ಡಸ್ಟರ್ ತಳಹದಿಯ ಪಿಕಪ್ ಬಿಡುಗಡೆಗೆ ಕಾಲ ಸನ್ನಿಹಿತ

By Nagaraja

ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಭಾರಿ ಸದ್ದು ಮಾಡಿರುವ ರೆನೊ ಡಸ್ಟರ್ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದ್ದು, ವಾಣಿಜ್ಯ ವಿಭಾಗಕ್ಕೂ ಕಾಲಿಡುತ್ತಿದೆ. ಹೌದು, ರೆನೊ ಡಸ್ಟರ್ ತಳಹದಿಯಲ್ಲಿ ನಿರ್ಮಾಣಗೊಂಡಿರುವ ನೂತನ ಪಿಕಪ್ ಟ್ರಕ್ 2015 ಜೂನ್ 18ರಂದು ಬಿಡುಗಡೆಯಾಗಲಿದೆ.

ಅರ್ಜೇಂಟೀನಾದಲ್ಲಿ ನಡೆಯಲಿರುವ ಬ್ಯುನಸ್ ಐರಿಸ್ ಮೋಟಾರು ಶೋದಲ್ಲಿ ನೂತನ ಪಿಕಪ್ ಟ್ರಕ್ ಪಾದಾರ್ಪಣೆಗೈಯಲಿದೆ. ಪ್ರಸ್ತುತ ಪಿಕಪ್ ನಲ್ಲಿ ಎರಡು ಕ್ಯಾಬಿನ್ ಗಳಿರಲಿದೆ. ಪ್ರಸ್ತುತ ವಾಹನವನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಸ್ಪೋರ್ಟ್ ಯುಟಿಲಿಟಿ ಪಿಕಪ್ ಎಂದು ವಿಶ್ಲೇಷಿಸುತ್ತದೆ.

ರೆನೊ ಪಿಕಪ್

ಅದೇ ಹೊತ್ತಿಗೆ ನೂತನ ಪಿಕಪ್ ಟ್ರಕ್ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಬಹುತೇಕ ಇದು ಓರುಚ್ (Oroch) ಎಂದು ಕರೆಯಲ್ಪಡುವ ಸಾಧ್ಯತೆಯಿದೆ. ಆದರೆ ಭಾರತಕ್ಕೆ ಯಾವಾಗ ಪ್ರವೇಶವಾಗಲಿದೆ ಎಂಬುದಕ್ಕೆ ಈಗಲೂ ಸ್ಪಷ್ಟನೆಯಿಲ್ಲ.
ರೆನೊ ಪಿಕಪ್

ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿದ್ದು, 1.6 ಹಾಗೂ 2.0 ಲೀಟರ್ ಎಂಜಿನ್ ಲಭ್ಯವಾಗಲಿದೆ. ಅಂತೆಯೇ ಆಲ್ ವೀಲ್ ಡ್ರೈವ್ ಅಥವಾ ರಿಯರ್ ವೀಲ್ ಡ್ರೈವ್ ಸೇವೆಯಿರಲಿದೆ.
ರೆನೊ ಪಿಕಪ್

ಒಟ್ಟಾರೆಯಾಗಿ ಪ್ರಯಾಣಿಕ ಜೊತೆಗೆ ವಾಣಿಜ್ಯ ಅಗತ್ಯಗಳನ್ನು ರೆನೊ ಪಿಕಪ್ ಪೂರೈಸಲಿದೆ. ಇದರಲ್ಲಿ ಐದು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

More from DriveSpark

Article Published On: Wednesday, June 10, 2015, 17:09 [IST]
English summary
Renault had previously showcased its Duster compact SUV in several avatars. Most popular among them was the Oroch concept, which took form as a pickup vehicle.
Read more on ಪಿಕಪ್ pickup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+