ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

By Nagaraja

ಉಪಯುಕ್ತ ವಾಹನಗಳ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಟಿವಿಯು300 ಕಾರಿನ ಹೆಚ್ಚು ಶಕ್ತಿಶಾಲಿ ಟಿಯುವಿ300 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 8.87 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

ಎಲ್ಲ ನೂತನ ಎಂಹಾಕ್100 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಮಹೀಂದ್ರ ಟಿಯುವಿ300, ಗರಿಷ್ಠ 100 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಎಂಜಿನ್ ಆಯ್ಕೆಯು ಟಾಪ್ ಎಂಡ್ ವೆರಿಯಂಟ್ ಗಳಾದ ಟಿ8 ಮತ್ತು ಟಿ8 ಎಎಂಟಿ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

ಎಂಹಾಕ್100 ಎಂಜಿನ್ ಗಳನ್ನು ಹೊಂದಿರುವ ಮಹೀಂದ್ರ ಟಿಯುವಿ300 ಕಾರಿನ ಟಿ8 ಮತ್ತು ಟಿ8 ಎಎಂಟಿ ಮಾದರಿಗಳು ಅನುಕ್ರಮವಾಗಿ 8.87 ಮತ್ತು 9.60 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

ನೂತನ ಎಂಹಾಕ್100 ಎಂಜಿನ್ 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಫೈವ್ ಸ್ಪೀಡ್ ಗೇರ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಪಡೆಯಲಿದೆ.

ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

ಇದುವರೆಗೆ ಮಹೀಂದ್ರ ಟಿಯುವಿ300ನಲ್ಲಿ 1.5 ಲೀಟರ್ ತ್ರಿ ಸಿಲಿಂಡರ್ ಎಂಹಾಕ್80 ಡೀಸೆಲ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿತ್ತು. ಇದು ಟಿ4, ಟಿ6 ಮತ್ತು ಟಿ8 ವೆರಿಯಂಟ್ ಗಳಲ್ಲಿ ಲಭ್ಯವಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್ ಬಾಕ್ಸ್ ಲಭ್ಯವಾಗುತ್ತಿತ್ತು.

ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

ದಣಿವು ರಹಿತ ಚಾಲನಾ ಅನುಭವ ನೀಡಲಿರುವ ನೂತನ ಮಹೀಂದ್ರ ಟಿಯುವಿ300, ಹೆಚ್ಚು ಸಲಿಸಾದ ಆಟೋಮ್ಯಾಟಿಕ್ ಗೇರ್ ಶಿಫ್ಟ್ ವ್ಯವಸ್ಥೆಗಳನ್ನು ಪಡೆಯಲಿದೆ.

ದೇಶದಲ್ಲಿ ಮಹೀಂದ್ರ ಟಿಯುವಿ300 ಶಕ್ತಿಶಾಲಿ ಆವೃತ್ತಿ ಬಿಡುಗಡೆ

ಇವುಗಳ ಹೊರತಾಗಿ ಸುಧಾರಿತ ಕುಷನ್ ಸೀಟುಗಳು, ಎರಡನೇ ಸಾಲಿನಲ್ಲಿ ಚೈಲ್ಡ್ ಸೇಫ್ಟಿ ಸೀಟು ಮೌಂಟ್ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಗ್ರಾಹಕರ ಬೇಡಿಕೆಯಂತೆ ಇನ್ನು ಮುಂದೆ ಟಿಯುವಿ300 ಎಂಹಾಕ್100 ಮತ್ತು ಎಂಹಾಕ್80 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಎಂಟ್ರಿ ಲೆವೆಲ್ ವೆರಿಯಂಟ್ 7.26 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

More from DriveSpark

Article Published On: Friday, May 13, 2016, 10:21 [IST]
English summary
Mahindra TUV300 Gets mHAWK100 Engine With Optional AMT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+