5 ಜನಪ್ರಿಯ ಮಾದರಿಗಳಿಗೆ ಮಹೀಂದ್ರ ಮಾನ್ಸೂನ್ ಆಫರ್
ಉಪಯುಕ್ತ ವಾಹನಗಳ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಗೆ ಗ್ರಾಸವಾಗಿರುವ ದೇಶದ ನಂ.1 ಎಸ್ ಯುವಿ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಈ ಮಳೆಗಾಲದಲ್ಲಿ ಕಾರು ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 'ಮೈಟಿ ಮಾನ್ಸೂನ್ ಆಫರ್ 2016' ಘೋಷಿಸಿದೆ.
ಮಹೀಂದ್ರದ ಐದು ಜನಪ್ರಿಯ ಮಾದರಿಗಳಿಗೆ ಮಾನ್ಸೂನ್ ಆಫರ್ ಗಳು ಅನ್ವಯವಾಗಲಿದೆ. ಈ ಆಫರ್ 2016 ಜುಲೈ 31 ವರೆಗೆ ಮಾತ್ರ ಲಭ್ಯವಾಗಲಿದ್ದು, ಗ್ರಾಹಕರು ಆದಷ್ಟು ಬೇಗನೇ ತಮ್ಮ ಹತ್ತಿರದ ಮಹೀಂದ್ರ ಡೀಲರುಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಮಹೀಂದ್ರದ ಐದು ಜನಪ್ರಿಯ ಕಾರುಗಳಿಗೆ 22,000 ರು.ಗಳಿಂದ ಹಿಡಿದು ಗರಿಷ್ಠ 57,000 ರು.ಗಳ ವರೆಗೆ ಆಫರ್ ನೀಡಲಾಗುತ್ತಿದೆ.

ನ್ಯೂ ಏಜ್ ಎಕ್ಸ್‌ಯುವಿ500
ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟ ಸಾಧಿಸುತ್ತಿರುವ ಮಹೀಂದ್ರ ನ್ಯೂ ಏಜ್ ಎಕ್ಸ್ ಯುವಿ500 ಖರೀದಿ ವೇಳೆಯಲ್ಲಿ ಗರಿಷ್ಠ 22,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.
ಬೆಲೆ ಮಾಹಿತಿ: 11.29 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಹೀಂದ್ರ ಕೆಯುವಿ100
ಮಹೀಂದ್ರದಿಂದ ದೇಶಕ್ಕೆ ಪರಿಚಯವಾಗಿರುವ ಅತಿ ನೂತನ ಕಾರುಗಳಲ್ಲಿ ಕೆಯುವಿ100 ಕಾರು ಸಹ ಒಂದಾಗಿದೆ. ಎಸ್ ಯುವಿ ಶೈಲಿಯ ಕೆಯುವಿ100 ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 32,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.
ಬೆಲೆ ಮಾಹಿತಿ: 4.42 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನ್ಯೂ ಜನರೇಷನ್ ಸ್ಕಾರ್ಪಿಯೊ
ಕಳೆದ ಹಲವಾರು ವರ್ಷಗಳಿಂದ ಅತಿ ಹೆಚ್ಚು ಜನ ಮೆಚ್ಚುಗೆಗೆ ಪಾತ್ರವಾಗಿರುವ ಸ್ಕಾರ್ಪಿಯೊ ಖರೀದಿ ವೇಳೆಯಲ್ಲಿ ಗರಿಷ್ಠ 35,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.
ಬೆಲೆ ಮಾಹಿತಿ: 8.82 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನುವೊಸ್ಪೋರ್ಟ್
ಮಹೀಂದ್ರ ಕ್ವಾಂಟೊ ಪರಿಷ್ಕೃತ ಮಾದರಿಯಾಗಿರುವ ನುವೊಸ್ಪೋರ್ಟ್ ಕೆಲವು ಸಮಯಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿತ್ತು. ಈಗ ನುವೊಸ್ಪೋರ್ಟ್ ಖರೀದಿ ವೇಳೆಯಲ್ಲಿ 57,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಟಿಯುವಿ300
ಮಹೀಂದ್ರದಿಂದ ಬಿಡುಗಡೆಯಾಗಿರುವ ನೂತನ ಮಾದರಿಗಳಲ್ಲಿ ಟಿಯುವಿ300 ಸಹ ಒಂದಾಗಿದೆ. ಅಚ್ಚರಿಯೆಂಬಂತೆ ಟಿಯುವಿ300 ಖರೀದಿ ವೇಳೆಯಲ್ಲಿ 57,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.


Click it and Unblock the Notifications








