ಭಾರತ ಪ್ರವೇಶಿಸಿದ ಕೋಟಿ ಬೆಲೆಬಾಳುವ ಬೆಂಝ್ ಎಸ್400
ಜರ್ಮನಿ ಮೂಲದ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಅತಿ ನೂತನ ಎಸ್400 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಎಸ್ ಕ್ಲಾಸ್ ಶ್ರೇಣಿಯ ಒಂಬತ್ತನೇ ಕಾರಾಗಿದೆ.
ಮುಖ್ಯಾಂಶಗಳು
- ಸ್ಥಳೀಯವಾಗಿ ನಿರ್ಮಾಣಕ್ಕೆ ಚಾಲನೆ,
- ವಿಶ್ವದ ಅತ್ಯುತ್ತಮ ಕಾರಿನ ಹೊಸ ಅವತಾರ
ನೂತನ ಮರ್ಸಿಡಿಸ್ ಬೆಂಝ್ ಎಸ್400 ಹೈದರಾಬಾದ್ ಎಕ್ಸ್ ಶೋ ರೂಂ ಬೆಲೆ 1.31 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಎಂಜಿನ್
ನೂತನ ಮರ್ಸಿಡಿಸ್ ಬೆಂಝ್ ಎಸ್400 ಕಾರಿನಲ್ಲಿರುವ 3 ಲೀಟರ್ ವಿ6 ಪೆಟ್ರೋಲ್ ಎಂಜಿನ್ 480 ಎನ್ ಎಂ ತಿರುಗುಬಲದಲ್ಲಿ 333 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 7ಜಿ ಟ್ರಾನಿಕ್ ಪ್ಲಸ್ ಗೇರ್ ಬಾಕ್ಸ್ ಪಡೆಯಲಿದೆ.

ಅನುಕೂಲತೆ ಮತ್ತು ಭದ್ರತೆ
ನೂತನ ಬೆಂಝ್ ಎಸ್400 ಮುಂದುವರಿದ ಏರ್ ಮ್ಯಾಟಿಕ್ ಸಸ್ಪೆನ್ಷನ್ ಪಡೆದಿದ್ದು, ನಯವಾದ ಚಾಲನಾ ಗುಣಮಟ್ಟತೆಯನ್ನು ಕಾಪಾಡಿಕೊಳ್ಳಲಿದೆ. ಇನ್ನುಳಿದಂತೆ ಇಎಸ್‌ಪಿ, 8 ಏರ್ ಬ್ಯಾಗ್, ಪ್ರಿ ಸೇಫ್, ಬ್ರೇಕ್ ಅಸಿಸ್ಟ್, ಅಡಾಪ್ಟಿವ್ ಬ್ರೇಕ್ ಜೊತೆ ಹೋಲ್ಡ್ ಫಂಕ್ಷನ್, ಎಎಸ್ ಆರ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮುಂತಾದ ಭದ್ರತಾ ವೈಶಿಷ್ಟ್ಯಗಳನ್ನು ಪಡೆದಿದೆ.

ಮೇಕ್ ಇನ್ ಇಂಡಿಯಾ
ನೂತನ ಎಸ್400 ಕಾರಿನ ನಿರ್ಮಾಣವು ಪುಣೆಯಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಘಟಕದಲ್ಲಿ ನೆರವೇರಲಿದೆ. ಈ ಮೂಲಕ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೂ ಮರ್ಸಿಡಿಸ್ ಬೆಂಝ್ ಸಾಥ್ ನೀಡಲಿದೆ.

ಹೊರಮೈ
ಹೊರಮೈಯಲ್ಲಿ ಅತ್ಯಾಕರ್ಷಕ ವಿನ್ಯಾಸವನ್ನು ಅನುಸರಿಸಲಾಗಿದ್ದು, ದೊಡ್ಡದಾದ ಗ್ರಿಲ್, ಕ್ರೋಮ್ ಸ್ಪರ್ಶ, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ಅಂದವಾದ ಸನ್ ರೂಫ್ ವ್ಯವಸ್ಥೆಯಿರಲಿದೆ.

