ದೇಶದ ಚೊಚ್ಚಲ ವಿದ್ಯುತ್ ಸರಕು ಗಾಡಿ ಬಿಡುಗಡೆ
ವಿದ್ಯುತ್ ಚಾಲಿತ ವಾಹನಗಳ ವಿಭಾಗಗಳಲ್ಲಿ ಹೊಸ ಕ್ರಾಂತಿಯ ಅಲೆಯನ್ನೇ ಎಬ್ಬಿಸುತ್ತಿರುವ ಭಾರತದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ದೇಶದ ಮೊತ್ತ ಮೊದಲ ಎಲೆಕ್ಟ್ರಿಕ್ ಸರಕು ಗಾಡಿ ಮತ್ತು ಪ್ರಯಾಣಿಕ ವಾಹನವಾಗಿರುವ 'ಇಸುಪ್ರೊ' ಬಿಡುಗಡೆಗೊಳಿಸಿದೆ.

ಮುಖ್ಯಾಂಶಗಳು
ಎರಡು ವೆರಿಯಂಟ್ ಗಳು: ಇಸುಪ್ರೊ ಕಾರ್ಗೊ ಮತ್ತು ಇಸುಪ್ರೊ ಪ್ಯಾಸೆಂಜರ್ ವ್ಯಾನ್,
ಸಂಪೂರ್ಣ ಚಾರ್ಜ್ ಮಾಡಿಸಿದಾಗ 112 ಕೀ.ಮೀ. ವರೆಗೆ ವ್ಯಾಪ್ತಿ,
ನಗರದೊಳಗಿನ ಚಾಲನೆಗೆ ಹೆಚ್ಚು ಸೂಕ್ತ,
ಶೂನ್ಯ ಮಾಲಿನ್ಯ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಇ ಸುಪ್ರೊ ಕಾರ್ಗೊ: 8.45 ಲಕ್ಷ ರು.
ಇ ಸುಪ್ರೊ ಪ್ಯಾಸೆಂಜರ್: 8.75 ಲಕ್ಷ ರು.

ನೂತನ ಸುಪ್ರೊ ತಳಹದಿಯು ವಿದ್ಯುತ್ ಚಾಲಿತ ವಾಹನಗಳಿಗೆ ಹೊಸ ಆಯಾಮವನ್ನು ತುಂಬಲಿದೆ. ಈ ಮೂಲಕ ಪ್ರಯಾಣಿಕ ಮಾತ್ರವಲ್ಲದೆ ಸರಕು ಸಾಗಣೆ ವಿಭಾಗದಲ್ಲಿ ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣ ಸಾಧ್ಯ ಎಂಬುದನ್ನು ಮಹೀಂದ್ರ ಸಾಬೀತುಪಡಿಸಿದೆ.

ಬಿ2ಬಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಮಹೀಂದ್ರ ಇ ಸುಪ್ರೊ ವಿದ್ಯುತ್ ಚಾಲಿತ ವಾಹನಗಳು ಮಹೀಂದ್ರದ ಎಲ್ಲ ಶೋ ರೂಂ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಇ-ಕಾಮರ್ಸ್, ಕೊರಿಯರ್ ಸೇವೆ ಹಾಗೂ ಇತರೆ ನಗರ ಸಾರಿಗೆ ಸಂಸ್ಥೆಗಳಿಗೆ ಇಸುಪ್ರೊ ಅತ್ಯುತ್ತಮ ವೇದಿಕೆಯೊದಗಿಸಲಿದೆ. ಶೂನ್ಯ ಮಾಲಿನ್ಯವಾಗಿರುವುದರಿಂದ ಸಂಪೂರ್ಣಾ ಪರಿಸರ ಸ್ನೇಹಿ ಹಾಗೂ ಭವಿಷ್ಯತ್ತಿನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಮಹೀಂದ್ರ ಇಸುಪ್ರೊ ಚಾರ್ಜಿಂಗ್ ಮೊಬೈಲ್ ಫೋನ್ ಚಾರ್ಜ್ ಮಾಡಿಸುವುದಷ್ಟು ಸುಲಭವಾಗಿದ್ದು, 112 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಬಹುದಾಗಿದೆ. ಅಂತೆಯೇ ಗಂಟೆಗೆ ಗರಿಷ್ಠ 60 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಹೀಂದ್ರ ಎಲೆಕ್ಟ್ರಿಕ್‌ನ ತಾಜಾ ಎಲೆಕ್ಟ್ರಿಕ್ ತಂತ್ರಗಾರಿಕೆಯನ್ನು ಹೊಂದಿರುವ ಇ ಸುಪ್ರೊ, ಹೈ ಟಾರ್ಕ್ ಎಲೆಕ್ಟ್ರಿಕ್ ಮೋಟಾರ್, ಡೈರಕ್ಟ್ ಡ್ರೈವ್ ಗೇರ್ ಬಾಕ್ಸ್ ಗಳನ್ನು ಪಡೆದಿದೆ. ಅಲ್ಲದೆ ನಗರ ಚಾಲನೆಗೆ ಹೆಚ್ಚು ಸೂಕ್ತವೆನಿಸಲಿದೆ.

ಇದರೊಂದಿಗೆ ಮಹೀಂದ್ರ ಎಲೆಕ್ಟ್ರಿಕ್ ಇ2ಒ, ಇ ವೆರಿಟೊ ಸಾಲಿಗೀಗ ನೂತನ ಇ ಸುಪ್ರೊ ಶ್ರೇಣಿಯ ವಾಹನಗಳು ಸೇರ್ಪಡೆಗೊಂಡಿದೆ. ಈ ಮೂಲಕ ಸುಸ್ಥಿರ ಪರಿಸರವನ್ನು ಪ್ರೋತ್ಸಾಹಿಸಲಿದೆ.

