ಮಹೀಂದ್ರ ಇಂಪಿರಿಯೊ ಸಣ್ಣ ಪಿಕಪ್ ಟ್ರಕ್ ಭರ್ಜರಿ ಎಂಟ್ರಿ
ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಭಾರತ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಇಂಪಿರಿಯೊ ಸಣ್ಣ ಪಿಕಪ್ ಟ್ರಕ್ ಬಿಡುಗಡೆಗೊಳಿಸಿದೆ.
ಪ್ರಾರಂಭಿಕ ಬೆಲೆ: 6.25 ಲಕ್ಷ ರು.
ಉಪಯುಕ್ತ ವಾಹನ ತಯಾರಿಕೆಯಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಮಹೀಂದ್ರ, ಇಂಪಿರಿಯೊ ಮೂಲಕ ಸಣ್ಣ ವಾಣಿಜ್ಯ ವಿಭಾಗಕ್ಕೂ (ಎಸ್‌ಸಿವಿ) ಅತ್ಯುತ್ತಮ ಕೊಡುಗೆಯನ್ನು ಮುಂದಿಟ್ಟಿದೆ. ನೂತನ ಇಂಪಿರಿಯೊ ದೇಶದ ವಾಣಿಜ್ಯ ಮಾರುಕಟ್ಟೆಯಲ್ಲಿ ಹಳೆಯದಾದ ಮಹೀಂದ್ರ ಜೆನಿಯೊ ಸ್ಥಾನವನ್ನು ತುಂಬಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಸಿಂಗಲ್ ಕ್ಯಾಬಿನ್
- ಎಸ್‌ಸಿ (ಬಿಎಸ್ III): 6.25 ಲಕ್ಷ ರು.
- ಎಸ್‌ಸಿ (ಬಿಎಸ್ IV): 6.40 ಲಕ್ಷ ರು.
- ಎಸ್‌ಸಿ ವಿಎಕ್ಸ್ (ಬಿಎಸ್ III): 6.60 ಲಕ್ಷ ರು.
- ಎಸ್‌ಸಿ ವಿಎಕ್ಸ್ (ಬಿಎಸ್ IV): 6.75 ಲಕ್ಷ ರು.
- ಡಿಸಿ (ಬಿಎಸ್ III): 6.60 ಲಕ್ಷ ರು.
- ಡಿಸಿ (ಬಿಎಸ್ IV): 6.75 ಲಕ್ಷ ರು.
- ಡಿಸಿ ವಿಎಕ್ಸ್ (ಬಿಎಸ್ III): 7.12 ಲಕ್ಷ ರು.
- ಡಿಸಿ ವಿಎಕ್ಸ್ (ಬಿಎಸ್ IV): 7.27 ಲಕ್ಷ ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಡಬಲ್ ಕ್ಯಾಬಿನ್

ಪ್ರಸ್ತುತ ಪ್ರೀಮಿಯಂ ಟ್ರಕ್ ಸಿಂಗಲ್ ಹಾಗೂ ಡಬಲ್ ಕ್ಯಾಬಿನ್ ಆಯ್ಕೆಯೊಂದಿಗೆ ಎಂಟ್ರಿ ಕೊಟ್ಟಿದೆ. ಇದು ಬೇಸ್ ನಿಂದ ಹಿಡಿದು ಟಾಪ್ ಎಂಡ್ ವಿಎಕ್ಸ್ ವೆರಿಯಂಟ್ ವರೆಗೂ ಲಭ್ಯವಾಗಲಿದೆ.

ಪ್ರಸ್ತುತ ಪ್ರೀಮಿಯಂ ಟ್ರಕ್ ಸಿಂಗಲ್ ಹಾಗೂ ಡಬಲ್ ಕ್ಯಾಬಿನ್ ಆಯ್ಕೆಯೊಂದಿಗೆ ಎಂಟ್ರಿ ಕೊಟ್ಟಿದೆ. ಇದು ಬೇಸ್ ನಿಂದ ಹಿಡಿದು ಟಾಪ್ ಎಂಡ್ ವಿಎಕ್ಸ್ ವೆರಿಯಂಟ್ ವರೆಗೂ ಲಭ್ಯವಾಗಲಿದೆ.

ಹೊಸ ಇಂಪಿರಿಯೊ 2.5 ಲೀಟರ್ ಎಂಡಿಐ ಸಿಆರ್‌ಡಿಇ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 75 ಅಶ್ವಶಕ್ತಿಯಲ್ಲಿ 220 ಎನ್‌ಎಂ ತಿರುಗುಬಲವನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ನಿಂದಲೂ ನಿಯಂತ್ರಿಸಲ್ಪಡಲಿದೆ.
ಮೈಲೇಜ್: 13.55 ಕೀ.ಮೀ.

2930 ಕೆ.ಜಿ ತೂಕವನ್ನು ಹೊಂದಿರುವ ಈ ಹಗುರ ಭಾರದ ವಾಣಿಜ್ಯ ವಾಹನವು 1100 ಕೆ.ಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ.

ಹೊರಮೈ ಮುಂದುಗಡೆ ದೃಢವಾದ ಗ್ರಿಲ್, ಮೊನಚಾದ ಹೆಡ್ ಲ್ಯಾಂಪ್ ಕ್ಲಸ್ಟರ್, ಟರ್ನಿಂಗ್ ಲೈಟ್ಸ್, ಪರಿಷ್ಕೃತ ಫ್ರಂಟ್ ಬಂಪರ್, ವೃತ್ತಾಕಾರದ ಫಾಗ್ ಲ್ಯಾಂಪ್, ವಿಶಾಲವಾದ ಏರ್ ಡ್ಯಾಮ್ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಅಂತೆಯೇ ಪಿಕಪ್ ಒಳಮೈ ಸಹ ಚೆನ್ನಾಗಿ ವಿನ್ಯಾಸಗೊಳಿಸಲಾಗಿದ್ದು, ಡ್ಯಾಶ್ ಬೋರ್ಡ್, ಎರಡು ದೊಡ್ಡದಾದ ಎಸಿ ವೆಂಟ್ಸ್ ಹಾಗೂ ಮೂರು ಸ್ಪೋಕ್ ಸ್ಟೀರಿಂಗ್ ವೀಲ್ ಇರಲಿದೆ.

ನೂತನ ಮಹೀಂದ್ರ ಇಂಪಿರಿಯೊ ಪಿಕಪ್ ಟ್ರಕ್ ಫ್ಯೂಯಲ್ ಸ್ಮಾರ್ಟ್ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಹೆಚ್ಚು ಇಂಧನ ಕ್ಷಮತೆಗಾಗಿ ಪವರ್ ಹಾಗೂ ಇಕೊಗಳಂತಹ ಎರಡು ಪವರ್ ಮೋಡ್ ಗಳನ್ನು ಪಡೆಯಲಿದೆ.

ಇನ್ನು ಮುಂದುಗಡೆ ಬಕೆಟ್ ಸೀಟು, ಎತ್ತರ ಹೊಂದಾಣಿಸಬಹುದಾದ ಪವರ್ ಸ್ಟೀರಿಂಗ್ ಹಾಗೂ 2 ಡಿನ್ ಮ್ಯೂಸಿಕ್ ಸಿಸ್ಟಂ ಪಡೆದುಕೊಂಡಿದೆ.


Click it and Unblock the Notifications








