ಮಾರುತಿ ವಿಟಾರಾ ಬ್ರಿಝಾ; ಬೊಂಬಾಟ್ ಬುಕ್ಕಿಂಗ್ಸ್

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಇತ್ತೀಚೆಗಷ್ಟೇ ಅತಿ ನೂತನ ವಿಟಾರಾ ಬ್ರಿಝಾ ಕಾರನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ವಿಟಾರಾ ಬ್ರಿಝಾ 20,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿಕೊಂಡಿದೆ.

Also Read: ಕಾಯುವಿಕೆ ಅಂತ್ಯ; ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

2016 ಮಾರ್ಚ್ 08ರಂದು ಬಿಡುಗಡೆಯಾದ ಎರಡು ದಿನಗಳಲ್ಲೇ 5,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿಕೊಂಡಿರುವ ವಿಟಾರಾ ಬ್ರಿಝಾ, ಇದೇ ಆವೇಗವನ್ನು ಕಾಪಾಡಿಕೊಂಡಿದೆ. ಅಂದ ಹಾಗೆ ಈ ಬಹುನಿರೀಕ್ಷಿತ ಕಾರಿನ ವಿತರಣೆಯು ಮಾರ್ಚ್ 25ರಿಂದ ಆರಂಭವಾಗಲಿದೆ.

ಸ್ಪರ್ಧಾತ್ಮಕ ಬೆಲೆ

ಸ್ಪರ್ಧಾತ್ಮಕ ಬೆಲೆ

ಸ್ಪರ್ಧಾತ್ಮಕ ಮಾರುಕಟ್ಟೆಗೆ ಅನುಗುಣವಾಗಿ ಆಕ್ರಮಣಕಾರಿ ಬೆಲೆಗಳಲ್ಲಿ ವಿಟಾರಾ ಬ್ರಿಝಾ ಕಾರನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 7.17 ಲಕ್ಷ ರು.ಗಳಿಂದ 9.95 ಲಕ್ಷ ರು.ಗಳಷ್ಟಿದೆ.

ಸದ್ಯಕ್ಕೆ ಡೀಸೆಲ್ ಎಂಜಿನ್

ಸದ್ಯಕ್ಕೆ ಡೀಸೆಲ್ ಎಂಜಿನ್

ಮಾರುತಿ ವಿಟಾರಾ ಬ್ರಿಝಾದಲ್ಲಿರುವ ಡಿಡಿಐಎಸ್ 200 ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು ಐದು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಮೈಲೇಜ್ ಎಫೆಕ್ಟ್

ಮೈಲೇಜ್ ಎಫೆಕ್ಟ್

ಈ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿರುವುದು ವಿಟಾರಾ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿಗೆ ವರದಾನವಾಗಿ ಪರಿಣಮಿಸಿದೆ.

ಗಮನಾರ್ಹ ಅಂಶಗಳು

ಗಮನಾರ್ಹ ಅಂಶಗಳು

  • ಡ್ಯುಯಲ್ ಕಲರ್ ಸ್ಕೀಮ್,
  • ಫ್ಲೋಟಿಂಗ್ ರೂಫ್,
  • ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ರಿಯರ್ ಕಾಂಬಿನೇಷನ್ ಲ್ಯಾಂಪ್,
  • ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಆಟೋ ಆನ್/ಆಫ್,
  • ಫ್ರಂಟ್ ಬಂಪರ್ ನಲ್ಲಿ ವಿಶಿಷ್ಟ ಟರ್ನ್ ಇಂಡಿಕೇಟರ್,
  • ದೊಡ್ಡದಾದ ಚಕ್ರಗಳು,
  • ಕ್ರೂಸ್ ಕಂಟ್ರೋಲ್,
  • ಗೇರ್ ಶಿಫ್ಟ್ ಇಂಡಿಕೇಟರ್
  • ಗಮನಾರ್ಹ ಅಂಶಗಳು

    ಗಮನಾರ್ಹ ಅಂಶಗಳು

    • ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ,
    • ಸ್ಪೀಡೋಮೀಟರ್ ನಲ್ಲಿ ಐದು ಬಣ್ಣಗಳ ಆಯ್ಕೆಗಳು,
    • ಇನ್ ಬಿಲ್ಟ್ ನೇವಿಗೇಷನ್ ಜೊತೆ ಮ್ಯಾಪ್ ಕೇರ್,
    • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
    • ಚಾಲಕನಿಗೆ ಆರ್ಮ್ ರೆಸ್ಟ್ ಜೊತೆ ಸ್ಟೋರೆಜ್,
    • ರೂಫ್ ಲೈನಿಂಗ್ ಜೊತೆ ಪ್ರೀಮಿಯಂ ಫ್ಯಾಬ್ರಿಕ್,
    • ವೈಯಕ್ತಿಕ ಪ್ಯಾಕೇಜ್ (ಗ್ಲಾಮರ್, ಅರ್ಬನ್, ಸ್ಪೋರ್ಟಿ)
    • ಸುರಕ್ಷತೆ

      ಸುರಕ್ಷತೆ

      • ಚಾಲಕ ಬದಿಯ ಏರ್ ಬ್ಯಾಗ್ (ಸ್ಟಾಂಡರ್ಡ್),
      • ಮುಂಭಾಗ ಪ್ರಯಾಣಿಕರಿಗೆ ಏರ್ ಬ್ಯಾಗ್ ಮತ್ತು ಎಬಿಎಸ್ ಜೊತೆ ಇಬಿಡಿ (ಐಚ್ಛಿಕ),
      • ಸೈಡ್ ಇಂಪಾಕ್ಟ್ ಕ್ರಾಶ್ ಟೆಸ್ಟ್ ಮಾನ್ಯತೆ ಪಡೆದ ಕಾರು,
      • ಶಕ್ತಿಯುತ ಸ್ಟೀಲ್ ದೇಹ ರಚನೆ,
      • ಅತ್ಯುತ್ತಮ ಹ್ಯಾಂಡ್ಲಿಂಗ್ ಗಾಗಿ ಮೊನೊಕಾಕ್ ಸಂರಚನೆ,
      • ಪ್ರಯಾಣಿಕರ ಸುರಕ್ಷತೆಗಾಗಿ ಸುಜುಕಿ ಟೆಕ್ಟ್ (Total Effective Control Technology) ತಂತ್ರಗಾರಿಕೆ
      • ಆಯಾಮ (ಎಂಎಂ)

        ಆಯಾಮ (ಎಂಎಂ)

        ಉದ್ದ: 3995

        ಅಗಲ: 1790

        ಎತ್ತರ: 1640

        ಚಕ್ರಾಂತರ: 2500

        ಢಿಕ್ಕಿ ಜಾಗ: 328 ಲೀಟರ್

        ಗ್ರೌಂಡ್ ಕ್ಲಿಯರನ್ಸ್: 198

        ಪ್ರತಿಸ್ಪರ್ಧಿಗಳು

        ಪ್ರತಿಸ್ಪರ್ಧಿಗಳು

        ಫೋರ್ಡ್ ಇಕೊಸ್ಪೋರ್ಟ್,

        ರೆನೊ ಡಸ್ಟರ್,

        ಹ್ಯುಂಡೈ ಕ್ರೆಟಾ

Article Published On: Wednesday, March 23, 2016, 11:29 [IST]
English summary
Maruti Vitara Brezza Bookings Cross 20,000; Deliveries Start March 25
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+