ಮಹೀಂದ್ರ ಇ ವೆರಿಟೊ ವಿದ್ಯುತ್ ಚಾಲಿತ ಕಾರು ಭರ್ಜರಿ ಬಿಡುಗಡೆ
ಭಾರತೀಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಅತಿ ನೂತನ ಇ ವೆರಿಟೊ ವಿದ್ಯುತ್ ಚಾಲಿತ ಕಾರನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. ಇದು ಪರಿಸರ ಸ್ನೇಹಿ ವಾಹನಗಳ ಹುಡುಕಾಟದಲ್ಲಿರುವ ವಾಹನ ಜಗತ್ತಿಗೆ ಮಹೀಂದ್ರ ನೀಡುತ್ತಿರುವ ಕೊಡುಗೆಯಾಗಿರಲಿದೆ.
ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿರುವ ಮಹೀಂದ್ರ ಇ ವೆರಿಟೊ ಎಲೆಕ್ಟ್ರಿಕ್ ಕಾರಿನ ದೆಹಲಿ ಎಕ್ಸ್ ಶೋರೂಂ ಪ್ರಾರಂಭಿಕ ಬೆಲೆ 9.50 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಡಿ2: 9.50 ಲಕ್ಷ ರು.
- ಡಿ4: 9.75 ಲಕ್ಷ ರು.
- ಡಿ6: 10 ಲಕ್ಷ ರು.

ದೆಹಲಿ, ಮುಂಬೈ ಸೇರಿದಂತೆ ಬೆಂಗಳೂರು, ಕೋಲ್ಕತ್ತಾ, ಚಂಡೀಗಡ, ಹೈದರಾಬಾದ್, ಜೈಪುರ, ನಾಗ್ಪುರಗಳಂತಹ ನಗರಗಳನ್ನು ತಲುಪಿರುವ ಮಹೀಂದ್ರ ಇ ವೆರಿಟೊ ಕ್ರಮೇಣ ಇತರ ನಗರಗಳಿಗೂ ವಿಸ್ತರಿಸಲಿದೆ.

ಕೇವಲ 1.45 ನಿಮಿಷಗಳಲ್ಲಿ ಶೇಕಡಾ 80ರಷ್ಟು ತ್ವರಿತ ಚಾರ್ಜ್ ಮಾಡಿಸಬಹುದಾದ ಮಹೀಂದ್ರ ಇ ವೆರಿಟೊ ಸಂಪೂರ್ಣವಾಗಿ ಚಾರ್ಜ್ ಮಾಡಿಸಿದಾಗ 110 ಕೀ.ಮೀ. ವರೆಗೆ ಸಾಗಬಹುದಾಗಿದೆ.

ಮಹೀಂದ್ರ ಇ ವೆರಿಟೊ ಪರಿಸರ ಸ್ನೇಹಿ ಕಾರಿನಲ್ಲಿ ಒಂದು ಕೀ.ಮೀ. ದೂರ ಚಲಿಸಲು ತಗಲುವ ಖರ್ಚು 1.15 ರುಪಾಯಿ ಮಾತ್ರವಾಗಿದೆ.

ಭಾರತೀಯ ಸರಕಾರದ ಫೇಮ್ (Faster Adoption & Manufacturing of Electric vehicles) ಯೋಜನೆಯಡಿಯಲ್ಲಿ ಗುರುತಿಸಿಕೊಂಡಿರುವ ಇ ವೆರಿಟೊ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನೆರವಾಗಿದೆ.

ಸಂಪೂರ್ಣ ಮಾಲಿನ್ಯ ಮುಕ್ತವಾಗಿರುವ ಇ ವೆರಿಟೊದಲ್ಲಿ ರಿಜನರೇಟಿವ್ ಬ್ರೇಕಿಂಗ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದರಂತೆ ಪ್ರತಿಯೊಂದು ಬಾರಿಯೂ ಬ್ರೇಕ್ ಅದುಮಿದಾಗ ಮೋಟಾರ್ ಗೆ ಚೈತ್ಯನ್ಯ ತುಂಬಲಿದೆ.

ಟೆಲಿಮ್ಯಾಟಿಕ್ಸ್ ತಂತ್ರಗಾರಿಕೆಯ ನೆರವಿನಿಂದ ಇ ವೆರಿಟೊ ನಿರ್ವಹಣೆಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳ ಮಾನದಂಡಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮೂಲಕ ಚಾಲನೆಗೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಕಲೆ ಹಾಕಬಹುದಾಗಿದೆ.

