ವರ್ಷದ 12ನೇ ಲಾಂಚ್; ಬೆಂಝ್ ಪರಿಷ್ಕೃತ ಸಿಎಲ್‌ಇ ಕಾರು ಮಾರುಕಟ್ಟೆಗೆ
ಮರ್ಸಿಡಿಸ್ ಬೆಂಝ್ ಸಿಎಲ್‌ಎ
ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್, ಪರಿಷ್ಕೃತ ಸಿಎಲ್‌ಎ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಪ್ರಸಕ್ತ ಸಾಲಿನಲ್ಲಿ ಬೆಂಝ್ ಬಿಡುಗಡೆ ಮಾಡುತ್ತಿರುವ 12ನೇ ಕಾರಾಗಿದೆ. ಇದರೊಂದಿಗೆ ದೇಶದಲ್ಲಿ ಆಕ್ರಮಣಕಾರಿ ನಿಲುವನ್ನು ಮುಂದುವರಿಸಿದೆ.

ಅತಿ ನೂತನ ಮರ್ಸಿಡಿಸ್ ಬೆಂಝ್ ಸಿಎಲ್‌ಎ ಫೇಸ್ ಲಿಫ್ಟ್ ಮಾದರಿಯು ಭಾರತದಲ್ಲಿ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 31.40 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಸಿಎಲ್‍ಎ 200 ಡಿ ಸ್ಟೈಲ್: 31.40 ಲಕ್ಷ ರು.
ಸಿಎಲ್‍ಎ 200 ಡಿ ಸ್ಪೋರ್ಟ್: 34.68 ಲಕ್ಷ ರು.
ಸಿಎಲ್‍ಎ 200 ಸ್ಪೋರ್ಟ್: 33.68 ಲಕ್ಷ ರು.

ನೂತನ ಮರ್ಸಿಡಿಸ್ ಬೆಂಝ್ ಸಿಎಲ್‌ಎ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಈ ಪೈಕಿ ಪೆಟ್ರೋಲ್ 200 ಪೆಟ್ರೋಲ್ ಮತ್ತು ಡೀಸೆಲ್ 200 ಡಿ ಮಾದರಿಗಳು ಅನುಕ್ರಮವಾಗಿ 33.68 ಮತ್ತು 34.68 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಕಾರಿನ ಹೊರಮೈಯಲ್ಲಿ ಸಂಪೂರ್ಣ ಎಲ್ ಇಡಿ ಜೊತೆಗೆ ನವೀಕೃತ ಹೆಡ್ ಲ್ಯಾಂಪ್ ಜೋಡಣೆಯಾಗಿದೆ. ಡೇಟೈಮ್ ರನ್ನಿಂಗ್ ಲೈಟ್ಸ್ ನಲ್ಲೂ ಬದಲಾವಣೆ ಕಂಡುಬಂದಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸಿಎಲ್ ಎ ಕ್ಲಾಸ್ ಗಿಂತಲೂ ವಿಭಿನ್ನವಾದ ಬಂಪರ್ ವ್ಯವಸ್ಥೆಯೂ ಭಾರತ ಮಾದರಿಯಲ್ಲಿರಲಿದೆ. ಅಡ್ಡ ರೇಖೆಯ ಕ್ರೋಮ್ ಸ್ಪರ್ಶವನ್ನು ಕೊಡಲಾಗಿದೆ. ಹಿಂದುಗಡೆಯೂ ಇದಕ್ಕೆ ಸಮಾನವಾದ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಅತ್ತ ಕಾರಿನ ಬದಿಯ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಇದು 17 ಇಂಚುಗಳ ಅಲಾಯ್ ಚಕ್ರಗಳನ್ನು ಗಿಟ್ಟಿಸಿಕೊಂಡಿದೆ.