ಶೂನ್ಯ ಮಾಲಿನ್ಯ
ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವ್ಯಾನ್ ಆಗಿರುವ ಇ ಸುಪ್ರೊ ಸಂಪೂರ್ಣ ಪರಿಸರ ಸ್ನೇಹಿಯೆನಿಸಿಕೊಂಡಿದೆ.

ಡೈರಕ್ಟ್ ಡ್ರೈವ್ ಗೇರ್ ಬಾಕ್ಸ್
ಡೈರಕ್ಟ್ ಡ್ರೈವ್ ಟ್ರಾನ್ಸ್ ಮಿಷನ್ ಜೊತೆಗೆ ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್ ಹಾಗೂ ಸ್ಪೀಡ್ ಮ್ಯಾನೇಜ್ ಮೆಂಟ್ ಮೋಟಾರು ಲಗತ್ತಿಸಲಾಗಿದೆ. ಇದು ಇದರೊಂದಿಗೆ ಗೇರ್ ಬದಲಾಯಿಸುವ ಕಿರಿಕಿರಿ ಇರುವುದಿಲ್ಲ.

ಮನೆಯಿಂದಲೇ ಚಾರ್ಜಿಂಗ್
ಇ ಸುಪ್ರೊ ಚಾರ್ಜ್ ಮಾಡಿಸುವುದು ಮೊಬೈಲ್ ಫೋನ್ ಚಾರ್ಜ್ ಮಾಡುವಷ್ಟು ಸರಳವಾಗಿದ್ದು, 15 ಆಂಪ್ಲಿಫೈಯರ್ ಪ್ಲಗ್ ಪಾಯಿಂಟ್ ನಲ್ಲಿ ಎಂಟು ತಾಸು 45 ತಾಸಿನಲ್ಲೇ ಸಂಪೂರ್ಣವಾಗಿ ಚಾರ್ಜಿಂಗ್ ಮಾಡಿಸಬಹುದಾಗಿದೆ.

ಎಲೆಕ್ಟ್ರಿಕ್ ಮೋಟಾರ್ ಡ್ರೈವ್
ಇದರಲ್ಲಿ 25 ಕೆಡಬ್ಲ್ಯು ಮತ್ತು 90 ಎನ್ ಎಂ ತಿರುಗುಬಲ ನೀಡುವ ಎಲೆಕ್ಟ್ರಿಕ್ ಮೋಟಾರು ಜೋಡಣೆ ಮಾಡಲಾಗಿದೆ.

ರಿಜನರೇಟಿವ್ ಬ್ರೇಕಿಂಗ್
ಭಾರತದಲ್ಲಿ ಇದೇ ಮೊದಲ ಬಾರಿಗೆ ಇ ಸುಪ್ರೊ ಎಲೆಕ್ಟ್ರಿಕ್ ವಾಹನದಲ್ಲಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಇದರಂತೆ ಪ್ರತಿ ಬಾರಿಯೂ ಬ್ರೇಕ್ ಅದುಮಿದಾಗ ಬ್ಯಾಟರಿ ರಿ ಚಾರ್ಜ್ ಆಗಲಿದೆ.

ವಿಶಿಷ್ಟ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಸ್ಟೈಲಿಷ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬ್ಯಾಟರಿ ಚಾರ್ಜಿಂಗ್, ಡಿಸ್ಟಾನ್ಸ್ ಟು ಎಮ್ಟಿ, ವೇಗ, ಗೇರ್, ಪ್ರಯಾಣ ದೂರ ಮತ್ತು ಕ್ಷಮತೆಯ ಬಗ್ಗೆ ಮಾಹಿತಿಗಳನ್ನು ಒದಗಿಸಲಿದೆ.

ಲಿಥಿಯಂ ಇಯಾನ್ ಬ್ಯಾಟರಿ
ಇ ಸುಪ್ರೊದಲ್ಲಿ 72 ವಾಟ್ ಬ್ಯಾಟರಿ ಆಳವಡಿಸಲಾಗಿದೆ. ಈ ಮೂಲಕ ದೀರ್ಘ ಬಾಳ್ವಿಕೆ ಜೊತೆಗೆ ನಿರ್ವಹಣಾ ರಹಿತ ಲಿಥಿಯಂ ಬ್ಯಾಟರಿ ಲಗತ್ತಿಸಲಾಗಿದೆ.

ಬೂಸ್ಟ್ ಮೋಡ್
ಎತ್ತರಕ್ಕೆ ಏರುವಾಗ ಇದರಲ್ಲಿರುವ ಬೂಸ್ಟ್ ಮೋಡ್ ಹೆಚ್ಚುವರಿ ಬಲ ತುಂಬಲಿದ್ದು, ಸಲಿಸಾಗಿ ಗಾಡಿ ಚಲಿಸಲಿದೆ.

ರಿವೈವ್ ಆರ್
ಹಾಗೊಂದು ವೇಳೆ ಚಾರ್ಜ್ ಮುಗಿದು ಹೋದ್ದಲ್ಲಿ ಇದರಲ್ಲಿರುವ ರಿವೈವ್ ಆರ್ ತುರ್ತು ತಂತ್ರಗಾರಿಕೆಯಿಂದಾಗಿ ಏಳು ಕೀ.ಮೀ. ವರೆಗೆ ಸಾಗಬಹುದಾಗಿದೆ.


Click it and Unblock the Notifications