ಒಳಮೈ
ಕಾರಿನೊಳಗೆ ಕ್ಲಾಸಿಕ್, ಉನ್ನತ ಮಟ್ಟದ ಕಟ್ಟಿಂಗ್ ಎಡ್ಜ್ ಸೆಡಾನ್ ಕಾರಿನ ತಂತ್ರಗಾರಿಕೆಯನ್ನು ಕಾಣಬಹುದಾಗಿದೆ. ಅಂತೆಯೇ ಸೆಂಟರ್ ಕನ್ಸಾಲ್, ಸೀಟು, ಡೋರ್ ಪ್ಯಾನೆಲ್ ಲೆಥರ್ ಹೋದಿಕೆ ಮತ್ತು ಆಧುನಿಕ ಶೈಲಿಯ ಡ್ಯಾಶ್ ಬೋರ್ಡ್ ಕಾಣಬಹುದಾಗಿದೆ.

ಬರ್ಮಸ್ಟರ್ ತ್ರಿಡಿ ಸೌರಂಡ್ ಸಸ್ಟಂ
ವಿಶ್ವ ದರ್ಜೆಯ ಬರ್ಮಸ್ಟರ್ ತ್ರಿಡಿ ಸೌರಂಡ್ ಸೌಂಡ್ ಸಿಸ್ಟಂ ಜೊತೆ 24 ಗರಿಷ್ಠ ನಿರ್ವಹಣೆಯ ಸ್ಪೀಕರ್ ಗಳು ಇದರಲ್ಲಿದೆ. ಇದು ಒಟ್ಟಾರೆಯಾಗಿ 1520 ವ್ಯಾಟ್ ಶಬ್ದವನ್ನು ಹೊರ ಬೀರಲಿದೆ.

ಬೆಳಕು, ಏಳು ಬಣ್ಣಗಳು, 5 ಡಿಮ್ಮಿಂಗ್ ವಿಧ
ಸೊಗಸಾದ ಬೆಳಕಿನ ಸೇವೆ, ಏಳು ಅತ್ಯಾಕರ್ಷಕ ಬಣ್ಣಗಳ ಜೊತೆಗೆ ಐದು ವಿಧಗಳ ಡಿಮ್ಮಿಂಗ್ ವ್ಯವಸ್ಥೆಯನ್ನು ಇದು ಪಡೆದಿದೆ.

ಅನುಕೂಲತೆ
ಇವೆಲ್ಲದರ ಜೊತೆಗೆ ವೈಯಕ್ತಿಕ ಮನರಂಜನಾ ವ್ಯವಸ್ಥೆ, ಕಮಾಂಡ್ ಆನ್ ಲೈನ್ ನ್ಯೂ ಜನರೇಷನ್ ಟೆಲಿಮ್ಯಾಟಿಕ್ಸ್ 5 (ಎನ್‌ಟಿಜಿ5), ತ್ರಿಡಿ ಎಫೆಕ್ಟ್, ಎಚ್‌ಡಿಡಿ, ವ್ಲ್ಯಾನ್ ಹಾಟ್ ಸ್ಪಾಟ್, ಫೋನ್ ಕಾಂಟೆಕ್ಟ್ ರೀಡರ್, ರೆಡಿಯೋ ಮತ್ತು ನೇವಿಗೇಷನ್ ವ್ಯವಸ್ಥೆಯೂ ಇರುತ್ತದೆ.

ಮಸ್ಸಾಜ್ ಸೀಟು
ಮಗದೊಂದು ಗನನಾರ್ಹ ವೈಶಿಷ್ಟ್ಯವೆಂದರೆ ನೂತನ ಎಸ್400 ಕಾರು ಮಸ್ಸಾಜ್ ಸೀಟುಗಳ ವ್ಯವಸ್ಥೆಯೊಂದಿಗೂ ಆಗಮನವಾಗಿದೆ.

360 ಡಿಗ್ರಿ ಕ್ಯಾಮೆರಾ
ಕೊನೆಯದಾಗಿ ಇದರಲ್ಲಿರುವ ಕೊಟ್ಟಿರುವ 360 ಡಿಗ್ರಿ ಸುತ್ತಳತೆಯ ಕ್ಯಾಮೆರಾದ ನೆರವಿನಿಂದ ಸುಲಭವಾಗಿ ಪಾರ್ಕಿಂಗ್ ಮಾಡಲು ಮತ್ತು ಕಳ್ಳತನದ ಭೀತಿಯಿಂದ ಪಾರಾಗಬಹುದಾಗಿದೆ.


Click it and Unblock the Notifications