ಹೊಸ ವರ್ಷದ ಕೊಡುಗೆ; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

By Nagaraja

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ದೇಶದ ಜನತೆಗೆ ಕೊಡುಗೆಯನ್ನು ನೀಡಿರುವ ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಇಳಿಕೆಗೊಳಿಸಿದೆ. ಭಾರತೀಯ ತೈಲೋದ್ಯಮವು ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆಯನ್ನು ಹೊರಡಿಸಿದ್ದು, ಪೆಟ್ರೋಲ್ ಹಾಗೂ ಡೀಸೆಲೆ ಬೆಲೆಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 63 ಪೈಸೆ ಹಾಗೂ 1.06 ರು.ಗಳಷ್ಟು ಇಳಿಕೆಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಮೂರನೇ ಬಾರಿಗೆ ಬೆಲೆ ಇಳಿಕೆ ಕಂಡುಬಂದಿದೆ. ಪರಿಷ್ಕೃತ ಬೆಲೆಯು 2016 ಜನವರಿ 01ರಿಂದ ಅನ್ವಯವಾಗಲಿದೆ.

ಇಂಧನ ಬೆಲೆ

ಇದಕ್ಕೂ ಮೊದಲು 2015 ಡಿಸೆಂಬರ್ 01ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಅನುಕ್ರಮವಾಗಿ 58 ಪೈಸೆ ಹಾಗೂ 25ಪೈಸೆಗಳಷ್ಟು ಇಳಿಕೆಯಾಗಿತ್ತು. ತದಾ ಬಳಿಕ ಡಿಸೆಂಬರ್ 16ರಂದು ಪೆಟ್ರೋಲ್ 50 ಪೈಸೆ ಹಾಗೂ ಡೀಸೆಲ್ 46 ಪೈಸೆ ಇಳಿಕೆಗೊಂಡಿತ್ತು.

ಜಾಗತಿಕ ತೈಲ ಬೆಲೆ ಕಳೆದ 11 ತಿಂಗಳಲ್ಲೇ ಕನಿಷ್ಠ ಹಂತಕ್ಕೆ ಬಂದು ತಲುಪಿದೆ. ಇದರ ಪರಿಣಾಮ ಇಂಧನ ಬೆಲೆಗಳ ಗಣನೀಯವಾಗಿ ಇಳಿಕೆಯಾಗುವ ಸಂಭವವಿತ್ತು. ಆದರೆ ಕೇಂದ್ರ ಸರಕಾರವು ಅಬಕಾರಿ ಸುಂಕವನ್ನು ಹೆಚ್ಚಿಸಿರುವುದರಿಂದ ಬೆಲೆ ಇಳಿಕೆ ಪ್ರಮಾಣದಲ್ಲಿ ದೊಡ್ಡ ಬದಲಾವಣೆಗಳು ಕಂಡುಬಂದಿಲ್ಲ.

More from DriveSpark

Article Published On: Friday, January 1, 2016, 12:21 [IST]
English summary
Fuel Price: Petrol Cheaper By 63 paisa/litre, Diesel By Rs. 1.06/litre
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+