ಮುಂದಿನ ವರ್ಷ ಹೊಸ ಇಕೊಸ್ಪೋರ್ಟ್ ಬಿಡುಗಡೆ
ತನ್ನ ಶ್ರೇಣಿಯ ವಾಹನಗಳಿಗೆ ತಾಜಾತನ ತುಂಬುವ ಇರಾದೆಯಲ್ಲಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಮುಂದಿನ ವರ್ಷ ಪರಿಷ್ಕೃತ ಇಕೊಸ್ಪೋರ್ಟ್ ಕಾರನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಬಳಕೆಯಾಗಲಿದೆ ಎಂಬುದು ಗಮನಾರ್ಹ.
ಸದ್ಯ ಹೊಸ ಇಕೊಸ್ಪೋರ್ಟ್ ಕಾರಿನ ಪರೀಕ್ಷಾರ್ಥ ಸಂಚಾರ ಪರೀಕ್ಷೆಯು ತವರೂರಾದ ಅಮೆರಿಕದಲ್ಲಿ ನಡೆಯುತ್ತಿದೆ. ಅಲ್ಲದೆ ತನ್ನ ಜಾಗತಿಕ ಮಾರಾಟ ಯೋಜನೆಯ ಭಾಗವಾಗಿ ಭವಿಷ್ಯದಲ್ಲಿ ಭಾರತವನ್ನು ತಲುಪಲಿದೆ.

ಮುಂಭಾಗದಲ್ಲಿ ಪರಿಷ್ಕೃತ ಹೆಡ್ ಲ್ಯಾಂಪ್ ಮತ್ತು ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಗಳು ಕಂಡುಬರಲಿದೆ. ಹೆಕ್ಸಾಗನಲ್ ಗ್ರಿಲ್, ಪರಿಷ್ಕೃತ ಬಂಪರ್ ಜೊತೆ ಹೊಸ ಅಲಾಯ್ ವೀಲ್ ಸಹ ಕಂಡುಬರಲಿದೆ.

ಅದೇ ರೀತಿ ಕಾರಿನೊಳಗೆ ಪರಿಷ್ಕೃತ ಡ್ಯಾಶ್ ಬೋರ್ಡ್, ಸೆಂಟ್ರಲ್ ಕನ್ಸೋಲ್, ಹೊಸ ಸ್ಟೀರಿಂಗ್ ವೀಲ್, ಸಿಂಕ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಹೊಸ ಬಣ್ಣಗಳ ಆಯ್ಕೆಯೂ ಇರುತ್ತದೆ.

ಭಾರತದಲ್ಲಿ 2013ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಫೋರ್ಡ್ ಇಕೊಸ್ಪೋರ್ಟ್ ಪ್ರಮುಖವಾಗಿಯೂ ರೆನೊ ಡಸ್ಟರ್, ಮಹೀಂದ್ರ ಟಿಯುವಿ300, ಮಾರುತಿ ಸುಜುಕಿ ಬ್ರಿಝಾ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡುತ್ತಿದೆ.

ಭಾರತದ ಚೆನ್ನೈಯಲ್ಲಿರುವ ರಫ್ತು ಘಟಕವನ್ನು ರೊಮನಿಯಾ ದೇಶಕ್ಕೆ ಸ್ಥಳಾಂತರಿಸುವ ಇರಾದೆಯನ್ನು ಫೋರ್ಡ್ ಹೊಂದಿದೆ. ಈ ನಿಟ್ಟಿನಲ್ಲಿ ರೊಮಾನಿಯಾ ಘಟಕಕ್ಕೆ ಬರೋಬ್ಬರಿ 1,530 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ.

ಒಟ್ಟಿನಲ್ಲಿ ಭಾರತದಲ್ಲಿ ಉಪಯುಕ್ತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆಯೇ ನೂತನ ಫೋರ್ಡ್ ಇಕೊಸ್ಪೋರ್ಟ್ ಮತ್ತಷ್ಟು ತಾಜಾತನ ಕಾಪಾಡಿಕೊಳ್ಳುವುದರೊಂದಿಗೆ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಲಿದೆ.


Click it and Unblock the Notifications