ಭಾರತಕ್ಕೆ ಮರಳಿ ಬರುತ್ತಿದೆ ಐಕಾನಿಕ್ 'ಹೋಂಡಾ ಸಿವಿಕ್'

Written By:

ಚಪ್ಪೆಯಾಕಾರದಲ್ಲಿ ಉದ್ದ ಹಾಗೂ ಅಗಲವಾಗಿರುವ ಕ್ಲಾಸಿಕ್ ಹೋಂಡಾ ಸಿವಿಕ್ ಕಾರಿನ ಬಗ್ಗೆ ನಿಮಗೆ ತಿಳಿದೇ ಇದೆ. ಭಾರತದಲ್ಲಿ ಕಾರುಗಳು ಜನಪ್ರಿಯ ಸಾಧಿಸುತ್ತಿರುವ ಕಾಲಘಟ್ಟದಲ್ಲಿ ಕ್ರೀಡಾತ್ಮಕ ಶೈಲಿ ಹಾಗೂ ಗರಿಷ್ಠ ನಿರ್ವಹಣೆಯೊಂದಿಗೆ ಮುಂದೆ ಬಂದಿರುವ ಹೋಂಡಾ ಸಿವಿಕ್ ಭಾರಿ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿತ್ತು.

ಪ್ರಸ್ತುತ ಅತಿ ನೂತನ ಸಿವಿಕ್ ಸೆಡಾನ್ ಕಾರನ್ನು ದೇಶಕ್ಕೆ 2017ನೇ ಸಾಲಿನಲ್ಲಿ ಮರು ಪರಿಚಯಿಸುವ ಇರಾದೆಯನ್ನು ಜಪಾನ್ ಮೂಲದ ಹೋಂಡಾ ಸಂಸ್ಥೆಯು ಹೊಂದಿದೆ. ಈ ಸಂದರ್ಭದಲ್ಲಿ ಹೊಸ ಸಿವಿಕ್ ಕಾರಿನ ಬಗ್ಗೆ ನೀವು ಅರಿತುಕೊಳ್ಳಬೇಕಾದ ಕೆಲವೊಂದು ಗಮನಾರ್ಹ ಅಂಶಗಳನ್ನು ನಾವಿಲ್ಲಿ ಪಟ್ಟಿಕೊಡಲಿದ್ದೇವೆ.

ವಿನ್ಯಾಸ

ವಿನ್ಯಾಸ

ನೂತನ ಹೋಂಡಾ ಸಿವಿಕ್ ಕಾರಿನಲ್ಲಿ ನಯವಾಗಿಯೂ ನುಣುಪಾಗಿಯೂ ಹಾಗೂ ಹೊಳಪಗಾಗಿರುವ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಮುಂಭಾಗದಿಂದ ಹಿಡಿದು ಕಾರಿನೆಲ್ಲ ರಚನೆಯಲ್ಲೂ ಕ್ರೀಡಾತ್ಮಕ ವಿನ್ಯಾಸಕ್ಕೆ ಆಸ್ಪದ ಕೊಡಲಾಗಿದೆ. ಒಟ್ಟಾರೆಯಾಗಿ 10ನೇ ತಲೆಮಾರಿನ ಹೋಂಡಾ ಸಿವಿಕ್ ಕಾರು ಹೆಚ್ಚು ಕೂಪೆ ಶೈಲಿಯನ್ನು ಆವರಿಸಿಕೊಳ್ಳಲಿದೆ.

10ನೇ ತಲೆಮಾರಿನ ಸಿವಿಕ್

10ನೇ ತಲೆಮಾರಿನ ಸಿವಿಕ್

ಎಂಟನೇ ತಲೆಮಾರಿನ ಹೋಂಡಾ ಸಿವಿಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತಾದರೂ 2013ನೇ ಸಾಲಿನಲ್ಲಿ ಹಿಂದಕ್ಕೆ ಪಡೆಯಲಾಗಿತ್ತು. ಈಗ 10ನೇ ತಲೆಮಾರಿನ ಸಿವಿಕ್ ಕಾರು ಜಾಗತಿಕ ಮಾರುಕಟ್ಟೆಯನ್ನು ತಲುಪಿರುವಂತೆಯೇ ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಯಲ್ಲೂ ಮೋಡಿ ಮಾಡುವ ಇರಾದೆಯನ್ನು ಹೋಂಡಾ ಹೊಂದಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಹೋಂಡಾ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ 1.8 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 143 ಹಾಗೂ 120 ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ. ಇವೆಲ್ಲದರ ಜೊತೆಗೆ 175 ಅಶ್ವಶಕ್ತಿ ಉತ್ಪಾದಿಸಬಲ್ಲ ಹೆಚ್ಚು ಶಕ್ತಿಶಾಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆಯಾಗುವ ಸಾಧ್ಯತೆಯು ಇದೆ.

ಸುಧಾರಿತ ಚಾಸೀ

ಸುಧಾರಿತ ಚಾಸೀ

ನೂತನ ಸಿವಿಕ್ ಕಾರಿನಲ್ಲಿ ಅಲ್ಟ್ರಾ ಹೈ ಸ್ಟ್ರೆಂಗ್ತ್ ಸ್ಟೀಲ್ ಜೋಡಣೆ ಮಾಡಲಾಗುತ್ತಿದ್ದು, ಇದು ಹೆಚ್ಚು ಬಿಗಿತ ಹಾಗೂ ಹ್ಯಾಂಡ್ಲಿಂಗ್ ನೀಡುವುದರೊಂದಿಗೆ, ಗರಿಷ್ಠ ನಿರ್ವಹಣೆಯನ್ನು ಕಾಪಾಡಿಕೊಳ್ಳಲು ನೆರವಾಗಲಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ನೂತನ ಹೋಂಡಾ ಸಿವಿಕ್ ಪ್ರಮುಖವಾಗಿಯೂ ಟೊಯೊಟಾ ಕರೊಲ್ಲಾ, ಸ್ಕೋಡಾ ಒಕ್ಟಾವಿಯಾ, ಫೋಕ್ಸ್ ವ್ಯಾಗನ್ ಜೆಟ್ಟಾ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಹ್ಯುಂಡೈ ಎಲಂಟ್ರಾ ಮತ್ತು ಷೆವರ್ಲೆ ಕ್ರೂಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಅಂದಾಜು ಬೆಲೆ

ಅಂದಾಜು ಬೆಲೆ

ಅಂದ ಹಾಗೆ ಹೊಸ ತಲೆಮಾರಿನ ಹೋಂಡಾ ಸಿವಿಕ್ ದೇಶದಲ್ಲಿ 15 ಲಕ್ಷ ರು.ಗಳಿಂದ 18 ಲಕ್ಷ ರು.ಗಳಷ್ಟು ದುಬಾರಿಯೆನಿಸಿಕೊಳ್ಳುವ ಸಾಧ್ಯತೆಯಿದೆ.

English summary
Things You Need To Know About The Upcoming Honda Civic
Story first published: Monday, June 20, 2016, 17:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark