At Rs. 5.46 Lakh
Story first published: Friday, October 21, 2016, 15:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark