ಮಹೀಂದ್ರ ಟಿಯುವಿ300 ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ನೂತನ ಕಂಚಿನ ಹಸಿರು ಬಣ್ಣದೊಂದಿಗೆ ಟಿಯುವಿ300 ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಭಾರತೀಯ ವಾಹನ ಪ್ರೇಮಿಗಳಿಗೆ ಮಹೀಂದ್ರ ಕೊಡುಗೆಯನ್ನು ನೀಡಿದೆ. ಇದನ್ನು ಬೇಡಿಕೆಯ ಆಧಾರದ ಮೇಲೆ ಮಾರುಕಟ್ಟೆಗೆ ತಲುಪಿಸಲಾಗುವುದು ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ.

ಈ ಎಕ್ಸ್ ಕ್ಲೂಸಿವ್ ಕಂಚಿನ ಹಸಿರು ಬಣ್ಣದ ಕಾರಿಗಾಗಿ ಹೆಚ್ಚು ಬೆಲೆ ಪಾವತಿಸಬೇಕಾದ ಅಗತ್ಯವಿಲ್ಲ. ಇದು ಇತರೆ ಆವೃತ್ತಿಗಳಂತೆ ಸ್ಟ್ಯಾಂಡರ್ಡ್ ಬೆಲೆಗಳಲ್ಲಿ ದೇಶದೆಲ್ಲ ಮಹೀಂದ್ರ ಲಭ್ಯವಾಗಲಿದೆ.

ಇದರಲ್ಲಿರುವ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಲಭ್ಯವಿರುತ್ತದೆ.

ಈ ನಡುವೆ ಮಗದೊಂದು ಶಕ್ತಿಶಾಲಿ ಎಂಹಾಕ್100 ಎಂಜಿನ್ ಪರಿಚಯಿಸಲಾಗಿತ್ತು. ಇದು 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದು ಸಹ ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಲಭ್ಯವಿರುತ್ತದೆ.

ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಿತಗೊಂಡಿರುವ ಚಕನ್ ಘಟಕದಲ್ಲಿ ಏಳು ಸೀಟು ಆಸನ ವ್ಯವಸ್ಥೆಯ ಟಿಯುವಿ300 ನಿರ್ಮಾಣವಾಗಲಿದೆ. ಅಲ್ಲದೆ 18.49 ಕೀ.ಮೀ. ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಅಂದ ಹಾಗೆ ಮಹೀಂದ್ರ ಟಿಯುವಿ300 ವೆರ್ವ್ ಬ್ಲೂ, ಗ್ಲೇಸಿಯರ್ ವೈಟ್, ಡೈನಮೊ ರೆಡ್, ಮೆಜೆಸ್ಟಿಕ್ ಸಿಲ್ವರ್, ಬೋಲ್ಡ್ ಬ್ಲ್ಯಾಕ್, ಮೋಲ್ಟನ್ ಓರೆಂಜ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಬಿಡುಗಡೆ ವೇಳೆಗೆ ವಿಶಿಷ್ಟ ಕೊಂಬಾಟ್ ಬ್ಯಾಟಲ್ ಗ್ರೀನ್ ಬಣ್ಣದ ಆಯ್ಕೆಯನ್ನು ನೀಡಲಾಗಿತ್ತು.

ಸುರಕ್ಷತೆ
ಎಬಿಎಸ್,
ಇಬಿಡಿ,
ಸಿಬಿಸಿ,
ಏರ್ ಬ್ಯಾಗ್


Click it and Unblock the Notifications








