ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

By Nagaraja

2015ನೇ ಸಾಲಿನಲ್ಲಿ 15 ಮಾದರಿಗಳನ್ನು ಬಿಡುಗಡೆ ಮಾಡಿರುವ ಜರ್ಮನಿಯ ಮೂಲದ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ 2016ರಲ್ಲೂ ಇದೇ ನೀತಿಯನ್ನು ಮುಂದುವರಿಸಿದ್ದು, ವರ್ಷಾರಂಭದಲ್ಲಿ ವಾಹನ ಪ್ರೇಮಿಗಳಿಗೆ ಹೊಸತಾದ ಕೊಡುಗೆಯನ್ನು ನೀಡಿದೆ.

ಭಾರತೀಯ ಮಾರುಕಟ್ಟೆಗೆ ಶಕ್ತಿಶಾಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಕಾರಿನ ಪ್ರವೇಶವಾಗಿದ್ದು, ಮುಂಬೈ ಎಕ್ಸ್ ಶೋ ರೂಂ 86.4 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

ಭಾರತದಲ್ಲಿ ಪ್ರಮುಖವಾಗಿಯೂ ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಕಾರು ಬಿಎಂಡಬ್ಲ್ಯು ಎಕ್ಸ್6 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

3.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ 520 ಎನ್‌ಎಂ ತಿರುಗುಬಲದಲ್ಲಿ 362 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

ಅಂತೆಯೇ ಎಲ್ಲ ನಾಲ್ಕು ಚಕ್ರಗಳಿಗೆ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮುಖಾಂತರ ಶಕ್ತಿ ರವಾನೆಯಾಗಲಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

ಕೇವಲ 5.7 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುವ ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಗಂಟೆಗೆ ಗರಿಷ್ಟ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

ಇನ್ನುಳಿದಂತೆ ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಕಾರಿನಲ್ಲಿ 21 ಇಂಚುಗಳ ಎಎಂಜಿ ಚಕ್ರ, ಲೆಥರ್ ಒಳಮೈ, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, 360 ಡಿಗ್ರಿಯಲ್ಲಿ ವೀಕ್ಷಣೆ ಕ್ಯಾಮೆರಾ ಸಿಸ್ಟಂ, ಪಾರ್ಕಿಂಗ್ ಸಹಾಯಿ, ಪ್ಯಾನರಾಮಿಕ್ ಸನ್ ರೂಫ್, 5 ಚಾಲನಾ ವಿಧಗಳು, ತಾಪಮಾನ ನಿಯಂತ್ರಿತ ಕಪ್ ಹೋಲ್ಡರ್ ಮತ್ತು ಎಲ್‌ಇಡಿ ಬೆಳಕಿನ ಸೇವೆಯಿರಲಿದೆ.

ಶಕ್ತಿಶಾಲಿ ಬೆಂಝ್ ಜಿಎಲ್‌ಇ 450 ಎಎಂಜಿ ಕೂಪೆ ಬಿಡುಗಡೆ

ಅಂದ ಹಾಗೆ ಪ್ರಸಕ್ತ ಸಾಲಿನಲ್ಲಿ ಬೆಂಝ್ ಸಂಸ್ಥೆಯು 12 ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಬೆಂಝ್‌ನ ಈ ಜೈತ್ರಯಾತ್ರೆಯು ಜಿಎಲ್‌ಇ 450 ಎಎಂಜಿ ಕೂಪೆ ಮೂಲಕ ಆರಂಭವಾಗಿದೆ.

Article Published On: Tuesday, January 12, 2016, 15:10 [IST]
English summary
Mercedes-Benz Launch GLE 450 AMG Coupe In India For Rs. 86.4 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+