ಕಾರಿನೊಳಗೆ ಏಳು ಇಂಚುಗಳ ಬದಲು ದೊಡ್ಡದಾದ ಎಂಟು ಇಂಚುಗಳ ಸ್ಕ್ರೀನ್ ಇರಲಿದೆ. ಇದು ಅತ್ಯುತ್ತಮ ಡಿಸ್ ಪ್ಲೇ ಪ್ರದಾನ ಮಾಡಲಿದೆ.

ನೂತನ ಸಿಎಲ್ ಎ ಕಾರು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ವ್ಯವಸ್ಥೆಯನ್ನು ಸ್ಟಾಂಡರ್ಡ್ ಆಗಿ ಗಿಟ್ಟಿಸಿಕೊಳ್ಳಲಿದ್ದು, ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಇಂಟೇಗ್ರೇಷನ್ ಜೊತೆಗೆ ಬ್ಲೂಟೂತ್ ಸೇವೆಯಿರಲಿದೆ.

ಪ್ರಸ್ತುತ ಇನ್ಪೋಟೈನ್ಮೆಂಟ್ ಸಿಸ್ಟಂ ಜಿಪಿಎಸ್ ನೇವಿಗೇಷನ್ ವ್ಯವಸ್ಥೆಯಿಂದಲೂ ಕೂಡಿರಲಿದೆ. ಇದು ಹೆಚ್ಚಿನ ಅನುಕೂಲತೆಯನ್ನು ಒದಗಿಸಲಿದೆ.

ತಾಂತ್ರಿಕತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಸಿಎಲ್ ಎ 200 ಪೆಟ್ರೋಲ್ ಮತ್ತು ಸಿಎಲ್ ಎ 200ಡಿ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ.

ಇದರ 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 300 ಎನ್ ಎಂ ತಿರುಗುಬಲದಲ್ಲಿ 181 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹಾಗೆಯೇ 2.2 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ 300 ಎನ್ ಎಂ ತಿರುಗುಬಲದಲ್ಲಿ 134 ಅಶ್ವಶಕ್ತಿಯನ್ನು ನೀಡಲಿದೆ.

ಇವೆರಡು ಎಂಜಿನ್ ಗಳು ಸೆವೆನ್ ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಫ್ರಂಟ್ ವೀಲ್ ಚಾಲನಾ ವ್ಯವಸ್ಥೆಯನ್ನು ಹೊಂದಿರಲಿದೆ. ಹಾಗಿದ್ದರೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 4 ಮ್ಯಾಟಿಕ್ ವ್ಯವಸ್ಥೆಯ ಕೊರತೆಯನ್ನು ಅನುಭವಿಸಲಿದೆ.

ಚಾಲನಾ ವಿಧಗಳು: ಇಕೊಸ ಕಂಫರ್ಟ್, ಸ್ಪೋರ್ಟ್ ಮತ್ತು ಇಂಡಿವಿಡ್ಯುಯಲ್

ವೇಗವರ್ಧನೆ
ಸಿಎಲ್ ಎ 200 ಸ್ಪೋರ್ಟ್:
7.1 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗವರ್ಧನೆ ಗಂಟೆಗೆ 240 ಕೀ.ಮೀ.

ಸಿಎಲ್ ಎ 200ಡಿ ಸ್ಪೋರ್ಟ್
9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗವರ್ಧನೆ ಗಂಟೆಗೆ 220 ಕೀ.ಮೀ.

ಭಾರತದಲ್ಲಿ ಪ್ರಮುಖವಾಗಿಯೂ ಆಡಿ ಎ3 ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು 1 ಸಿರೀಸ್ ಸೆಡಾನ್ ಕಾರುಗಳಿಗೆ ನೂತನ ಬೆಂಝ್ ಸಿಎಲ್ ಎ ಕಾರು ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಭಾರತವು ಯುರೋಪ್ ಹೊರಗಡೆ ನೂತನ ಬೆಂಝ್ ಸಿಎಲ್ ಎ ನಿರ್ಮಿಸುತ್ತಿರುವ ಏಕಮಾತ್ರ ರಾಷ್ಟ್ರವಾಗಿದೆ.


Click it and Unblock the Notifications








