ಹೊಸ ಟೊಯೊಟಾ ಫಾರ್ಚ್ಯುನರ್‌ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು!
ನೂತನ ಟೊಯೊಟಾ ಫಾರ್ಚ್ಯುನರ್ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಎರಡನೇ ತಲೆಮಾರಿನ ಟೊಯೊಟಾ ಫಾರ್ಚ್ಯುನರ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.92 ಲಕ್ಷ ರು.ಗಳಿಗೆ ಬಿಡುಗಡೆಗೊಂಡಿರುವ ನೂತನ ಫಾರ್ಚ್ಯುನರ್ ತನ್ನ ಪ್ರತಿಸ್ಪರ್ಧಿಗಿಂತಲೂ ದುಬಾರಿಯೆನಿಸಿದರೂ ಬೇಡಿಕೆಗೆ ಮಾತ್ರ ಕಮ್ಮಿಯಾಗಿಲ್ಲ. ಇದರೊಂದಿಗೆ ಕಾಯುವಿಕೆ ಅವಧಿಯು ಎರಡು ತಿಂಗಳುಗಳಿಗೆ ವಿಸ್ತರಿಸಿದೆ.

ನೂತನ ಫಾರ್ಚ್ಯುನರ್ ಬುಕ್ಕಿಂಗ್ ಪ್ರಕ್ರಿಯೆಯು ನವೆಂಬರ್ 07ರಂದು ಅಧಿಕೃತವಾಗಿ ಆರಂಭಗೊಂಡಿತ್ತು. ಇದೀಗ ಬಹುತೇಕ ನಗರಗಳಲ್ಲಿ ಕಾಯುವಿಕೆ ಅವಧಿಯು ಎರಡು ತಿಂಗುಳಿಗಳಿಗೆ ವಿಸ್ತರಿಸಿದೆ.

ಕೇಂದ್ರ ಸರಕಾರ ಹಳೆಯ ನೋಟುಗಳಿಗೆ ನಿಷೇಧ ಹೇರಿರುವುದು ವಾಹನ ಮಾರುಕಟ್ಟೆ ಮೇಲೆ ದೊಡ್ಡ ಹೊಡೆತ ನೀಡಿದರೂ ಸಹ ಟೊಯೊಟಾ ಫಾರ್ಚ್ಯುನರ್ ಬುಕ್ಕಿಂಗ್ ಗೆ ಮಾತ್ರ ಯಾವುಧೇ ದಕ್ಕೆಯುಂಟಾಗಿಲ್ಲ.

ನೂತನ ಟೊಯೊಟಾ ಫಾರ್ಚ್ಯುನರ್ ಕಾರು 2.7 ಲೀಟರ್ ಪೆಟ್ರೋಲ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ.

ಇದರ 2.7 ಲೀಟರ್ ಪೆಟ್ರೋಲ್ ಎಂಜಿನ್ 245 ಎನ್ ಎಂ ತಿರುಗುಬಲದಲ್ಲಿ 166 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅಂತೆಯೇ 2.8 ಲೀಟರ್ ಡೀಸೆಲ್ ಎಂಜಿನ್ 450 ಎನ್ ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿಯನ್ನು ನೀಡಲಿದೆ. ಇದು ಕೂಡಾ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಇನ್ನು ಡೀಸೆಲ್ ಎಂಜಿನ್ ನಲ್ಲಿ ಆಫ್ ರೋಡ್ ಚಾಲನೆಗೆ ಸೂಕ್ತವಾಗಿರುವ ಫೋರ್ ವೀಲ್ ಚಾಲನಾ ವ್ಯವಸ್ಥೆಯು ಲಭ್ಯವಾಗಲಿದೆ. ಇದಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

ಟೊಯೊಟಾ ಫಾರ್ಚ್ಯುನರ್ ಪೆಟ್ರೋಲ್ ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಟು ವೀಲ್ ಡ್ರೈವ್ (ಮ್ಯಾನುವಲ್): 25.92 ಲಕ್ಷ ರು.
ಟು ವೀಲ್ ಡ್ರೈವ್ (ಆಟೋಮ್ಯಾಟಿಕ್): 27.61 ಲಕ್ಷ ರು.

ಟೊಯೊಟಾ ಫಾರ್ಚ್ಯುನರ್ ಡೀಸೆಲ್ (ಎಕ್ಸ್ ಶೋ ರೂಂ ದೆಹಲಿ)
ಟು ವೀಲ್ ಡ್ರೈವ್ (ಮ್ಯಾನುವಲ್): 27.52 ಲಕ್ಷ ರು.
ಟು ವೀಲ್ ಡ್ರೈವ್ (ಆಟೋಮ್ಯಾಟಿಕ್): 29.14 ಲಕ್ಷ ರು.
ಫೋರ್ ವೀಲ್ ಡ್ರೈವ್ (ಮ್ಯಾನುವಲ್): 30.05 ಲಕ್ಷ ರು.
ಫೋರ್ ವೀಲ್ ಡ್ರೈವ್ (ಆಟೋಮ್ಯಾಟಿಕ್): 31.12 ಲಕ್ಷ ರು.

ಪ್ರತಿಸ್ಪರ್ಧಿಗಳು
ಫೋರ್ಡ್ ಎಂಡೀವರ್
ಷೆವರ್ಲೆ ಕಾಪ್ಟಿವಾ
ಮಿಟ್ಸುಬಿಸಿ ಪಜೆರೊ ಸ್ಪೋರ್ಟ್

ಬಣ್ಣಗಳು
ಫಾಟಂ ಬ್ರೌನ್
ಅವಂತ್ ಗಾರ್ಡ್ ಬ್ರಾನ್ಜ್
ಅಟಿಟ್ಯೂಡ್ ಬ್ಲ್ಯಾಕ್
ವೈಟ್ ಪಿಯರ್ಲ್ ಕ್ರೈಸ್ಟಲ್ ಶೈನ್
ಗ್ರೇ ಮೆಟ್ಯಾಲಿಕ್
ಸಿಲ್ವರ್ ಮೆಟ್ಯಾಲಿಕ್
ಸೂಪರ್ ವೈಟ್


Click it and Unblock the Notifications