ಜಗತ್ತಿನಲ್ಲಿ ಮೊದಲ ಬಾರಿಗೆ ಮಹೀಂದ್ರ ಇ ವೆರಿಟೊ ಕಾರಿನಲ್ಲಿ ರಿವೈವ್ ತಂತ್ರಜ್ಞಾನವನ್ನು ಆಳವಡಿಸಲಾಗಿದ್ದು, ತನ್ಮೂಲಕ ಕಡಿಮೆ ಚೈತನ್ಯದಲ್ಲಿ ಕಾರು ಸಂಚರಿಸುತ್ತಿದ್ದಲ್ಲಿ, ರಿವೈವ್ ಸಕ್ರಿಯವಾಗಲಿರುವುದರಿಂದ ಹೆಚ್ಚುವರಿ 8 ಕೀ.ಮೀ. ವರೆಗೆ ಸಾಗಬಹುದಾಗಿದೆ. ಈ ಮೂಲಕ ಹತ್ತಿರದ ಚಾರ್ಜಿಂಗ್ ಪಾಯಿಂಟ್ ವರೆಗೆ ತೆರಳಲು ಸಹಕಾರಿಯಾಗಲಿದೆ.

ಜಗತ್ತಿನಲ್ಲಿ ಮೊದಲ ಬಾರಿಗೆ ಮಹೀಂದ್ರ ಇ ವೆರಿಟೊ ಕಾರಿನಲ್ಲಿ ರಿವೈವ್ ತಂತ್ರಜ್ಞಾನವನ್ನು ಆಳವಡಿಸಲಾಗಿದ್ದು, ತನ್ಮೂಲಕ ಕಡಿಮೆ ಚೈತನ್ಯದಲ್ಲಿ ಕಾರು ಸಂಚರಿಸುತ್ತಿದ್ದಲ್ಲಿ, ರಿವೈವ್ ಸಕ್ರಿಯವಾಗಲಿರುವುದರಿಂದ ಹೆಚ್ಚುವರಿ 8 ಕೀ.ಮೀ. ವರೆಗೆ ಸಾಗಬಹುದಾಗಿದೆ. ಈ ಮೂಲಕ ಹತ್ತಿರದ ಚಾರ್ಜಿಂಗ್ ಪಾಯಿಂಟ್ ವರೆಗೆ ತೆರಳಲು ಸಹಕಾರಿಯಾಗಲಿದೆ.

ಇದರಲ್ಲಿರುವ ಡೈರಕ್ಟ್ ಡ್ರೈವ್ ಗೇರ್ ಬಾಕ್ಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಂತೆ ಕೆಲಸ ಮಾಡಲಿದ್ದು, ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸಲಿದೆ.

ಮಹೀಂದ್ರ ಇ ವೆರಿಟೊ ಕಾರನ್ನು ಮನೆಯಲ್ಲೂ ಮೊಬೈಲ್ ಚಾರ್ಜ್ ಮಾಡಿಸುವಷ್ಟು ಸುಲಭವಾಗಿ ಚಾರ್ಜ್ ಮಾಡಿಸಬಹುದಾಗಿದೆ. ಇಂದು ಸಂಪೂರ್ಣವಾಗಿ ಚಾರ್ಜ್ ಆಗಲು ಎಂಟು ತಾಸು 45 ನಿಮಿಷಗಳಷ್ಟು ಸಮಯ ತಗುಲಲಿದೆ.

ನಿರ್ವಹಣಾ ವೆಚ್ಚವಿಲ್ಲದ 72 ವಾಟ್ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಆಳವಡಿಸಲಾಗಿದೆ. ಅಲ್ಲದೆ ಹೆಚ್ಚಿನ ಪವರ್ ಗಾಗಿ ಬೂಸ್ಟ್ ಮೋಡ್ ಕೂಡಾ ಇರಲಿದೆ.

ಮಹೀಂದ್ರ ಇ-ವೆರಿಟೊ 3,500 ಆರ್‌ಪಿಎಂನಲ್ಲಿ ಗರಿಷ್ಠ 41 ಅಶ್ವಶಕ್ತಿಯನ್ನು (30.5 ಕೆಡಬ್ಲ್ಯು) ಉತ್ಪಾದಿಸಲಿದೆ. ಹಾಗೆಯೇ 3000 ಆರ್ ಪಿಎಂ ನಲ್ಲಿ 91 ಎನ್ ಎಂ ತಿರುಗುಬಲ ನೀಡಲಿದೆ.

ಗಂಟೆಗೆ ಗರಿಷ್ಠ 86 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಮಹೀಂದ್ರ ಇ-ವೆರಿಟೊ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರಲಿದೆ.

ಅಂತೆಯೇ 4,277 ಎಂಎಂ ಉದ್ದ, 1740 ಎಂಎಂ ಅಗಲ ಮತ್ತು 1540 ಎಂಎಂ ಎತ್ತರ ಮತ್ತು 2630 ಎಂಎಂ ಚಕ್ರಾಂತರವನ್ನು ಹೊಂದಿರಲಿದೆ.

ಇನ್ನುಳಿದಂತೆ 185/70 ಆರ್14 ಟ್ಯೂಬ್ ಲೆಸ್ ಚಕ್ರ, ರೂಫ್ ರೈಲ್, 10 ಸ್ಪೋಕ್ ಅಲಾಯ್ ವೀಲ್, ಕ್ರೋಮ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿರಲಿದೆ.


Click it and Unblock the Notifications








