ಪೆಟ್ರೋಲ್ ಮತ್ತೆ ತುಟ್ಟಿ; ಡೀಸೆಲ್ ಬೆಲೆ ಕೊಂಚ ಇಳಿಕೆ
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬದಲಾವಣೆಯಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯನ್ನು ಏರಿಕೆಗೊಳಿಸಲು ತೈಲೋದ್ಯಮ ಸಂಸ್ಥೆಗಳು ನಿರ್ಧರಿಸಿದೆ. ಅದೇ ಹೊತ್ತಿಗೆ ಡೀಸೆಲೆ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.
- ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಏರಿಕೆ
- ಡೀಸೆಲ್ ಬೆಲೆಯಲ್ಲಿ 7 ಪೈಸೆ ಇಳಿಕೆ
ಇಂದಿನಿಂದಲೇ ನೂತನ ಬೆಲೆ ಜಾರಿಗೆ ಬಂದಿದ್ದು, ಪರಿಷ್ಕೃತ ಬೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 64.21 ರು.ಗಳಿಂದ 64.57 ರು.ಗಳಿಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಬೆಲೆ 52.59 ರು.ಗಳಿಂದ 52.52 ರು.ಗಳಿಗೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ
ಪೆಟ್ರೋಲ್ ಬೆಲೆ 69.21 ರು.
ಡೀಸೆಲ್ ಬೆಲೆ 56.91 ರು.
ಕಳೆದೆರಡು ತಿಂಗಳಲ್ಲಿ ಇದು ಮೂರನೇ ಬಾರಿಗೆ ಪೆಟ್ರೋಲ್ ದರದಲ್ಲಿ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಕಳೆದೊಂದು ತಿಂಗಳಲ್ಲಿ ಎರಡನೇ ಬಾರಿಗೆ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದೇಶದ ಅತಿ ದೊಡ್ಡ ಇಂಧನ ಸಂಸ್ಥೆಯಾಗಿರುವ ಭಾರತೀಯ ತೈಲ ಕಾರ್ಪ್ (ಐಒಸಿ), ರಾಜ್ಯ ತೆರಿಗೆ ಹೊರತುಪಡಿಸಿ ಪೆಟ್ರೋಲ್ ಗೆ 28 ಪೈಸೆ ಹಾಗೂ ಡೀಸೆಲ್ ಗೆ ಆರು ಪೈಸೆ ಏರಿಕೆಗೊಳಿಸಲಾಗಿದೆ ಎಂದಿದೆ.


Click it and Unblock the Notifications








