2016 ಟೊಯೊಟಾ ಎಟಿಯೋಸ್, ಎಟಿಯೋಸ್ ಲಿವಾ ಬಿಡುಗಡೆಗೆ ಸಿದ್ಧ
ಮತ್ತೆರಡು ಆಕರ್ಷಕ ಕಾರುಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು, 2016 ಟೊಯೊಟಾ ಎಟಿಯೋಸ್ ಹಾಗೂ ಎಟಿಯೋಸ್ ಲಿವಾ ಆವೃತ್ತಿಗಳು ಅತಿ ಶೀಘ್ರದಲ್ಲೇ ಬಿಡಗಡೆಯಾಗಲಿದೆ. ಬಲ್ಲ ಮೂಲಗಳ ಪ್ರಕಾರ ಲಿವಾ ಪರಿಷ್ಕೃತ ಆವೃತ್ತಿಗಳು 2016 ಸೆಪ್ಟೆಂಬರ್ 13ರಂದು ಬಿಡುಗಡೆಯಾಗಲಿದೆ.
ಪರಿಷ್ಕೃತ ಎಟಿಯೋಸ್ ಸೆಡಾನ್ ಹಾಗೂ ಎಟಿಯೋಸ್ ಲಿವಾ ಹ್ಯಾಚ್ ಬ್ಯಾಕ್ ಆವೃತ್ತಿಗಳು ಹಬ್ಬದ ಆವೃತ್ತಿಗೆ ಮೆರಗು ತುಂಬಲಿದೆ. ಇತ್ತೀಚೆಗಷ್ಟೇ ಇನ್ನೋವಾ ಕ್ರೈಸ್ಟಾ ಮಾದರಿಯನ್ನು ಬಿಡುಗಡೆ ಮಾಡಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯೀಗ ಎಟಿಯೋಸ್ ಪರಿಷ್ಕೃತ ಆವೃತ್ತಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಮುಂದುಗಡೆ ವಿ ಆಕಾರದ ಗ್ರಿಲ್, ಕ್ರೋಮ್ ಸ್ಪರ್ಶ, ಕ್ರೀಡಾತ್ಮತ ನೋಟದ ಬಂಪರ್, ದೊಡ್ಡದಾದ ಏರ್ ಇಂಟೇಕ್ ಗಳು, ವೃತ್ತಕಾರಾದ ಫಾಗ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಹಿಂದುಗಡೆಯೂ ಪರಿಷ್ಕೃತ ಕ್ರೋಮ್ ಪಟ್ಟಿ ಕಂಡುಬರಲಿದೆ. ಇನ್ನು ಕಾರಿನೊಳಗೆ ಟು ಟೋನ್ ಬ್ಲ್ಯಾಕ್ ಹಾಗೂ ಬೀಜ್ ಡ್ಯಾಶ್ ಬೋರ್ಡ್, ಫ್ಯಾಬ್ರಿಕ್ ಸೀಟುಗಳು ಮತ್ತು ಮಲ್ಟಿ ಸ್ಪೋಕ್ ಸ್ಟೀರಿಂಗ್ ವೀಲ್ ಗಳು ಕಾರಿನ ಅಂದತೆಯನ್ನು ಹೆಚ್ಚಿಸಲಿದೆ.

ಮಾಹಿತಿ ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್ ವ್ಯವಸ್ಥೆಗಳು ಲಭ್ಯವಾಗಲಿದೆ.

ಕಾರಿನಡಿಯಲ್ಲಿ ಈಗಿರುವ 14 ಇಂಚುಗಳ ಬದಲಾಗಿ 15 ಇಂಚುಗಳ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಇನ್ನು ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರಲಿದೆ.

ಅಂದ ಹಾಗೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದರಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ 132 ಎನ್ ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.4 ಲೀಟರ್ ಡೀಸೆಲ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 68 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.
Image Source: Gaadiwaadi

Click it and Unblock the Notifications








