2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

By Nagaraja

ಫ್ರಾನ್ಸ್ ನಲ್ಲಿ ಸಾಗುತ್ತಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಜರ್ಮನಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಪೋರ್ಷೆ, ಅತಿ ನೂತನ 2017 911 ಜಿಟಿ3 ರೇಸಿಂಗ್ ಕಾರನ್ನು ಬಿಡುಗಡೆಗೊಳಿಸಿದೆ. ಅತ್ಯಂತ ಶಕ್ತಿಶಾಲಿ 4.0 ಲೀಟರ್ ಎಂಜಿನ್ ಪಡೆದಿರುವ ನೂತನ ಪೋರ್ಷೆ 911 ಜಿಟಿ3 ಕಪ್ ರೇಸರ್ ಕಾರು ಮುಂದಿನ ವರ್ಷ ನಡೆಯಲಿರುವ ಫಾರ್ಮುಲಾ 1 ಸಪೋರ್ಟ್ ಸೀರಿಸ್ ನಲ್ಲಿ ಪಾದಾರ್ಪಣೆಗೈಯಲಿದೆ.

ಪರಿಷ್ಕೃತ 991 ಜನರೇಷನ್ 911 ತಳಹದಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ಜಿಟಿ3 ಆರ್ ಎಸ್ ಮಾದರಿಯಲ್ಲಿರುವುದಕ್ಕೆ ಸಮಾನವಾದ 4.0 ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಆಳವಡಿಸಲಾಗಿದೆ. ಇದು ಬರೋಬ್ಬರಿ 478 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

ನೂತನ ಕಾರಿನ ನಿರ್ವಹಣೆ ವೆಚ್ಚದಲ್ಲಿ ಕಡಿಮ ಮಾಡುವಲ್ಲಿ ಪೋರ್ಷೆ ಯಶ ಕಂಡಿದೆ. ಅಲ್ಲದೆ ಅತ್ಯುತ್ತಮ ಸ್ಥಿರತೆಯನ್ನು ಕಾಪಾಡಿಕೊಂಡಿದೆ.

2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

18 ಇಂಚುಗಳ ರೇಸಿಂಗ್ ಚಕ್ರಗಳು ಜೋಡಣೆ ಮಾಡಲಾಗಿದೆ. ಒಟ್ಟಾರೆ ಭಾರ 1200 ಕೆ.ಜಿ ಇರಲಿದ್ದು, ಜಿಟಿ3 ಆರ್ ಎಸ್ ಗಿಂತಲೂ 295 ಕೆ.ಜಿ ಗಳಷ್ಟು ಹಗುರ ಭಾರವಾಗಿರಲಿದೆ.

2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

2017ರಲ್ಲಿ ನಡೆಯಲಿರುವ ಫಾರ್ಮುಲಾ ಒನ್ ಸಪೋರ್ಟ್ ಸಿರೀಸ್ ಆಗಿರುವ ಮೊಬೈಲ್ 1 ಸೂಪರ್ ಕಪ್ ನಲ್ಲಿ ಪೋರ್ಷೆ ರೇಸ್ ಕಾರು ಭಾಗವಹಿಸಲಿದೆ. ತದಾ ಬಳಿಕ ಜರ್ಮನ್ ಮತ್ತು ಉತ್ತರ ಅಮೆರಿಕನ್ ಪೋರ್ಷೆ ಕರೆರಾ ಕಪ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದೆ.

2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

ಹಿಂದುಗಡೆ 184 ಸೆಂಟಿಮೀಟರ್ ಅಗಲವಾದ ರಿಯರ್ ವಿಂಗ್ ಲಗತ್ತಿಸಲಾಗಿದೆ. ಅಲ್ಲದೆ ಏರೋಡೈನಾಮಿಕ್ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

2017 ಪೋರ್ಷೆ 911 ಜಿಟಿ3 ರೇಸಿಂಗ್ ಕಾರು ಬಿಡುಗಡೆ

ನಾವೀನ್ಯ ಸುರಕ್ಷಾ ತಂತ್ರಗಾರಿಕೆಗಳನ್ನು ಆಳವಡಿಸಲಾಗಿದೆ. ಬಕೆಟ್ ಶೈಲಿಯ ರೇಸಿಂಗ್ ಸೀಟು, ರಕ್ಷಣಾ ರೂಫ್ ಹಾಗೂ ತಾಜಾ ಎಫ್ ಐಎ ಸ್ಟ್ಯಾಂಡರ್ಡ್ ಕಾಪಾಡಿಕೊಳ್ಳಲಾಗಿದೆ.

More from DriveSpark

Article Published On: Friday, September 30, 2016, 9:43 [IST]
English summary
2016 Paris Motor Show: 2017 Porsche 911 GT3 Cup Launched In Paris
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+