ನಮ್ಮ ಬೆಂಗಳೂರಿನಲ್ಲಿ ಮಹೀಂದ್ರ ಪರಿಷ್ಕೃತ ಎಲೆಕ್ಟ್ರಿಕ್ ಕಾರು
ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ರೇವಾ (ಈಗ ಮಹೀಂದ್ರ ಎಲೆಕ್ಟ್ರಿಕ್ ಎಂದು ಗುರುತಿಸಿಕೊಂಡಿದೆ) ತನ್ನ ಜನಪ್ರಿಯ ಇ2ಒ ವಿದ್ಯುತ್ ಚಾಲಿತ ಕಾರಿನ ಪರಿಷ್ಕೃತ ಆವೃತ್ತಿಯ ಪರೀಕ್ಷಾರ್ಥ ಚಾಲನೆಯನ್ನು ನಮ್ಮ ಬೆಂಗಳೂರಿನಲ್ಲಿ ಭರದಿಂದ ನಡೆಸುತ್ತಿದೆ.
ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ರಹಸ್ಯ ಚಿತ್ರಗಳ ಪ್ರಕಾರ, ಪರಿಷ್ಕೃತ ಇ2ಒ ಮುಂಭಾಗದಲ್ಲಿ ಸಣ್ಣದಾದ ಫ್ರಂಟ್ ಗ್ರಿಲ್ ಕಂಡುಬಂದಿದ್ದು, ಕ್ರೋಮ್ ನಿಂದ ಸುತ್ತುವರಿಯಲ್ಪಟ್ಟಿದೆ.

ಮಹೀಂದ್ರ ಇ2ಒ ವಿದ್ಯುತ್ ಚಾಲಿತ ಕಾರು ಸಂಪೂರ್ಣವಾಗಿ ಮರೆ ಮಾಚಲಾಗಿದೆ. ಹಾಗಿದ್ದರೂ ನೇರಳೆ ಬಣ್ಣದಿಂದ ಕಂಗೊಳಿಸುವುದನ್ನು ಕಾಣಬಹುದಾಗಿದೆ.

ಹಿಂದಿನಗಿಂತಲೂ ದೊಡ್ಡಾದಾದ ದೇಹ ರಚನೆಯನ್ನು ಪಡೆದಿರುವ ಪರಿಷ್ಕೃತ ಇ2ಒದಲ್ಲಿ ನಾಲ್ಕು ಡೋರ್ ಗಳನ್ನು ಲಗತ್ತಿಸಲಾಗಿದೆ. ತನ್ಮೂಲಕ ಹೆಚ್ಚೆಚ್ಚು ಫ್ಯಾಮಿಲಿ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗಿದೆ.

ಈಗ ಮಾರಾಟದಲ್ಲಿರುವ ಎರಡು ಬಾಗಿಲುಗಳ ಇ2ಒ ಕಾರಿನಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಸಿ, ಸ್ಮಾರ್ಟ್ ಫೋನ್ ಸಂಪರ್ಕ ಹೀಗೆ ಹತ್ತಾರು ವೈಶಿಷ್ಟ್ಯಗಳು ಪರಿಷ್ಕೃತ ಆವೃತ್ತಿಯಲ್ಲಿಯೂ ಇರಲಿದೆ.

ವರ್ಷಾಂತ್ಯದಲ್ಲಿ ಬಿಡುಗಡೆ ನಿರೀಕ್ಷೆ ಹೊಂದಿರುವ ಹೊಸ ಮಹೀಂದ್ರ ಇ2ಒ ಕಾರಿನಲ್ಲಿ 53 ಎನ್ ಎಂ ತಿರುಗುಬಲದಲ್ಲಿ 19 ಕೆಡ್ಬ್ಲ್ಯು (25.5 ಅಶ್ವಶಕ್ತಿ) ಉತ್ಪಾದಿಸಬಲ್ಲ ತ್ರಿ ಫೇಸ್ ಇಂಡಕ್ಷನ್ ಮೋಟಾರು ಲಗತ್ತಿಸಲಾಗಿದೆ.


Click it and Unblock the Notifications








