ಗ್ರಾಹಕರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹೊಡೆತ
ಕಳೆದ ಮೂರು ತಿಂಗಳುಗಳಿಂದ ಇಳಿಮುಖವಾಗುತ್ತಿದ್ದ ಇಂಧನ ದರಗಳಲ್ಲಿ ಏಕಾಏಕಿ ವರ್ಧನೆಯುಂಟಾಗಿದೆ. ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಗೆ ಪ್ರತಿ ಲೀಟರ್ ಗೆ ಅನುಕ್ರಮವಾಗಿ 3.07 ರು. ಮತ್ತು 1.90 ರುಪಾಯಿ ಹೆಚ್ಚಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಇದರೊಂದಿಗೆ ಇಂಧನ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದೊಡ್ಡ ನೀಡಿದಂತಾಗಿದೆ. ಇನ್ನೊಂದೆಡೆ ಡೀಸೆಲ್ ಬೆಲೆ ಕಳೆದ ಕೆಲವು ಸಮಯಗಳಿಂದ ಏರುತ್ತಲೇ ಇದೆ. ನೂತನ ದರಗಳು ಬುಧವಾರ (2016 ಮಾರ್ಚ್ 16) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಇದಕ್ಕೂ ಮುನ್ನ ಫೆಬ್ರವರಿ 29ರಂದು ಪೆಟ್ರೋಲ್ ಬೆಲೆಯನ್ನು 3.02 ರುಪಾಯಿ ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿಯನ್ನು ನೀಡಿದ್ದ ಕೇಂದ್ರ ಸರಕಾರ 15 ದಿನದೊಳಗೆ ನೀತಿ ಬದಲಾಯಿಸಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅತ್ತ ಡೀಸೆಲ್ ಬೆಲೆ ಫೆ.29ರಂದು 1.47 ರು.ಗಳಷ್ಟು ಹೆಚ್ಚಳ ಗೊಂಡಿತ್ತು.
ತೈಲೋದ್ಯಮ ಮೂಲಗಳ ಪ್ರಕಾರ ಸತತವಾಗಿ ಏಳು ಬಾರಿ ಬೆಲೆ ಇಳಿಕೆಯಾದ ಬಳಿಕ ಮೊದಲ ಬಾರಿಗೆ ಪೆಟ್ರೋಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ಇನ್ನೊಂದೆಡೆ ಡೀಸೆಲ್ ಬೆಲೆಯಲ್ಲಿ ಮೂರನೇ ಬಾರಿಗೂ ಹೆಚ್ಚಳ ಕಂಡಿದೆ.
ಜಾಗತಿಕ ಮಟ್ಟದಲ್ಲಿ ಮತ್ತೆ ತೈಲ ದರ ಏರಿಕೆಯಾಗಿರುವುದು ಇಂಧನ ಬೆಲೆಗಳಲ್ಲಿ ಹೆಚ್ಚಳವುಂಟಾಗಲು ಕಾರಣವಾಗಿದೆ ಎಂದು ತೈಲ ಸಂಸ್ಥೆಗಳು ತಿಳಿಸಿವೆ.


Click it and Unblock the Notifications








